SUDDILIVE || SHIVAMOGGA
ಲಯನ್ ಸಫಾರಿಯಲ್ಲಿ ಪ್ರೋಟೋಕಾಲ್ ಫಾಲೋ ಆಗದೆ ವೈದ್ಯೆ ಸತ್ತಿದ್ದ? Did a doctor die because protocol was not followed on a lion safari?
ಸನ್ ಕಾನ್ಯೂರ್ ಪಕ್ಷಿ ಹುಷಾರಿಲ್ಲ ಎಂದು ಇಂಜೆಕ್ಷನ್ ಕೊಡಲು ಹೋಗಿದ್ದ ಪಶುವೈದ್ಯಾಧಿಕಾರಿಗೆ ನೀರಾನೆ ದಾಳಿಗೆ ಸಾವನ್ನಪ್ಪಿರುವುದು ಲಯನ್ ಸಫಾರಿಯಲ್ಲಿ ಪ್ರೋಟೋಕಾಲ್ ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿದೆ. ನೀರಾನೆ ಕೇಜು ಮತ್ತು ಈ ಪಕ್ಷಿಯ ಕೇಜು ಬೇರೆ ಬೇರೆ ಇದ್ದು ನೀರಾನೆ ದಾಳಿಗೆ ವೈದ್ಯೆ ಸಾವುಕಂಡಿರುವುದು ವಿವಾದ ಉಂಟು ಮಾಡಿದೆ.
ಸನ್ ಕಾನ್ಯೂರ್ ಪಕ್ಷಿ ಇಂಜೆಕ್ಷನ್ ನೀಡಲು ಅನುಮತಿ ಇದ್ದ ವೇಳೆ ಡಾ. ಸಮೀಕ್ಷ ರೆಡ್ಡಿ ನೀರಾನೆ ದಾಳಿಗೆ ಬಲಿಯಾಗಿರುವುದು ಅನುಮಾನ ಹೆಚ್ಚಿಸಿದೆ. ಅಧಿಕಾರಿಗಳ ನಿರ್ಲಕ್ಷತನದಿಂದ ಈ ಸಾವಾಗಿದೆ ಎಂಬುದು ಅನುಮಾನ ಹುಟ್ಟಿಸಿದೆ.
ಇದರ ಜೊತೆಗೆ ಡಾ.ಮುರುಳಿಧರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಾಲ್ಕು ತಿಂಗಳಾಗಿದೆ. ನೋಟೀಸ್ ಪಿರಿಯಡ್ ಸಹ ಮುಗಿದಿದೆ. ಆದರೂ ರಿಲೀವ್ ಆಗಿಲ್ಲ. ಇದರ ನಡುವೆ ಲಯನ್ ಸಫಾರಿಯ ಇಡಿ ಅಮರಾಕ್ಷರ್ ಪಕ್ಷಿಗಳಿಗೆ ರಾತ್ರಿ 8-30 ಕ್ಕೆ ಇಂಜೆಕ್ಷನ್ ನೀಡಲು ಅನುಮತಿ ನೀಡಲಾಗಿತ್ತು. ನೀರಾನೆ ಕೇಜ್ ಗೆ ಹೋಗಲು ಅನುಮತಿ ಇರಲಿಲ್ಲ. ಆದರೆ ವೈದ್ಯರು ನೀಡಿದ್ದರೆ ಅದನ್ನ ಪರಿಶೀಲಿಸಬೇಕಿದೆ. ಡಾ.ಸಮೀಕ್ಷ ರೆಡ್ಡಿ ಅವರ ತನಿಖೆಗೆ ಅರಣ್ಯಸಚಿವರು ಆದೇಶಿಸಿದ್ದಾರೆ. ತನಿಖೆಗೆ ಆದೇಶಿಸುತ್ತೇವೆ ಎಂದಿದ್ದಾರೆ.
ಅದಕ್ಕೆ ವೈದ್ಯ ಮುರುಳಿ ಅವರು ಬೈಟ್ ನೀಡಿ ಪಕ್ಷಿ ಸಮೀಕ್ಷೆಗೆ ಅನುಮತಿ ನೀಡಲಾಗಿತ್ತು. ರಾತ್ರಿ 11-30 ಗಂಟೆಗೆ ಮೊಬೈಲ್ ಕರೆ ಬಂದಿತ್ತು. ನೀರಾನೆ ಮರಿಹಾಕುವ ಸಂಧರ್ಭದಲ್ಲಿ ಊಟ ಬಿಟ್ಟಿತ್ತು. ಆದರೆ ನಾವು ನೀರಾನೆ ಕೇಜ್ ಗೆ ಇಳಿಯಲು ಅನುಮತಿಯಿರಲಿಲ್ಲ. ಪಕ್ಷಿಗಳ ಮತ್ತು ಪ್ರಾಣಿಗಳ ಕೇಜ್ ಗೆ ಇಳಿಯಲು ಒಬ್ಬ ಅರಣ್ಯ ಅಧಿಕಾರಿ, ಹೆಲ್ಪರ್ ಮತ್ತು ವೈದ್ಯಾಧಿಕಾರಿಗಳಿರಬೇಕೆಂಬ ನಿಯಮವಿದೆ. ಪ್ರೋಟೋಕಾಲ್ ಇರುತ್ತೆ.
ನಾನು ಡ್ಯೂಟಿ ಮುಗಿಸಿ ಊರಿಗೆ ಹೋಗಿದ್ದೆ. ಕರೆ ಬಂದಾಗ ನನ್ನ ಮೊಬೈಲ್ ಸ್ವಿಚ್ ಆಫ್ ಇತ್ತು ಎಂದು ಹೇಳಿದ್ದಾರೆ. ಈ ರೀತಿಯ ತನಿಖೆಗೂ ಮುಂಚೆ ಅಧಿಕಾರಿಗಳ ಹೇಳಿಕೆ ಗೊಂದಲ ಮೂಡಿಸಿದೆ. ಮರಣೋತ್ತರ ಪರೀಕ್ಷೆ ಜಾಗಕ್ಕೆ ಅಧಿಕಾರಿಗಳ ದಂಡೇ ಹರಿದು ಬಂದಿದೆ. ಶಾಸಕ ಚೆನ್ನಬಸಪ್ಪ ಮತ್ತು ಮೃತರ ಕುಟುಂಬ ಹರಿದು ಬಂದಿದೆ.
ಸಚಿವರು ಡಾಸಮೀಕ್ಷ ರೆಡ್ಡಿಯ ಸಾವಿನ ತನಿಖೆಗೆ ಆದೇಶಿಸಿದ್ದಾರೆ. ಒಟ್ಟಿನಲ್ಲಿ ಜೀವ ಹೋಗಿದೆ. ಕ್ರಮ ಆಗುತ್ತಾ ಅಥವಾ ತೌಡು ಕುಟ್ಟುವ ಕಾರ್ಯ ನಡೆಯುತ್ತಾ ಕಾದು ನೋಡಬೇಕಿದೆ. ಈ
Did a doctor die because protocol was not followed on a lion safari?
