SUDDILIVE || SHIVAMOGGA
ತುಪ್ಪೂರು-ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ- Man commits suicide by consuming tuppur poison
ತುಪ್ಪೂರಿನಲ್ಲಿ ವಿಷ ಸೇವಿಸಿ ವ್ಯಕ್ತಿಯೋರ್ವ ಅಸುನೀಗಿದ್ದು, ಮರಣೋತ್ತರ ಪರೀಕ್ಷೆಗೆ ಶಿವಮೊಗ್ಗದ ಮೆಗ್ಗಾನ್ ಗೆ ಆತನಮೃತ ದೇಹ ತರಲಾಗಿದೆ. ದಶವಂತ್ ಎಂಬಾತ (46) ಪಾಯಿಸನ್ ತೆಗೆದುಕೊಂಡು ತುಪ್ಪೂರಿನ ಮನೆಯಲ್ಲೇ ಸಾವುಕಂಡಿದ್ದಾನೆ.
ಎರಡು ದಿನ ಹಿಂದೆ ಮಗನೊಂದಿಗೆ ಮಾತು ಕಥೆ ಮಾಡಬೇಕಿತ್ತು. 2005 ರಲ್ಲಿ ದಶವಂತ್ ದೀಪಿಕ ಎಂಬುವರ ಜೊತೆ ಮದುವೆಯಾಗಿದ್ದು 11 ವರ್ಷದ ಹಿಂದೆ ಪತ್ನಿ ದೀಪಿಕರಿಂದ ವಿಚ್ಚೇದನವನ್ನೂ ಪಡೆದಿದ್ದರು. ತುಪ್ಪೂರಿನಲ್ಲಿ ದಶವಂತ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದರು. ನಿನ್ನೆ ವಿಷ ಸೇವಿಸಿಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಚ್ಚೇದನ ಪಡೆಯುವ ಮುಂಚೆ ದಶವಂತ್ ದೀಪಿಕಾರ ಜೊತೆ ಅನುಪಿನ ಕಟ್ಟೆಯಲ್ಲಿದ್ದರು, ವಿಚ್ಚೇಧನದ ನಂತರ ಬೇರೆ ಬೇರೆಯಾಗಿ ಬದು ಆರಂಭಿಸಿದ್ದರು. ಖಾಸಗಿ ಶಾಲೆಯಲ್ಲಿ ದೀಪಿಕಾರವರು ಶಿಕ್ಷಕಿಯಾಗಿದ್ದರು. ಇವರಿಗೆ ದರ್ಶಿತ್ ಮತ್ತು ದೀಕ್ಷಿತ್ ಇಬ್ವರು ಮಕ್ಕಳನ್ನ ದೀಪಿಕಾ ಸಾಕಿಕೊಂಡಿದ್ದಾರೆ.
ತುಪ್ಪೂರಿನಲ್ಲಿ 6 ಎಕರೆ ಬಾಳೆ ಮತ್ತು ಅಡಿಕೆ ಬೆಳೆಯನ್ನ ದಶವಂತ್ ನ ಕುಟುಂಬ ಬೆಳೆದಿದ್ದಾರೆ. ಮೊದಲನೇ ಮಗ ದರ್ಶಿತ್ ಭಾರತೀಯ ಸೇನೆಗೆ ಆಯ್ಕೆಯಾಗಿದ್ದ. ಅಪ್ಪನನ್ನ ಮಾತನಾಡಿಕೊಂಡು ಹೋಗುವುದರಲ್ಲಿದ್ದ ಅಷ್ಟರಲ್ಲಿ ಅನೇಕ ಘಟನೆ ನಡೆದಿದ್ದು ವಿಚ್ಚೇದನ ಪಡೆದರೂ ಶಿಕ್ಷಕಿ ಕಣ್ಣೀರಿಟ್ಟಿದ್ದಾರೆ. ದಶವಂತ ಕುಡಿದು ಆತ್ಮಹತ್ತೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಪ್ರಕರಣ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Man commits suicide by consuming tuppur poison

