SUDDILIVE || ANANDAPURA
ಆನಂದಪುರ-ರಸ್ತೆ ಅಪಘಾತದಲ್ಲಿ ಬೀಸನಗದ್ದೆ ಯುವಕ ಸಾವು-Young Man from Beesanagadde dies in Anandapur road accident
ಆನಂದಪುರದಿಂದ ರಿಪ್ಪನ್ ಪೇಟೆಗೆ ಹೋಗುವ ಮಾರ್ಗದಲ್ಲಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಬೀಸನಗದ್ದೆಯ ಯುವಕ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ರಿಪ್ಪನ್‌ಪೇಟೆ ಕಡೆಯಿಂದ ಆನಂದಪುರದ ಮಾರ್ಗದಲ್ಲಿ ಬೈಕ್ ಬರುತ್ತಿತ್ತು, ಆನಂದಪುರದಿಂದ ರಿಪ್ಪನ್‌ಪೇಟೆ ಮಾರ್ಗವಾಗಿ ಕಾರು ಹೋಗುತ್ತಿತ್ತು. ಎರಡು ವಾಹನಗಳು ಕೊರಲಿಕೊಪ್ಪ ಗ್ರಾಮದ ಸಮೀಪದಲ್ಲಿ ಮುಖಾಮುಖಿ ಡಿಕ್ಕಿಯಾಗಿವೆ.
ಬೈಕ್ ಚಲಾಯಿಸುತ್ತಿದ್ದ ಆನಂದಪುರ ಸಮೀಪದ ಬೀಸನಗದ್ದೆ ನಿವಾಸಿ 26 ವರ್ಷದ ಪುತ್ರ ಮಹೇಶ್ ಎಂಬಾತ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ತಕ್ಷಣವೇ ಭೇಟಿ ನೀಡಿದ ಆನಂದಪುರ ಪೊಲೀಸರು ಪರಿಶೀಲಿಸಿ ಪ್ರಕರಣ ರಿಜಿಸ್ಟರ್ ಮಾಡಿಕೊಂಡಿದ್ದಾರೆ.
Young Man from Beesanagadde dies in Anandapur road accident
