SUDDILIVE || SHIVAMOGGA
ಯೂತ್ ಕಾಂಗ್ರೆಸ್ ನಿಂದ ವಿಶೇಷ ಪೂಜೆ-Special puja by Youth Congress
ಶಿವಮೊಗ್ಗ ನಗರ ಯುವ ಕಾಂಗ್ರೆಸ್ ವತಿಯಿಂದ ನಗರದ ಕೋಟೆ ರಸ್ತೆಯಲ್ಲಿರುವ ಸೀತಾರಾಮಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಆರೋಗ್ಯ ಹೆಚ್ಚಿಸುವಂತೆ ಪ್ರಾರ್ಥಿಸಿ ದೇವರಿಗೆ ವಿಶೇಷ ಪೂಜೆ ಮಾಡಿಸಲಾಯಿತು.
79 ವರ್ಷದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಸಿಸ್ಟಮಿಕ ಸೋಂಕಿಗೆ ಒಳಗಾಗಿದ್ದು, ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಗಿದ್ದರು. ಅನಾರೋಗ್ಯದಿಂದ ಅಧಿನಾಯಕಿ ಗುಣಮುಖವಾಗಲೆಂದು ಹರಸಿ ಸಂಘಟನೆ ದೇವರ ಮೊರೆ ಹೋಗಿದೆ.
ಕಾರ್ಯಕ್ರಮದಲ್ಲಿ ಜಿಲ್ಲ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್, ಹಾಪ್ ಕಾಮ್ಸ್ ಅಧ್ಯಕ್ಷ ವಿಜಯ್ ಕುಮಾರ್, ಯೂತ್ ಕಾಂಗ್ರೇಸ್ ಅಧ್ಯಕ್ಷ ಹರ್ಷಿತ್ ಗೌಡ ಮೊದಲದವರು ಭಾಗಿಯಾಗಿದ್ದರು. ಸೋನಿಯಾ ಗಾಂಧಿಯ ಫ್ಲೆಕ್ಸ್ ಹಿಡಿದು ದೇವರ ಮುಂದೆ ಪ್ರಾರ್ಥಿಸಲಾಯಿತು.
Special puja by Youth Congress

