SUDDILIVE || SHIVAMOGGA
ರಾಮನವಮಿ-ಕೋಸಂಬರಿ ಪಾನಕ ವಿತರಿಸಿದ ಶಾಸಕರು-MLAs distribute Ram Navami-Kosambari Panaka
"ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಜನ್ಮದಿನದ ಶುಭ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಶಿವಮೊಗ್ಗ ಘಟಕದ ವತಿಯಿಂದ ನಗರದ ಅಕ್ಕಮಹಾದೇವಿ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಶ್ರೀರಾಮೋತ್ಸವ' ಕಾರ್ಯಕ್ರಮ ಭಕ್ತಿಪೂರ್ವಕವಾಗಿ ಜರುಗಿದೆ.
ನಗರದ ಶಾಸಕ ಚೆನ್ನಬಸಪ್ಪ, ಎಂಎಲ್ ಸಿ ಡಾ.ಧನಂಜಯ ಸರ್ಜಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೋಸಂಬರಿ, ಪಾನಕ ವಿತರಿಸಿದರು. ಶ್ರೀರಾಮನ ಆದರ್ಶಗಳು ಮತ್ತು ಧರ್ಮದ ಹಾದಿ ನಮ್ಮೆಲ್ಲರಿಗೂ ಸದಾ ದಾರಿದೀಪವಾಗಲಿ, ನಮ್ಮ ಶಿವಮೊಗ್ಗ ನಗರದಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಒಗ್ಗಟ್ಟು ಮತ್ತು ಸಾಂಸ್ಕೃತಿಕ ಜಾಗೃತಿಯನ್ನು ಮೂಡಿಸಲಿ ಎಂದು ಡಾ.ಸರ್ಜಿ ತಿಳಿಸಿದರು.
ಈ ಸಂದರ್ಭದಲ್ಲಿ, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಜಿಲ್ಲಾಧ್ಯಕ್ಷ ವಾಸುದೇವ, ರಾಜೇಶ್ ಗೌಡ, ಸುರೇಶ್ ಬಾಬು ಹಾಗೂ ಇತರೆ ಕಾರ್ಯಕರ್ತರು ಮತ್ತು ರಾಮಭಕ್ತರು ಉಪಸ್ಥಿತರಿದ್ದರು.
MLAs distribute Ram Navami-Kosambari Panaka


