ಮಾ.24 ರಂದು ಅಹೋರಾತ್ರಿ ಧರಣಿ-All-night sit-in on March 24th

 SUDDILIVE || SHIVAMOGGA

ಮಾ.24 ರಂದು ಅಹೋರಾತ್ರಿ ಧರಣಿ-All-night sit-in on March 24th  

Night, sit-in


ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಪರಿಸರಕ್ಕಾಗಿ ನಾವು ಮತ್ತು ಮಾಜಿ ಡಿಸಿ ಎಂ ಈಶ್ವರಪ್ಪನವರ ನೇತೃತ್ವದ ರಾಷ್ಟ್ರಭಕ್ತರ ಬಳಗ ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದೆ. ಮಾ.24 ರಂದು ಅಹೋರಾತ್ರಿ ಧರಣಿಗೆ ಮುಂದಾಗಿದೆ. 

ಈ ಕುರಿತುಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪರಿಸರಕ್ಕಾಗಿ ನಾವು ಸಂಘಟನೆಯ ಪ್ರೊ.ಕುಮಾರಸ್ವಾಮಿ, ಸಾಗರದಲ್ಲಿ ಭೇಟಿ ಮಾಡಿದಾಗ ತಜ್ಞರ ಸಮಿತಿ ವರದಿ ನೀಡಿದ್ದು, ಈ ವರದಿಯನ್ನ ಆರ್ ಟಿಐ ಮೂಲಕ ಪಡೆಯಲಾಗಿದ್ದು ಯೋಜನೆಯನ್ನ ತಜ್ಞರ ಸಮಿತಿ ತಿರಸ್ಕರಿಸಿದೆ. ಹೈಕೋರ್ಟ್ ನಲ್ಲಿ ಪರಿಸರ ಆಸಕ್ತರು ಪಿಐಎಲ್ ನಲ್ಲಿ ಪ್ರಕರಣ ದಾಖಲಿಸಿದ್ದು ಪಿಟಿಷನ್ ನ್ನ ಒಪ್ಪಿಕೊಂಡು ಸರ್ಕಾರಕ್ಕೆ ಜೂನ್ 15 ರ ಒಳಗೆ ಮಾಹಿತಿ ನೀಡುವಂತೆ ಸೂಚಿಸಿದೆ. 

ಪಕ್ಷೇತರವಾಗಿ ಅಂದು ಬೆಳಿಗ್ಗೆ 9-30 ರಿಂದ ಮಾ.25 ಬೆಳಿಗ್ಗೆ 9-30 ರವರೆಗೆ ಶಿವಮೂರ್ತಿ ವೃತ್ತದ ಬಳಿಯಿರುವ  ನೆಹರೂ ಕ್ರೀಡಾಂಗಣದ ಎದುರು ಪ್ರತಿಭಟನೆ ನಡೆಯಲಿದ್ದು ಬೆಕ್ಕಿನ ಕಲ್ಮಠದ ಡಾ.ಮುರುಘ ರಾಜೇಂದ್ರ ಮಹಾಸ್ವಾಮಿ, ಬಸವಕೇಂದ್ರದ ಡಾ. ಬಸವ ಮರುಳಸಿದ್ದ ಸ್ವಾಮೀಜಿ, ಡಾ.ಮಾರುತಿ ಗುರೂಜಿ, ರಾಜೋಟೇಶ್ವರ ಸ್ವಾಮೀಜಿ, ಮಹಂತ ಸ್ವಾಮೀಜಿ, ವಿನಯ್ ಗುರೂಜಿ ಅಭಿನವ ಚೆನ್ನಬಸವ ಸ್ವಾಮೀಜಿ, ಎಟಿ ರಾಮಸ್ವಾಮಿ, ಪರಶುರಾಮೇಗೌಡ, ಮಾಜಿ ಡಿಸಿಎಂ ಈಶ್ವರಪ್ಪ, ಕೆ.ಈ.ಕಾಂತೇಶ್ ಮೊದಲಾದ 500 ಕ್ಕೂ ಹೆಚ್ಚು ಜನ ಭಾಗಿಯಾಗಲಿದ್ದಾರೆ. 

ನೆಹರೂ ಕ್ರೀಡಾಂಗಣದಲ್ಲಿ ಅಹೋರಾತ್ರಿ ಪ್ರತಿಭಟನೆ ಮುಗಿಸಿ ನಂತರ ಸಹಿ ಸಂಗ್ರಹ ನಡೆಯಲಿದೆ ಎಂದರು. ನಂತರ ಮಾತನಾಡಿದ ಶ್ರೀಪತಿ,  ಈ ಯೋಜನೆಯಲ್ಲಿ 16 ಸಾವಿರ ಮರಗಳು ಕೆಇಯುವ ಪ್ರಸ್ತಾವನೆಯಿದೆ. ಇದು 1972 ವನ್ಯಜೀವಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. 18 ಸಾವಿರ ಸ್ಪೋಟಕ ವಸ್ತುಗಳ ಬಳಕೆಯಾಗಲಿದೆ. ಕೇಂದ್ರ ಸರ್ಕಾರದ ಪ್ರನೀತ್ ಕೌಲ್ ಹಾಗೂ ಕೇಂದ್ರ ವನ್ಯಜೀವಿ ಮಂಡಳಿಯ ತಜ್ಞರ ಸಮಿತಿ ಈ ಯೋಜನೆಯ ಕುರಿತು ಅಧ್ಯಾಯನ ಮಾಡಿದ್ದಾರೆ. 

ಅಧ್ಯಾಯನದಿಂದ ಪರಿಸರ ಹಾನಿಯಾಗುವುದು ಸಮಿತಿ ಸ್ಪಷ್ಟವಾಗಿದೆ. ಇಲ್ಲಿ 16 ಡ್ಯಾಂ ಇವೆ. 500 ಮೀಟರ್ ಒಳಗೆ ಹೋದರೆ ಸ್ಪೋಟಕ ವಸ್ತು ಬಳಕೆಯಾದರೆ ಭೂಕಂಪ ಪ್ರದೇಶವಾಗಿ ಮಾರ್ಪಡಲಿದೆ ಎಂದು ವರದಿ ನೀಡಿದ್ದಾರೆ.   65 ಸಾವಿರ ಅರ್ಜಿಗಳು ಯೋಜನೆಯ ವಿರುದ್ಧವಾಗಿದೆ. 2017 ರಿಂದ ಯೋಜನೆಯ ಬಗ್ಗೆ ಡಿಪಿಆರ್ ಕೇಳಿದರೆ ಇದುವರೆಗೂ ನೀಡಿಲ್ಲ. ರಾಷ್ಟ್ರೀಯ ಭದ್ರತೆಯ ಅಡಿ ನೀಡಲಾಗಲ್ಲ ಎಂದು ತಿಳಿಸಿದರು. 

ಮಾಜಿ ಡಿಸಿಎಂ ಈಶ್ವರಪ್ಪ, ಮಾತನಾಡಿ, ಸಾಧುಸಂತರು, ನಾಗರೀಕರು, ಯೋಜನೆಯ ವರದಿ ಶರಾವತಿ ಪಂಪ್ಡ್ ಸ್ಟೋರೇಜ್ ಬೇಡ ಎಂದಿದ್ದರೂ ಸರ್ಕಾರ ಹಠ ಹಿಡಿದು ಯೋಜನೆ ನಡೆಸಲು ಹೊರಟಿದೆ. 10 ಸಾವಿರ ಕೋಟಿ ಹಣ ಲೂಟಿ ಹೊಡೆಯಲು ಮುಂದಾಗಿರುವುದು ಸ್ಪಷ್ಟವಾಗಿದೆ. ಹೈಕೋರ್ಟ್ ಸಹ ಈ ಯೋಜನೆಯ ಬಗ್ಗೆ ತೀರ್ಮಾನಿಸಲಿದೆ.  ಅಹೋರಾತ್ರಿ ಪ್ರತಿಭಟನೆ ರಾಜ್ಯಸರ್ಕಾರದ ಮೇಲೆ ಒತ್ತಡತಂದು ಕೇಂದ್ರ ಸರ್ಕಾರ ರಾಜ್ಯದ ಮೇಲೆ ನಿಗಾಯಿಡುವಂತೆ ಮಾಡಲು ಈ ಧರಣಿ ನಡೆಸಲಾಗುತ್ತಿದೆ ಎಂದರು. 

ಕೆಪಿಸಿ ಅಧಿಕಾರಿಗಳಿಗೆ 32 ಅಂಶಗಳನ್ನಿಟ್ಟು ಲಿಖಿತವಾಗಿ ಪ್ರಶ್ನಿಸಲಾಗಿದೆ. ನಿನ್ನೆ ಕೆಪಿಸಿ ಅಧಿಕಾರಿಗಳು ಉತ್ತರ ನೀಡಬೇಡಿ ಎಂದು ಹೇಳಿದ್ದಾರೆ. ಅಧಿಕಾರಿಗಳ ಮೇಲೆ ಸಚಿವ ಜಾರ್ಜ್ ಅವರ ಒತ್ತಡ ಹೆಚ್ಚಿದೆ. ಸಂಬಂಧಪಟ್ಟ ವಕೀಲರ ಮೂಲಕ ಕೋರ್ಟ್ ನಲ್ಲಿ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿಸಲಾಗುವುದು ಎಂದರು. 

All-night sit-in on March 24th  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close