SUDDILIVE || SHIVAMOGGA
ಯುಗಾದಿಯ ಚಂದ್ರ ದರ್ಶನ-Moon sighting on Ugadi
ಯುಗಾದಿ ಹಬ್ಬದ ಹಿನ್ನೆಲೆ ಶಿವಮೊಗ್ಗದಲ್ಲಿ ಇವತ್ತು ಚಂದ್ರ ದರ್ಶನವಾಯಿತು. ಜನರು ಚಂದ್ರನನ್ನು ಕಣ್ತುಂಬಿಕೊಂಡು ಪೂಜೆ ಸಲ್ಲಿಸಿ, ಬೇವು ಬೆಲ್ಲ ಹಂಚಿದರು.
ಗುರುವಾರ ಯುಗಾದಿ ಹಬ್ಬ ಇತ್ತು. ಸಂಜೆ ಚಂದ್ರ ದರ್ಶನ ಆಗದೆ ಹಿನ್ನೆಲೆ ಇಂದು ಸಂಜೆ ಜನರು ಆಗಸದತ್ತ ದೃಷ್ಟಿ ನೆಟ್ಟಿದ್ದರು. ಮನೆ ಟೆರೇಸ್, ಖಾಲಿ ಜಾಗಳು, ರಸ್ತೆಗಳಲ್ಲಿ ನಿಂತು ಚಂದ್ರ ದರ್ಶನಕ್ಕೆ ಪ್ರಯತ್ನಿಸಿದರು.
ಚಂದ್ರ ದರ್ಶನ ಆಗುತ್ತಿದ್ದಂತೆ ಜನರು ಪೂಜೆ ಸಲ್ಲಿಸಿದರು. ಆರತಿ ಬೆಳಗಿ ಕೈ ಮುಗಿದರು. ಬೇವು ಬೆಲ್ಲ ಹಂಚಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
Moon sighting on Ugadi

