SUDDILIVE || SHIVAMOGGA
ಜಮೀನು ಸರ್ವೆ ವಿಚಾರದಲ್ಲಿ ಗಲಟೆ ನಡೆಸಿ ಹಲ್ಲೆ ನಡೆಸಿದ ಪ್ರಕರಣ-ಐವರಿಗೆ ಶಿಕ್ಷೆ-Five sentenced for rioting and assault over land survey
ಜಮೀನು ಸರ್ವೆ ವಿಚಾರದಲ್ಲಿ ಗಲಾಟೆಯಾಗಿ ವ್ಯಕ್ತಿಯನ್ನ ಬೈದು ಜಾತಿ ನಿಂದನೆ ಮಡಿ ಹಲ್ಲೆ ನಡೆಸಿದ ಐವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ದಿ:03/06/2020 ರಂದು ಪರ‍್ಯಾದಿದಾರರಾದ ಆರ್ಮುಗಂ (55 ವರ್ಷ) ರವರು ಭದ್ರಾವತಿ ತಾಲ್ಲೂಕ್ ಸುಣ್ಣದಹಳ್ಳಿ ಗ್ರಾಮದ ತಮ್ಮ ಜಾಗದಲ್ಲಿ ಸರ್ವೇ ಮಾಡಿಸುತ್ತಿದ್ದಾಗ, ಆರೋಪಿತರಾದ ಎ1 ಜಗದೀಶ್ ಬಿನ್ ಮಂಜುನಾಥ್, 30 ವರ್ಷ, ಎ2 ಕಾಂತರಾಜ್ ಬಿನ್ ಮಂಜುನಾಥ್, 32 ವರ್ಷ, ಎ3 ನಾಗೇಶ್ ಬಿನ್ ಮಂಜುನಾಥ್, 30 ವರ್ಷ, ಎ4 ಮಂಜುನಾಥ್ ಬಿನ್ ಗಜಗುಂಡೇ ಗೌಡ್ರು, 60 ವರ್ಷ, ಎ5 ಪ್ರೇಮಾ ಕೋಂ ಮಂಜುನಾಥ್, 58 ವರ್ಷರವರು ಸೇರಿಕೊಂಡು ಆರ್ಮುಗಂ ರವರಿಗೆ ಇದು ನಮಗೆ ಸೇರಿದ ಜಾಗ ಇಲ್ಲಿ ಯಾಕೆ ಸರ್ವೇ ಮಾಡಿಸುತ್ತೀರಾ ಎಂದು ಅವಾಚ್ಯವಾಗಿ ಬೈದು ಜಾತಿನಿಂದನೆ ಮಾಡಿ, ಜಗದೀಶನು ಅಲ್ಲೆ ಬಿದ್ದಿದ್ದ ಅರ್ಧ ಗಾತ್ರದ ಇಟ್ಟಿಗೆ ತುಂಡಿನಿಂದ ಪರ‍್ಯಾದಿದಾರರ ತಲೆಯ ಎಡಭಾಗಕ್ಕೆ ಹಾಗೂ ಕಾಂತರಾಜ್ ಈತನು ರೀಪೀಸ್ ನಿಂದ ಪಿರ‍್ಯಾದಿದಾರರ ಬಲಪಾದದ ಮೇಲೆ ಹೊಡೆದು ರಕ್ತಗಾಯಪಡಿಸಿದ್ದು, ಪರ‍್ಯಾದಿದಾರರ ಜಾಗವನ್ನು ಸರ್ವೇ ಮಾಡಿಸಲು ಬಿಡದೇ ಅಡ್ಡಿ ಪಡಿಸಿ, ಜಾತಿನಿಂದನೆ ಮಾಡಿ, ಅವಾಚ್ಯವಾಗಿ ಬೈದು ಸಾಮಾನ್ಯ ಸ್ವರೂಪದ ಗಾಯ ಉಂಟುಮಾಡಿದ ಸದರಿ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪೇಪರ್ ಟೌನ್ ಪೊಲೀಸ್ ಠಾಣೆ ಗುನ್ನೆ ನಂ:77/2020 ಕಲಂ:323,324,143,144,146,147,148,149,504 ಐಪಿಸಿ, ಹಾಗೂ 3(1)(r)(s)(2)(va) SC/St Act ರಿತ್ಯಾ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಡಿವೈಎಸ್ಪಿ ಸುಧಾಕರ್ ಎಸ್ ನಾಯ್ಕ್ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ. ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ದಿನಾಂಕ:10-03-2026 ರಂದು ಎ1 ರಿಂದ ಎ5 ಆರೋಪಿತರಿಗೆ 2 ವರ್ಷ ಕಠಿಣ ಕಾರಾವಾಸ ಮತ್ತು 1,90,000/- ರೂ ದಂಡವನ್ನು ವಿಧಿಸಿ ಆದೇಶಿಸಿರುತ್ತದೆ.
