SUDDILIVE || SHIVAMOGGA
ಪರ್ಮಿಟ್ ಇಲ್ಲದೆ ಮರ ಸಾಗಾಣಿಕೆ, ಉನ್ನತಮಟ್ಟದ ತನಿಖೆಗೆ ಸಚಿವರಿಂದ ಆದೇಶ- Minister orders high-level investigation into timber transportation without permit
ಸಾಗರದ ಆವಿನಹಳ್ಳಿಯಲ್ಲಿ ಪಲ್ಪ್ & ಫೈರ್ ವುಡ್ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಆರೋಪಿಸಿರುವ ವಿಡಿಯೋ ಪರಿಶೀಲನೆ ನಡೆಸಿರುವ ಅರಣ್ಯ ಸಚಿವರಾದ ಈಶ್ವರ ಬಿ ಖಂಡ್ರೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.
ಆದೇಶದದಲ್ಲೇನಿದೆ.?
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಅವಿನಹಳ್ಳಿ ಗ್ರಾಮದ ಬಳಿ ಕೆ.ಎ. ** ಎ *** ಸಂಖ್ಯೆಯ ಲಾರಿಯಲ್ಲಿ ಸಾಗಿಸುತ್ತಿದ್ದ ಬೃಹತ್ ಮರಗಳನ್ನು ಗ್ರಾಮಸ್ಥರೇ ತಡೆದು ವಿಚಾರಿಸಿದಾಗ ಪರ್ಮಿಟ್ ಇಲ್ಲದಿರುವುದು ಬೆಳಕಿಗೆ ಬಂದಿದೆ. ಸುಮಾರು 25ಕ್ಕೂ ಹೆಚ್ಚು ಲೋಡ್ ಪಲ್ಪ್ ವುಡ್ ಮತ್ತು ಟಿಂಬರ್ ಅನ್ನು ಕದ್ದು ಸಾಗಿಸಲಾಗಿದೆ ಎಂಬ ಗ್ರಾಮಸ್ಥರ ಧ್ವನಿ ಇರುವ ವಿಡಿಯೋ ತುಣುಕು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ.
ಲಾರಿಯಲ್ಲಿ ಸಾಗಿಸುತ್ತಿರುವ ಮರಗಳ ಗಾತ್ರವನ್ನು ನೋಡಿದಾಗ 30-40 ವರ್ಷದ ಹಳೆಯ ಮರಗಳಂತೆ ಗೋಚರಿಸುತ್ತಿದೆ. ಪರ್ಮಿಟ್ ಇಲ್ಲದೆ ಈ ಮರಗಳ ಕಟಾವು ಮತ್ತು ಸಾಗಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೂ ಶಾಮೀಲಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಎ.ಪಿ.ಸಿ.ಸಿ.ಎಫ್. ದರ್ಜೆಯ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ, ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಸಿಬ್ಬಂದಿ ಶಾಮೀಲಾಗಿದ್ದರೆ, ಕರ್ತವ್ಯಲೋಪ ಎಸಗಿದ್ದರೆ ಆ ಬಗ್ಗೆಯೂ ಪರಿಶೀಲಿಸಿ 7 ದಿನಗಳ ಒಳಗಾಗಿ ಅಂತಹ ಅಧಿಕಾರಿ ಮತ್ತು ಸಿಬ್ಬಂದಿಯ ವಿರುದ್ಧ ಕೈಗೊಳ್ಳಬೇಕಾದ ಕ್ರಮದ ಶಿಫಾರಸಿನ ಸಹಿತ ವರದಿಯನ್ನು ಕಡತದಲ್ಲಿ ಮಂಡಿಸಲು ಸೂಚಿಸಿದೆ.
Minister orders high-level investigation into timber transportation without permit
