ಅಧಿಕಾರಿಗಳ ಗೊಂದಲಕ್ಕೆ ಬಲಿಯಾದ್ಲಾ ವೈದ್ಯೆ ಸಮೀಕ್ಷ?Did Dr Samiksha fall victim to the confusion of the authorities?

 SUDDILIVE || SHIVAMOGGA

ಅಧಿಕಾರಿಗಳ ಗೊಂದಲಕ್ಕೆ ಬಲಿಯಾದ್ಲಾ ವೈದ್ಯೆ ಸಮೀಕ್ಷ?Did Dr Samiksha fall victim to the confusion of the authorities?       

Samiksha, victim


ಎಲ್ಲಾ ಸರಿಯಿದ್ದರೆ ಹಗ್ಗ ಹಗ್ಗವಾಗಿಯೇ ಇರುತ್ತೆ. ಸಮಯ ಕೆಟ್ಟರೆ ಹಗ್ಗವೂ ಹಾವಾಗಿ ಕಾಡತ್ತೆ ಎಂಬುದಕ್ಕೆ ಪ್ರಸ್ತುತ ಲಯನ್ ಸಫಾರಿಯಲ್ಲಿನ ಪರಿಸ್ಥಿತಿಯಾಗಿದೆ. ಸಫಾರಿಯ ಅಧಿಕಾರಿಗಳು ಮತ್ತು ಅವರ ಕೆಳಗಿನ ಅಧಿಕಾರಿಗಳ ನಡುವಿನ ಮುಸುಕಿನ‌ಗುದ್ದಾಟ ಡಾ.ಸಮೀಕ್ಷ ರೆಡ್ಡಿಯ ಸಾವಿನೊಂದಿಗೆ ಬಹಿರಂಗ ವಾಗುತ್ತಿದೆ. 

ಇಂದು ಸಫಾರಿಯ ಇಡಿ ಮತ್ತು ವೈದ್ಯಾಧಿಕಾರಿಗಳು ಮಾಧ್ಯಮಕ್ಕೆ ನೀಡಿರುವ ಹೇಳಿಕೆಗಳು ಈ ಮುಸುಕಿನ‌ಗುದ್ದಾಟವನ್ನ ಬಹಿರಂಗಗೊಳಿಸುತ್ತವೆ. ವೈದ್ಯ ಮುರುಳಿಯವರ ರಾಜೀನಾಮೆ ನೀಡಿದರೂ ಅದನ್ನ ಸ್ವೀಕರಿಸಿಲ್ಲ ಎಂದು ಸಫಾರಿಯ ಇಡಿ ಡಾ.ಅಮರಾಕ್ಷರ್ ತಿಳಿಸಿದ್ದಾರೆ. ವೈದ್ಯಾಧಿಕಾರಿ ಡಾ. ಮುರುಳಿ ಅವರ ರಾಜೀನಾಮೆ ಸ್ವೀಕರಿಸಿಲ್ಲ ಎಂದಾದರೆ  ಅವರನ್ನ‌ ಮುಂದುವರೆಸುವ ಆದೇಶವೂ ಹೊರಬಿದ್ದಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ. 

ಇದನ್ನ ಹೊರತು ಪಡಿಸಿದರೆ ಇಡಿ ನಾನು ತರಬೇತುದಾರರಿಗೆ ನಿರ್ದೇಶನ ನೀಡಲ್ಲ. ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ ಎಂದು ಹೇಳುವ ಮೂಲಕ ಮತ್ತೊಂದು ಗೊಂದಲಕ್ಕೆ ಎಳೆದಿದ್ದಾರೆ. ರಾಜೀನಾಮೆ ನೀಡಿದರೂ ವೈದ್ಯರನ್ನ ಮುಂದುವರೆಸುವುದಾಗಲಿ ಅಥವಾ ರಿಲೀವ್ ಮಾಡುವುದಾಗಿ ಮಾಡದೆ ವೈದ್ಯಾಧಿಕಾರಿಗೆ ನಿರ್ದೇಶನ ನೀಡುವುದಾಗಿ ಹೇಳುವ ಮೂಲಕ ಗೊಂದಲ ಸೃಷ್ಠಿಸಿದ್ದಾರೆ. 

ಹೋಗಲಿ ವೈದ್ಯ ಡಾ. ಮುರುಳಿ ರಾಜೀನಾಮೆ ನೀಡಿದ ಮೇಲೆ ಇಡಿಯ ಆದೇಶವನ್ನ ಮೌಖಿಕವಾಗಿ ಪಾಲಿಸುತ್ತಾ ಬಂದಿದ್ದು ಯಾಕೆ? ಹಾಗೂ ರಾಜೀನಾಮೆ ನೀಡಿದ ಮೇಲೆ ಸರ್ಕಾರದ ವೇತನವನ್ನೂ ಪಡೆದುಕೊಳ್ಫುವುದು ಎಷ್ಟು ಸರಿಯಾಗುತ್ತದೆ ಎಂಬ ಪ್ರಶ್ನೆ, ಇಲ್ಲಿನ ಅಧಿಕಾರಿಗಳು ಮತ್ತು ಕೆಳಗಿನ ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ. 

ಇದರ ಜೊತೆಗೆ ಮಾ.19 ರಂದು 8-30 ರ ಸಮಯದಲ್ಲಿ ಪಿಜಿಯಿಂದ ಸಫಾರಿಗೆ ಪಕ್ಷಿಗೆ ಇಂಜೆಕ್ಷನ್ ಕೊಡಲು ಬಂದ ವೈದ್ಯೆ ಸಮೀಕ್ಷ ರೆಡ್ಡಿ 11-30 ರವರೆಗೆ ಅಲ್ಲೇ ಉಳಿದಿದ್ದರಾ? ಅಥವಾ ಅವರನ್ನ ಕರೆತರಲಾಗಿತ್ತಾ? ವೈದ್ಯೆ ಯಾರ ಆದೇಶದ ಮೇರೆಗೆ ಕರೆತರಲಾಗಿತ್ತು ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಇವೆಲ್ಲದರ ಪ್ರಶ್ನೆಯ ನಡುವೆ ನೀರು ಕುದುರೆ ಗೇಜ್ ನಲ್ಲಿ ಎಸ್ ಒಪಿ ಗಳು ಇಲ್ಲದೆ ಇಳಿಯಲು ಸಹಕಾರಿಯಾದ ವಾಹನ ಚಾಲಕ ಮತ್ತೋರ್ವ ಸಹಾಯಕ ತನ್ನ‌ ಮೇಲಧಿಕಾರಿಗೆ ತಿಳಿಸಲಿಲ್ಲವಾ? ತಿಳಿಸಿದರೂ ಅಧಿಕಾರಿಗಳು ಮೌನವಾದರಾ? ಜೀವ ಹೋದ ಮೇಲೆ ಎಸ್ ಒಪಿಯ ಬಗ್ಗೆ ಮಾತನಾಡುವ ಅಧಿಕಾರಿಗಳು ವೈದ್ಯೆ ಬದುಕಿದ್ದಾಗ ಫಾಲೋ ಮಾಡಲಿಲ್ಲ ಎಂಬ ಪ್ರಶ್ನೆಗಳು ಹಾಗೆ ಉಳಿದಿದೆ.

ಅವೆಲ್ಲದರ ನಡುವೆ ತುಂಗನಗರದಲ್ಲಿ ಅಸ್ವಭಾವಿಕ ಸಾವು ಎಂದು ದೂರು ದಾಖಲಾಗಿದೆ. ಎಸ್ ಒಪಿಗಳ ಉಲ್ಲಂಘನೆಯಾಗಿರುವ ಬಗ್ಗೆ ಆಕ್ಷೇಪಿಸಲಾಗಿದೆ. ತನಿಖೆಯ ನಂತರ ಅದು ಎಫ್ಐಆರ್ ಆಗುವ ಸಾಧ್ಯತೆಯಿದೆ. ಒಂದು ವೇಳೆ ತನಿಖೆಯಲ್ಲಿ ಅಧಿಕಾರಿಗಳ ತಪ್ಪು ಕಾಣೆ ವೈದ್ಯೆಯೇ ಸ್ವಿಚ್ಛೆಯಿಂದ ನೀರು ಕುದುರೆಯ ಕೇಜ್ ಗೆ ಹೋಗಿದ್ದಾಳೆ ಎಂದಾದರೆ ಅದು ಕೇಸ್ ಡಮಾರ್ ಎನ್ನುತ್ತದೆ.

ಇನ್ನು ಅಧಿಕಾರಿಗಳ ಅರಣ್ಯ ತನಿಖೆ ಮದುವರೆಯಲಿದೆ. ಅದು ಹೇಗೆ ನಡೆಯುತ್ತದೆ ಕಾದು ನೋಡಬೇಕಿದೆ. ಒಟ್ಟಿನಲ್ಲಿ ನೀರು ಕುದುರೆ ಕೇಜ್ ಗೆ ಹೋಗಲು ಅನುಮತಿಯಿಲ್ಲದಿದ್ದರೂ ಎಸ್ ಒಪಿಗಳನ್ನ ದಾಟಿ ವೈದ್ಯೆ ಒಬ್ಬಳೇ ಸ್ವ ಇಚ್ಚೆಯಿಂದ ಹೋಗಿದ್ದಾಳೆ ಎಂದು ವರದಿ ಬಂದರೂ ಅಚ್ಚರಿಯಿಲ್ಲ. ಹೀಗೆ ವರದಿ ಬಂದರೆ ಇಡಿ, ವೈದ್ಯಾಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ಅಂತ್ಯಕಾಣೋದು ಡೌಟೇ? ಪ್ರಶ್ನೆಗಳು ಹಾಗೆ ಮುಚ್ಚಿಹೋಗಲಿದೆ. ಒಟ್ಟಿನಲ್ಲಿ ಜೀವ ಹೋಗಿದ್ದು ಹೋಯಿತು ಎಂಬಂತಾಗುವ ಸಾಧ್ಯತೆಯೂ ಇದೆ. 

ಸಕ್ಕರೆ ಬೈಲಿನ ಆನೆ ಬಾಲಣ್ಣನಿಗೆ ದಸರಾಕ್ಕಾಗಿ ಕರೆತಂದು ಆತನ ಜೀವಕ್ಕೆ ಕುತ್ತು ತರುವ ಪ್ರಕರಣ ಇನ್ನೂ ಜೀವಂತವಾಗಿರುವ ನುಡುವೆಯೇ ವೈದ್ಯೆಯ ಸಾವು ಶಿವಮೊಗ್ಗದ ಅರಣ್ಯ ಇಲಾಖೆಯಲ್ಲಿ ಏನೂ ಸರಿಯಿಲ್ಲ ಎಂಬುದನ್ನ‌ಸಾಬೀತು ಪಡಿಸುತ್ತದೆ. ಆದರೂ ಎಲ್ಲವೂ ಸರಿಯಿದೆ ಎಂದು ಅಧಿಕಾರಿಗಳು ಮೈಕೊಡವಿಕೊಂಡು ಓಡಾಡುತ್ತಿದ್ದಾರೆ. ಯಾವುದನ್ನೂ ಸರಿಪಡಿಸದ ಸರ್ಕಾರ ಮೊದಲು ಸಕ್ರೆಬೈಲು ಮತ್ತು ಲಯನ್ ಸಫಾರಿಯನ್ನ ಬಂದ್ ಮಾಡಲಿ ಅಮಾಯಕರ ಸಾವಿಗೆ ಬ್ರೇಕ್ ಹಾಕಲಿ. ತದನಂತರ  ಬಾಗಿಲು ತೆಗೆಯಲಿ...

Did Dr Samiksha fall victim to the confusion of the authorities?  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close