SUDDILIVE || SHIVAMOGGA
ಜಸ್ಟೀಸ್ ಫಾರ್ ಡಾ.ಸಮೀಕ್ಷ-ಸಿಬಿಐಗೆ ಒಪ್ಪಿಸಲು ಆಗ್ರಹ- Justice for Dr. Sameeksha-Demand to hand over to CBI
ಕ್ಯಾಂಡಲ್ ಹಿಡಿದು ನಡೆದ ನೂರಾರೂ ವೈದ್ಯಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು, ಶಿವಮೊಗ್ಗದ ಗೋಪಿ ವೃತ್ತದ ವರೆಗೂ ನಡೆದು ಕ್ಯಾಡಲ್ ಮಾರ್ಚ್ ನಡೆಸಿದ್ದಾರೆ. ಜಸ್ಟೀಸ್ ಫಾರ್ ಡಾ.ಸಮೀಕ್ಷಾ ಎಂಬ ಘೋಷಣೆಯೊಂದಿಗೆ ವಿದ್ಯಾರ್ಥಿಗಳ ಕ್ಯಾಂಡಲ್ ಮಾರ್ಚ್ ನಡೆಸಿದ್ದಾರೆ.
ಸಮೀಕ್ಷಾ ರೆಡ್ಡಿ ಭಾವಚಿತ್ರ ಹಿಡಿದು ಆಕ್ರೋಷ ಹೊರಹಾಕಲಾಗಿದೆ. ಕೂಡಲೇ ತನಿಖೆಯನ್ನು ಸಿಬಿಐ ಗೆ ಕೊಡುವಂತೆ ಮನವಿ ಮಾಡಲಾಗಿದೆ. ಎಸ್ ಓಪಿ ಪಾಲನೆ ಮಾಡದ ಮೃಗಾಲಯದ ಆಡಳಿತ ಮಂಡಳಿ ವಿರುದ್ಧ ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಪಶುವೈದ್ಯಾಕೀಯ ಸಂಘ ಶಿವಮೊಗ್ಗ, ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ಕರ್ನಾಟಕ ಹಾಲು ಒಕ್ಕೂಟ ಪಶುವೈದ್ಯಾಧಿಕಾರಿಗಳು , ಹಾಗೂ ನಿವೃತ್ತ ಪಶುವೈದ್ಯಾಧಿಕಾರಿಗಳ ಸಂಘದ ಸದಸ್ಯರುಗಳು ಮಾರ್ಚ್ ನಲ್ಲಿ ಭಾಗಿಯಾಗಿದ್ದಾರೆ.
ಶಿವಮೊಗ್ಗ ನಗರದ ಅಮೀರ್ ಅಹಮದ್ ವೃತ್ತದಿಂದ ಆರಂಭಗೊಂಡ ಕ್ಯಾಂಡಲ್ ಮಾರ್ಚ್ ಗೋಪಿ ವೃತ್ತದವರೆಗೆ ನಡೆದಿದೆ. ಈ ಪ್ರತಿಭಟನಾಕಾರರ ಕೂಗು ಸರ್ಕಾರದ ವರೆಗೆ ಕೇಳುತ್ತಾ, ಅಥವಾ ಜಾಣ ಕಿವಿಯನ್ನ ಹೊಂದಿರುವ ಸರ್ಕಾರ ತೇಪೆ ಹಚ್ಚುವ ಕೆಲಸಕ್ಕೆ ಮುಂದಾಗುತ್ತದಾ ಕಾದು ನೋಡಬೇಕಿದೆ.
Justice for Dr. Sameeksha-Demand to hand over to CBI

