SUDDILIVE || SHIVAMOGGA
ಹೊಳೆಹೊನ್ನೂರಿನ ರೈತರು ಎಸಿ ಕಚೇರಿ ಮುಂದೆ ದಿಡೀರ್ ಪ್ರತಿಭಟನೆ-Farmers in Holehonnur stage sudden protest in front of AC office
ಅರಸೀಕೆರೆಯ ಗಣಸಿಯಿಂದ ಖರೀದಿಸಿ ತಂದ ಹೋರಿಗಳನ್ನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಇಂದು ಹೊಳೆಹೊನ್ನೂರಿನ ಎಮ್ಮೆಹಟ್ಟಿ ಗ್ರಾಮಸ್ಥರು ದಿಡೀರ್ ಎಂದು ಉಪವಿಭಾಗಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದ್ದಾರೆ.
ಅರಸಿಕೆರೆ ಗಣಸಿಯ ಸಂತೆಯಿಂದ 18 ಹೋರಿಗಳನ್ನ ಖರಿದಿಸಿ ಲಾರಿಯಲ್ಲಿ ನಿನ್ನೆ ತರುವಾಗ ಹೊಳೆಹೊನ್ನೂರು ಬೈಪಾಸ್ ನಲ್ಲಿ ಪೊಲೀಸರು ತಡೆದು ಹಸುಗಳನ್ನ ತಪಾಸಣೆ ನಡೆಸಿದ್ದಾರೆ. ತಪಾಸಣೆಯ ವೇಳೆ ದಾಖಲಾತಿ ಇಲ್ಲದ ಕಾರಣ ಶಿವಮೊಗ್ಗದ ಮಹಾವೀರ ಗೋಶಾಲೆಗೆ 18 ಹೋರಿಗಳನ್ನ ಬಿಡಲಾಗಿತ್ತು.
ಹೋರಿಗಳನ್ನ ಬಿಡದ ಹಿನ್ನಲೆಯಲ್ಲಿ ರೈತರು ಶಾಸಕಿ ಶಾರದಾ ಪೂರ್ಯನಾಯ್ಕ್ ನೇತೃತ್ವದಲ್ಲಿ ಎಸಿ ಕಚೇರಿಯ ಮುಂದೆ ದಿಡೀರ್ ಎಂದು ಪ್ರತಿಭಟನೆಗೆ ಇಳಿದಿದ್ದಾರೆ. ಎಸಿ ಅವರ ನೇತೃತ್ವದಲ್ಲಿ ಸಂಧಾನವಾಗಿದೆ. ಈಗ 18 ಹೋರಿಗಳನ್ನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಸ್ಥಗಿತಗೊಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಜೆಡಿಎಸ್ ರೈತ ವಿಭಾಗದ ಜಿಲ್ಲಾಧ್ಯಕ್ಷ ಬಸವರಾಜ್ ನಿನ್ನೆ ಸಂಜೆ ಪೊಲೀಸರು ನಾವು ಖರೀದಿಸಿದ ಹೋರಿಗಳನ್ನ ಹಿಡಿದಿದ್ದಾರೆ. ಖರೀದಿಸಿದವನಿಂದ ಪಹಣಿ ತಂದು ತೋರಿಸರು ಬಿಡಲಿಲ್ಲ. ಯಾರೋ ಬಜರಂಗ ದಳದವರು ಹೇಳಿದ್ದಕ್ಕೆ ಪೊಲೀಸರು ನಮಗೆ ಕಾಟ ನೀಡಿದ್ದಾರೆ. ಪ್ರತಿಭಟನೆ ನಡೆಸಿ ಶಾಸಕಿ ಶಾರದಾ ಪೂರ್ಯ ನಾಯ್ಕ್ ಅವರು ಮಾತನಾಡಿದ ಮೇಲೆ ಬಿಡಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
Farmers in Holehonnur stage sudden protest in front of AC office
