SUDDILIVE || SHIVAMOGGA
ಪತಿ ಪತ್ನಿಯರ ನಡುವಿನ ಗಲಾಟೆಯಲ್ಲಿ ಮಾಜಿ ಪ್ರಿಯಕರನ ಮೇಲೆ ಚಾಕುವಿನಿಂದ ಹಲ್ಲೆ-Husband attack ex-lover with knife during argument with wife
ಹಿಂದೆ ಪ್ರೀತಿಸಿದ್ದ ಪ್ರಿಯಕರನ ಜೊತೆ ಮದುವೆಯಾಗಿದ್ದರೆ ನಾನು ಚೆನ್ನಾಗಿರ್ತಿದ್ದೆ ಎಂದು ಹೆಂಡತಿ ಹೆಳಿದ್ದಕ್ಕೆ ಪತಿರಾಯ ಪತ್ನಿಯ ಮಾಜಿ ಪ್ರಿಯಕರನನ್ನ ಕೊಲೆ ಮಾಡುವ ಉದ್ದೇಶದಿಂದ ಚಾಕು ಇರಿದಿರುವ ಘಟನೆ ನಾಲ್ಕುದಿನ ಹಿಂದೆ ನಡೆದಿದ್ದು ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಯನ್ನ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ.
ನಸ್ರುಲ್ಲಾ ಎಂಬ 25 ವರ್ಷದ ಯುವಕ ಸ್ನೇಹಿತರಾದ ದಸ್ತಗೀರ್, ಹಸೀಬ್ ಮತ್ತು ಗುಣಶೇಖರನ ಜೊತೆ ಲಕ್ಷ್ಮೇಶ್ವರದ ದರ್ಗಾಕ್ಕೆ ಹೋಗಲು ತೀರ್ಮಾನಿಸಿ ನಸ್ರುಲ್ಲಾ ಸೀಗೆಬಾಗಿಯ ಝಂಡೇಕಟ್ಟೆಯಲ್ಲಿರುವ ಮನೆಯಿಂದ ಬ್ಯಾಗ್ ತೆಗೆದುಕೊಂಡು ಹೋಗುವಾಗ ಅಪ್ನಾನ್ ಎಂಬಾತ ಈ ಹಿಂದೆ ನನ್ನ ಹೆಂಡತಿಯನ್ನ ಪ್ರೀತಿಸುತ್ತಿದ್ದೆ ಅಲ್ವಾ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾನೆ.
ಝೈನ್ ಮತ್ತು ಮುಫೀಜ್ ಎಂಬುವರು ಅಪ್ನಾನ್ ಗೆ ಇವತ್ತು ಅವನನ್ನ ಮುಗಿಸಿ ಬಿಡು ಎಂದು ಹೇಳಿ ಪ್ರಚೋದಿಸಿದ್ದಾರೆ. ಅಪ್ನಾನ್ ತನ್ನ ಬಳಿ ತಂದಿದ್ದ ಚಾಕುವಿನಿಂದ ನಸ್ರುಲ್ಲಾನ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ನಸ್ರೂಲ್ಲಾ ಕೂಗಿಕೊಂಡಾಗ ತಾಯಿ ಬಂದುಜಗಳ ಬಿಡಿಸಲು ಯತ್ನಿಸಿದ್ದಾಳೆ. ಅಷ್ಟು ಹೊತ್ತಿಗೆ ನಸ್ರೂಲ್ಲಾನ ಸ್ನೇಹಿತರು ಬರುವುದನ್ನನೋಡಿ ಅಪ್ನಾನ್ ಮತ್ತು ಇತರೆ ಇಬ್ವರು ಜಾಗ ಖಾಲಿ ಮಾಡಿದ್ದಾರೆ.
ನಸ್ರುಲ್ಲಾನ ಪಕ್ಕೆ ಬೆನ್ನಿಗೆ ಚಾಕು ಇರಿಯಲಾಗಿದೆ. ಭದ್ರಾವತಿ ಆಸ್ಪತ್ರೆಗೆ ದಾಖಲಾಗಿ ಕಳೆದ ನಾಲ್ಕು ದಿನಗಳಿಂದ ಶಿವಮೊಗ್ಗದ ಮೆಗ್ಗಾನ್ ನಲ್ಲಿ ನಸ್ರುಲ್ಲಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಧ್ಯಕ್ಕೆ ಅಫ್ನಾನ್ ತಲೆಮರೆಸಿಕೊಂಡಿದ್ದಾನೆ. ತಲೆ ಮಾರಿಸಿಕೊಂಡಿರುವ ಅಪ್ನಾನ್ ಈಗಲೂ ಸಾಮಾಜಿಕ ಜಾಲತಾಣದಲ್ಲಿ ನಸ್ರುಲ್ಲಾನನ್ನ ಬದುಕಲು ಬಿಡಲ್ಲ ಎಂಬ ಪೋಸ್ಟ್ ಮಾಡುತ್ತಿದ್ದಾನೆ ಎಂದು ಗಾಯಗೊಂಡಿರುವ ನಸ್ರುಲ್ಲಾ ಕುಟುಂಬ ಆರೋಪಿಸಿದೆ.
ಅಫ್ನಾನ್ ಆಟೋಟೋಪಕ್ಕೆ ನಸ್ರುಲ್ಲಾ ಕುಟುಂಬ ತತ್ತರಿಸಿಹೋಗಿದೆ. ನಸ್ರುಲ್ಲಾ ಈ ಹಿಂದೆ ಅಫ್ನಾನ್ ಮದುವೆಯಾಗುವ ಮೊದಲು ಆತನ ಪತ್ನಿಯ ಜೊತೆ ಪ್ರೀತಿ ಮಾಡ್ತಾ ಇದ್ದರು. ಆದರೆ ಈಗ ಅಫ್ನಾನ್ ಜೊತೆ ಮದುವೆಯಾದ ನಂತರ ಇತ್ತೀಚೆಗೆ ಪತಿ ಮತ್ತು ಪತ್ನಿ ಜೊತೆ ಗಲಾಟೆಯಾಗಿದೆ. ಗಲಾಟೆಯ ವೇಳೆ ಪತ್ನಿ ನಸ್ರುಲ್ಲಾನನ್ನೇ ಮದುವೆಯಾಗಿದ್ದರೆ ಚೆನ್ನಾಗಿರುತ್ತಿದ್ದೆ ಎಂದು ಹೇಳಿದ್ದಾಳೆ ಅಷ್ಟೆ, ಅಫ್ನಾನ್ ನಸ್ರುಲ್ಲಾನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ಪ್ರಕರಣದಲ್ಲಿ ನಸ್ರುಲ್ಲಾನಿಗೆ ನ್ಯಾಯಾ ಸಿಗುತ್ತಾ ಕಾದುನೋಡಬೇಕಿದೆ.
Husband attack ex-lover with knife during argument with wife

