ಸಾಗರದಲ್ಲಿ ರಾತ್ರೋರಾತ್ರಿ ಹಿಂದೂ ಸಂಘಟನೆಗಳ ಪ್ರತಿಭಟನೆ-Hindu organizations protest overnight in Sagar

 SUDDILIVE || SAGARA

ಸಾಗರದಲ್ಲಿ ರಾತ್ರೋರಾತ್ರಿ ಹಿಂದೂ ಸಂಘಟನೆಗಳ ಪ್ರತಿಭಟನೆ-Hindu organizations protest overnight in Sagar  

Hindu, organization

ಗೋವುಗಳನ್ನ‌ಕದ್ದುಕೊಂಡು ಹೋದ ಪ್ರಕರಣಗಳಲ್ಲಿ ಆರೋಪಿಗಳನ್ನ ಪೊಲೀಸರು ಬಂಧಿಸಿಲ್ಲ ಎಂದು ಆರೋಪಿಸಿ ನಿನ್ನೆ ರಾತ್ರಿ ಹಿಂದೂ ಸಂಘಟನೆ ಯುವಕರು ರಾತ್ರೋ ರಾತ್ರಿ ಸಾಗರದ ಬಸವನಹೊಳೆ ಸೇತುವೆ ಮೇಲೆ ಪ್ರತಿಭಟನೆ ನಡೆಸಿರುವ ಘಟನೆ ವರದಿಯಾಗಿದೆ. 

ಮಾ.4 ರಂದು ಸಾಗರದ ವಿಜಯನಗರ ಬಡಾವಣೆಯಲ್ಲಿ ಗೋವುಗಳನ್ನ ಕದ್ದುಕೊಂಡು ಹೋದ ಪ್ರಕರಣವೊಂದು ನಡೆದಿದ್ದು ಅದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈರಲ್ ಆದ ವಿಡಿಯೋ ನಿನ್ನೆ ಹಿಂದೂ ಯುವಕರ ಗಮನಕ್ಕೆ ಬಂದಿದೆ. 

ಕ್ರಿಕೆಟ್ ಮಾಚ್ ಮುಗಿಯುತ್ತಿದ್ದಂತೆ ಶಿವಪ್ಪ ನಾಯಕ ವೃತ್ತದಲ್ಲಿ ಹಿಂದೂಯುವಕರು ಆರೋಪಿಗಳನ್ನ ಬಂಧಿಸುವಂಯೆ ಆಗ್ರಹಿಸಿ ರಾತ್ರಿ ಸುಮಾರು 11-30 ರ ವೇಳೆಗೆ ಜಮಾಯಿಸಿ ರಸ್ತೆ ರೋಕೋ ನಡೆಸುತ್ತಾರೆ. ಈ ಹಿಂದೆ ನವೆಂಬರ್ ತಿಂಗಳಲ್ಲಿ ಅಣಲೆಕೊಪ್ಪದಲ್ಲಿ ಹೀಗೆ ಗೋವಿನ ಕಳವು ನಡೆದಿದ್ದು, ಆ ಘಟನೆಯ ಆರೋಪಿಯನ್ನ ಬಂಧಿಸಿಲ್ಲ. ಹೀಗೆ ಸಾಗರದಲ್ಲಿ ಬಿಡಾಡಿ ದನಗಳನ್ನ ಅಪಹರಿಸಿಕೊಂಡು ಹೋದರೂ ಇಲಾಖೆ ಆರೋಪಿಗಳನ್ನ ಬಂಧಿಸಿಲ್ಲ ಎಂದು ಸಂಘಟನೆ ಆರೋಪಿಸಿತು. 

ಶಿವಪ್ಪ ನಾಯಕ ವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವಾಹನ ಸಂಚಾರಿಗಳಿಗೆ ಬಿಸಿ ತಟ್ಟಿಸುವ ಉದ್ದೇಶದಿಂದ ಸಾಗರದ ಬಸವನ ಹೊಳೆಯ ಸೇತುವೆಯನ್ನ ಬಂದ್ ಮಾಡಿ ಪ್ರತಿಭಟಿಸಲಾಯಿತು. ಸುಮಾರು 3 ಗಂಟೆಯ ವೇಳೆಗೆ ಡಿವೈಎಸ್ಪಿ ಅವರ ಮಧ್ಯ ಪ್ರವೇಶದಿಂದ ಪ್ರಕರಣ ತಿಳಿಗೊಂಡಿದೆ. ಒಂದು ವಾರದ ಒಳಗೆ ಆರೋಪಿಗಳನ್ನ‌ ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಗಿದೆ. 

ಪ್ರತಿಭಟನೆಯಲ್ಲಿ ಹಿಂದೂ ಸಂಘಟನರಯ ಪ್ರಮುಖರಾದ ಸಂತೋಷ್ ಶಿವಾಜಿ, ವಕೀಲರಾದ ಪ್ರವೀಣ್, ಸುದರ್ಶನದ, ರಾಘವೇಂದ್ರ ಭಟ್, ಕೆಎಸ್ ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು. 

Hindu organizations protest overnight in Sagar

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close