SUDDILIVE || SHIVAMOGGA
ಖಾಲಿ ನಿವೇಶನದಲ್ಲಿ ಅಕ್ರಮ ಮರಳು ಸಂಗ್ರಹ-600 ಮೆಟ್ರಿಕ್ ಟನ್ ಮರಳು ವಶಕ್ಕೆ- Illegal sand collection at vacant site - 600 metric tons of sand seized
ಎರಡು ಠಾಣಾ ವ್ಯಾಪ್ತಿಯಲ್ಲಿ ಸಂಗ್ರಹಿಸಲಾಗಿದ್ದ ಅಕ್ರಮ ಮರಳು ದಾಸ್ತಾನಿನ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ 600 ಮೆಟ್ರಿಕ್ ಟನ್ ಮರಳನ್ನ ವಶಕ್ಕೆ ಪಡೆದಿದ್ದಾರೆ.
ಮಂಡ್ಲಿ ಸರ್ವೆ ನಂ 5 ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿ ಹಾಗೂ ಮಂಡ್ಲಿ ಸರ್ವೆ ನಂಬರ್ 159 ಮತ್ತು 161 ರಲ್ಲಿ ಅಕ್ರಮ ವಾಗಿ ಮರಳು ಸಂಗ್ರಹಿಸಲಾಗಿದೆ ಎಂಬ ಉಪವಿಭಾಗಾಧಿಕಾರಿ ಸತ್ಯ ನಾರಾಯಣ ಅವರ ನಿರ್ದೇಶನದ ಮೇರೆಗೆ ತಾಲೂಕು ಮರಳು ಸಮಿತಿಯ ಅಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆದಿದೆ.
ದಾಳಿಯಲ್ಲಿ ಸರ್ವೆನಂಬರ್ 5 ರಲ್ಲಿ ಇರುವ ಖಾಲಿ ನಿವೇಶನದಲ್ಲಿ 300 ಮೆಟ್ರಿಕ್ ಟನ್ ಮರಳನ್ನ ದಾಸ್ತಾನು ಮಾಡಲಾಗಿತ್ತು. ಇದನ್ನ ದೊಡ್ಡಪೇಟೆ ಪೊಲೀಸರ ಜೊತೆಯಲ್ಲಿ ಗಣಿಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 300 ಮೆಟ್ರಿಕ್ ಟನ್ ಮರಳನ್ನ ವಶಕ್ಕೆ ಪಡೆದು ಫ್ರೀಡಂ ಪಾರ್ಕ್ ಗೆ ಕಳುಹಿಸಿದ್ದಾರೆ.
ಅದರಂತೆ ತುಂಗ ನಗರ ಪೊಲೀಸ್ ಠಾಣ ವ್ಯಾಪ್ತಿಯ ಸರ್ವೆ ನಂಬರ್ 159 ಮತ್ತು 161 ರಲ್ಲಿಯೂ ದಾಳಿ ನಡೆಸಿದಾಗ 300 ಮೆಟ್ರಿಕ್ ಟನ್ ಮರಳನ್ನ ಖಾಲಿ ನಿವೇಶನದಲ್ಲಿ ಪತ್ತೆಯಾಗಿದೆ. ಇದನ್ನೂ ಸಹ ವಶಕ್ಜೆ ಪಡೆದು ಫ್ರೀಡಂ ಪಾರ್ಕ್ ಗೆ ಸಾಗಿಸಲಾಗಿದೆ. ಮರಳನ್ನ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಂಚಿಸುವ ದೃಷ್ಠಿಯಿಂದ ಖಾಲಿ ನಿವೇಶನದಲ್ಲಿ ಸಂಗ್ರಹಿಸಿಡಲಾಗಿತ್ತು ಎಂದು ಎಫಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
Illegal sand collection at vacant site - 600 metric tons of sand seized

