SUDDILIVE || SHIVAMOGGA
ಮಾ.30 ರಂದು ಮಾಂಸ ಮಾರಾಟ ನಿಷೇಧ-Meat sale ban on March 30
ನಗರದಾಧ್ಯಾಂತ ಮಾಂಸ ಮಾರಾಟವನ್ನು ರದ್ದುಪಡಿಸಿ ಮಹಾನಗರ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಮಾರ್ಚ್ 30ರಂದು ಮಹಾವೀರ ಜಯಂತಿ ಪ್ರಯುಕ್ತ ಮಾಂಸ ಮಾರಾಟವನ್ನು ನಿಷೇಧಿಸಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಮಾರ್ಚ್ 30ರಂದು ಮಹಾವೀರ ಜಯಂತಿ ದಿನದ ಅಂಗವಾಗಿ ಈಗಾಗಲೇ ಪಾಲಿಕೆಯು ಮಾಂಸ ರಹಿತ ದಿನವೆಂದು ಘೋಷಿಸಿದೆ.
ಈ ದಿನದಂದು ಪ್ರಾಣಿ ಹಿಂಸೆಯನ್ನು ನಿಷೇಧಿಸಿರುವ ಪ್ರಯುಕ್ತ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟವನ್ನ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಹಾಗಾಗಿ ಮಾಂಸಮಾರಾಟಗಾರರು ಈ ದಿನದಂದು ಉದ್ಯಮಯನ್ನು ಬಂದ್ ಮಾಡುವಂತೆ ವಿನಂತಿಸಲಾಗಿದೆ.
ಮತ್ತು ಮಾಂಸ ಮಾರಾಟವನ್ನು ನಿಲ್ಲಿಸಬೇಕು. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದವರ ಮೇಲೆ ಕಾನೂನು ರೀತಿಯ ನಿಯಮಾನುಸಾರ ಕ್ರಮ ಜರುಗಿಸಲಾಗುವುದೆಂದು ಆಯುಕ್ತ ಮಾಯಣ್ಣ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Meat sale ban on March 30

