SUDDILIVE || SHIVAMOGGA
ನಿನ್ನೆ ರೈತನ ಮೇಲೆ ದಾಳಿ ನಡೆಸಿದ ಚಿರತೆ ಸಾವು-Leopard that attacked farmer dies yesterday
ನಿನ್ನೆ ಶಿಕಾರಿಪುರದ ತಡಸ ಗ್ರಾಮದ ನಿವಾಸಿ ರೈತ ಮುತ್ತಣ್ಣ ಶೇರಿದಂತೆ ಮೂವರ ಮೇಲೆ ದಾಳಿ ನಡೆಸಿದ ಚಿರತೆ ಇಂದು ಅನುಮಾನಸ್ಪದವಾಗಿ ಸಾವುಕಂಡಿದೆ. ನಿನ್ನೆ ರೈತನ ಮೇಲೆ ಇದೇ ಚಿರತೆ ದಾಳಿ ನಡೆಸಿ ಆತನನ್ನಮೆಗ್ಗಾನ್ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದ್ದ ಚಿರತೆ ಇಂದು ಸಾವುಕಂಡಿದೆ. ಈ ಸಾವು ಅನುಮಾನಸ್ಪದಕ್ಕೆ ಎಡೆಮಾಡಿಕೊಟ್ಟಿದೆ.
ಮೃತ ಚಿರತೆಯ ದೇಹದಲ್ಲಿ ಯಾವುದೇ ಗಾಯಗಳಾಗಲಿ ಕಂಡು ಬಂದಿಲ್ಲ. ಇದು ಹೊಟ್ಟೆ ಹಸಿವಿನಿಂದ ಸತ್ತಿರ ಬಹುದು ಎಂದು ಅರಣ್ಯ ಅಧಿಕಾರಿ ಫಯಾಜುದ್ದೀನ್ ಡಿಸಿ ಚಿರತೆ ಸಾವಿನ ಕುರಿತು ಹೇಳಿಕೆ ನೀಡಿದ್ದಾರೆ. ಚಿರತೆಯ ಸಾವಿನ ಕುರಿತು ತನಿಖೆಯೂ ಸಹ ನಡೆಯಲಿದೆ ಎಂಬುದನ್ನ ಹೇಳುವುದನ್ನ ಅವರು ಮರೆಯಲಿಲ್ಲ. ಈ ಹೇಳಿಕೆಯೂ ಎಷ್ಟರ ಮಟ್ಟಿಗೆ ಸತ್ಯ ಎಂಬುದು ಪರಿಶೀಲಿಸಬೇಕಿದೆ. ಅಧಿಕಾರಿಯ ಮಾಹಿತಿ ಏನೇ ಇರಲಿ, ನಿನ್ನೆ ರೈತನ ಮೇಲೆ ದಾಳಿ ನಡೆಸಿದ್ದ ಚಿರತೆ ಇಂದು ಸಾವು ಕಂಡಿರುವುದು ವಿಷ ಪ್ರಾಶನಃದ ವಾಸನೆಯೂ ಹೊಡೆಯುತ್ತಿದೆ.
ಶಿವಮೊಗ್ಗದ ಶಿಕಾರಿಪುರ ತಾಲ್ಲೂಕಿನಲ್ಲಿ ಚಿರತೆಗಳ ಸರಣಿ ಸಾವು ಆತಂಕ ಮೂಡಿಸಿದೆ. ಇತ್ತೀಚೆಗೆ ತಡಸನಹಳ್ಳಿಯಲ್ಲಿ ದಾಳಿ ನಡೆಸಿದ ಮರುದಿನವೇ ಹೆಣ್ಣು ಚಿರತೆಯೊಂದರ ಮೃತದೇಹ ಪತ್ತೆಯಾಗಿದ್ದು, ಇದು ಒಂದು ತಿಂಗಳ ಅವಧಿಯಲ್ಲಿ ಸಂಭವಿಸಿದ ಎರಡನೇ ನಿಗೂಢ ಸಾವು ಇದಾಗಿದೆ.
ಅರಣ್ಯ ಇಲಾಖೆಯು 'ಹಸಿವಿನಿಂದ ಸಾವು' ಎಂದು ಶಂಕಿಸಿದ್ದರೆ, ವನ್ಯಜೀವಿ ತಜ್ಞರು ಇದು 'ವಿಷಪ್ರಾಶನ' ಇರಬಹುದು ಎಂದು ಸಂಶಯ ವ್ಯಕ್ತಪಡಿಸಿ ವಿಷಶಾಸ್ತ್ರ (Toxicology) ವರದಿಗೆ ಆಗ್ರಹಿಸಿದ್ದಾರೆ. ಈ ಹಿಂದೆ ಫೆಬ್ರವರಿಯಲ್ಲಿ ನಡೆದ ಚಿರತೆ ಮರಿಯ ಸಾವಿನ ತನಿಖೆಯಲ್ಲೂ ಇಲಾಖೆ ವಿಫಲವಾಗಿದೆ ಎಂಬ ಟೀಕೆಗಳು ಕೇಳಿಬರುತ್ತಿದೆ.
Leopard that attacked farmer dies yesterday

