SUDDILIVE || SHIVAMOGGA
ಪತ್ರಕರ್ತರ ಪ್ರಶ್ನೆಗೆ ಪತರುಗುಟ್ಟಿದ ಝೂ ಪ್ರಾಧಿಕಾರದ ಅಧ್ಯಕ್ಷ- Zoo Authority Chairman flustered by journalist's question
ಶಿವಮೊಗ್ಗದ ಲಯನ್ಸಫಾರಿಯಲ್ಲಿ ಡಾಕ್ಟರ್ ಸಮೀಕ್ಷಾ ರೆಡ್ಡಿ ನೀರು ಕುದುರಿಗೆ ಬಲಿಯಾದ ಬೆನ್ನಲ್ಲೇ ಇಂದು ಝೂ ಪ್ರಾಧಿಕಾರದ ಅಧ್ಯಕ್ಷ ರಂಗನಾಥ ಹಾಡ್ಯ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ನಂತರ ಪತ್ರಕರ್ತರ ಪ್ರಶ್ನೆಗೆ ಪತರು ಕುಟ್ಟಿ ಹೋಗಿರುವ ಘಟನೆಯು ನಡೆದಿದೆ.
ಇದೊಂದು ದುರಂತ ಎಂದು ಮಾಧ್ಯಮದೊಂದಿಗೆ ಮಾತನ್ನು ಆರಂಭಿಸಿದ ಅಧ್ಯಕ್ಷರು ಮೃತರ ಕುಟುಂಬಕ್ಕೆ ದುಃಖ ಭರಿಸಲು ಸಾಧ್ಯವಾಗುವುದಿಲ್ಲ ಪುತ್ರಶೋಕ ನಿರಂತರ ಎಂದ ಹಾಗೆ ಮೃತರ ಕುಟುಂಬಕ್ಕೆ ತಗುಲಿದೆ ನಮ್ಮ ಜೂಗೆ ಬಂದು ಪ್ರಾಣ ಕಳೆದುಕೊಳ್ಳುವ ಸನ್ನಿವೇಶ ಉಂಟಾಗಿದೆ ಎಂದು ತಿಳಿಸಿದರು
ಪೊಲೀಸ್ ತನಿಖೆ ಹಾಗೂ ಇಲಾಖೆ ಆರಂಭವಾಗಿದೆ, ಇತ್ತೀಚೆಗೆ ಕೆಲಸಕ್ಕೆ ಸೇರಿದ ಡಾ. ಸಮೀಕ್ಷಾ ರೆಡ್ಡಿ ಜುನಲ್ಲಿರುವ ಪ್ರಾಣಿಗಳ ಬಗ್ಗೆ ಅತಿಯಾದ ಪ್ರೀತಿಯಿಂದಾಗಿ ಅವಳ ಪ್ರಾಣಕ್ಕೆ ಕುಂದು ಉಂಟಾಗಿದೆ ವರದಿ ಬರಲಿ ತಪ್ಪಿತಸ್ಥರು ಏನೇ ಆದರೂ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇಬ್ಬರು ಸಿಬ್ಬಂದಿಗಳೊಂದಿಗೆ ಬಂದಿದ್ದ ಸಮೀಕ್ಷಾ ರೆಡ್ಡಿ ನೀರು ಕುದುರೆ ಚಿಕಿತ್ಸೆಗೆ ಮುಂದಾಗಿದ್ದರು ಅವರು ನೀರು ಕುದುರೆ ಕೆರೆಯಲ್ಲಿ ಇಳಿದುಕೊಂಡಾಗ ಹೆಣ್ಣು ನೀರು ಕುದುರೆ ಹಂಸ ಸಿಟ್ಟಿಗೆದ್ದಿದೆ ಕಾರಣ ಅದು ಗರ್ಭಿಣಿಯಾಗಿತ್ತು ಗರ್ಭಿಣಿಯಾಗಿದ್ದಾಗ ಅದು ಊಟ ತಿಂಡಿ ಎಲ್ಲವೂ ಬಿಟ್ಟಿರುತ್ತದೆ ಇವರನ್ನು ನೋಡಿ ಅದು ರೊಚ್ಚಿಗೆದ್ದಿದೆ ಅಟ್ಟಿಸಿಕೊಂಡ ನೀರು ಕುದುರೆಯದ ತಪ್ಪಿಸಿಕೊಳ್ಳಲು ಹೋಗಿದ್ದ ವೈದ್ಯೆ ಏಣಿಯಿಂದ ಜಾರಿ ಕೆಳಗೆ ಬಿದ್ದಿದ್ದಾರೆ ಈ ಸಮಯದಲ್ಲಿ ನೀರು ಕುದುರೆ ಅವರನ್ನು ಕಟ್ಟಿ ಸಾಯಿಸಿದೆ ಈ ಘಟನೆ ಇಲ್ಲಿಗೆ ಬಂದಾಗ ನನಗೆ ವಿಷಯ ತಿಳಿದಿದೆ ಎಂದರು.
ಲಯನ್ ಸಫಾರಿಯಲ್ಲಿ ಇರುವ ಪ್ರಾಣಿಗಳ ಮೇಲೆ ಅದರಲ್ಲೂ ವಿಶೇಷವಾಗಿ ನೀರು ಕುದುರೆಯ ಮೇಲಿನ ಪ್ರೀತಿಯಿಂದಾಗಿ ನೀರು ಕುದುರೆ ಕೇಜಿನೊಳಗೆ ಪ್ರವೇಶಿಸಿದರೋ ಏನೋ ಎನ್ನುವ ಹತ್ತಿನಲ್ಲಿ ಪತ್ರಕರ್ತರು ಪ್ರಶ್ನೆಗಳೊಂದಿಗೆ ಅವರಿಗೆ ಮುಗಿಬಿದ್ದಿದ್ದಾರೆ. ಈ ಪ್ರಶ್ನೆ ತಮಗೆ ಸೂಕ್ತವಾದದ್ದಲ್ಲ ಎಂಬ ಆಕ್ಷೇಪಣೆಯೊಂದಿಗೆ ಪತ್ರಕರ್ತರು ಪ್ರಶ್ನೆಯನ್ನು ಮುಂದೆ ಇಟ್ಟಿದ್ದಾರೆ. ಮೃಗಾಲಯದಲ್ಲಿ ರಾತ್ರಿ ಹೊತ್ತು ಪ್ರಾಣಿಗಳ ಕೇಜ್ ಪ್ರವೇಶಿಸಲು ಎಸ್ಓಪಿಗಳ ಉಲ್ಲಂಘನೆ ಆಗಿಲ್ಲವಾಯಿತು ಪತ್ರಕರ್ತರು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.
ಇದಕ್ಕೆ ಉತ್ತರಿಸುವಲ್ಲಿ ರಂಗನಾಥ್ ಹಾಡ್ಯ ತತ್ತರಿಸಿ ಹೋಗಿದ್ದಾರೆ. ನನಗೆ ನಿನ್ನೆ ಮಾಹಿತಿ ತಿಳಿಯಿತು. ನಾನು ಡಾ.ಸಮೀಕ್ಣಾ ರೆಡ್ಡಿರವರ ಅಂತಿಮ ನಮನ ಸಲ್ಲಿಸಿ ಬಂದಿದ್ದೇನೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಬೇಕಿದೆ. ಅವರಿಗೆ ಒಬ್ಬಳೆ ಮಗಳು. ಮಗಳನ್ನು ಕಳೆದು ಕೊಂಡ ಅವರು ಸಾಕಷ್ಟು ದುಃಖ ಹೊಂದಿದ್ದಾರೆ.
ಅವರು ಆ ಹೂತ್ತಿನಲ್ಲಿ ಇಲ್ಲಿ ಯಾಕೆ ಬಂದಿದ್ದರು. ಒಬ್ಬರು ಇಲ್ಲಿ ಬಂದಿದ್ದು ಎಂಬುದರ ತನಿಖೆಯಿಂದ ಹೊರ ಬರಬೇಕಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.ಇಂದು ನಾನು ಇಲ್ಲಿ ಬಂದು ಸ್ಥಳವನ್ನು ನೋಡಿದ್ದೆನೆ. ಅವರು ಏಣಿ ಯಿಂದ ಹತ್ತಿ ಬಂದಾಗ ಇಲ್ಲಿ ಘಟನೆ ನಡೆದಿದೆ. ಇಲ್ಲಿ ಅವರು ಅತಿಯಾದ ಪ್ರಾಣಿ ಪ್ರೀತಿಯಿಂದ ಅವರು ನೀರು ಕುದುರೆ ಹಂಸ ಬಳಿ ಬಂದಿದ್ದಾರೆ. ಇಲ್ಲಿ ಅವರು ಯಾರ ಜೊತೆ ಬಂದಿದ್ದರು ಎಂಬುದರ ಕುರಿತು ತನಿಖೆಯಿಂದ ಹೊರ ಬರುತ್ತದೆ.
ನಮ್ಮ ಮೃಗಾಲಯದಲ್ಲಿ ಪಶು ವೈದ್ಯರ ಕೊರತೆ ಇದೆ. ಇಲ್ಲಿ ಎಲ್ಲಾ ಕಡೆ ಈಗ ಪಶು ವೈದ್ಯರನ್ನು ತೆಗೆದುಕೊಳ್ಳಬೇಕಿದೆ. ಹಿಂದಿನ ವೈದ್ಯಾಧಿಕಾರಿ ಡಾ.ಮುರುಳಿ ಮನೋಹರ್ ರವರು ರಾಜೀನಾಮೆ ನೀಡಿ ನಾಲ್ಕು ತಿಂಗಳು ನಡೆದಿದೆ. ಇದುವರೆಗೂ ಹೊಸ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕಿದೆ. ಈ ಕುರಿತು ನನ್ನ ಗಮನಕ್ಕೆ ಈಗ ಬಂದಿದೆ. ಸರ್ಕಾರ ಅರಣ್ಯ ಇಲಾಖೆಯ ಸಮಿತಿ ರಚನೆ ಮಾಡಿದೆ. ಇದು ಏಳು ದಿನಗಳ ಒಳಗೆ ವರದಿ ನೀಡಬೇಕಿದೆ. ಅಲ್ಲದೆ ಪೊಲೀಸರ ತನಿಖೆ ಸಹ ನಡೆಸುತ್ತಿದೆ. ಇದರಿಂದ ಸತ್ಯಾಂಶ ಹೊರಬರಲಿದೆ ಎಂದರು.
ಇಲ್ಲಿ ಇಡಿ ಅಥವಾ ಆರ್ ಎಫ್ ಓ ರವರ ಯಾರ ತಪ್ಪು ಇದೆ ಎಂದು ತನಿಖೆಯಿಂದ ಹೊರ ಬರುತ್ತದೆ. ಇಲ್ಲಿ ಅಧಿಕಾರಿಗಳ ಸಮನ್ವಯದ ಕೊರತೆಯ ಕುರಿತು ಸರಿ ಪಡಿಸಲಾಗುತ್ತದೆ. ಜೀವ ಕಳೆದುಕೊಂಡ ಸಮೀಕ್ಷಾ ರೆಡ್ಡಿರವರ ಆತ್ಮಕ್ಕೆ ಶಾಂತಿ ನೀಡುವ ಕೆಲಸ ಮಾಡಬೇಕಿದೆ ಎಂದರು.
ಬನ್ನೇರುಘಟ್ಟದಲ್ಲಿ ಇರುವ ಆನೆ ಮರಿಗೆ ಡಾ.ಸಮೀಕ್ಷಾ ರೆಡ್ಡಿರವರ ಹೆಸರು ಘೋಷಿಸಲಾಗುತ್ತದೆ. ಒಂದು ವೇಳೆ ಹಂಸ ನೀರು ಕುದುರೆಗೆ ಹೆಣ್ಣು ಮರಿ ಜನನವಾದರೆ ಸಮೀಕ್ಷ ಎಂದು ಹೆಸರಿಡಲಾಗುವುದು ಎಂದರು.
Zoo Authority Chairman flustered by journalist's question


