SUDDILIVE || THIRTHAHALLI
ಪಾದಚಾರಿಗೆ ಕಾರು ಡಿಕ್ಕಿ-ಪಾದಚಾರಿ ಸಾವು- Pedestrian hit by car, pedestrian dies
ನೆಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊರ್ವನಿಗೆ ಕಾರೊಂದು ಗುದ್ದಿದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಜ್ಜವಳ್ಳಿಯ ಸಮೀಪ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಸುಂದರೇಶ್ ( 63 ವರ್ಷ) ಎಂದು ಗುರುತಿಸಲಾಗಿದ್ದು ದಾನಸಾಲೆಯವರು ಎಂದು ತಿಳಿದುಬಂದಿದೆ. ಕಾರು ಪುನಾದಿಂದ ಬಂದಿದ್ದು ಎಂದು ಹೇಳಲಾಗುತ್ತಿದೆ. ಕಾರು ಚಾಲನಕ ನಿರ್ಲಕ್ಷದಿಂದ ಗುದ್ದಿರಬಹುದು ಎಂದು ಅಂದಾಜಿಸಲಾಗಿದೆ. ಕಾರನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದ್ದು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Pedestrian hit by car, pedestrian dies

