ಗಾಜನೂರಿನಲ್ಲಿ ರಸ್ತೆ ಅಪಘಾತ-ಡಿಸಿ ಆಫೀಸ್ ನಲ್ಲಿ ಟೈಪಿಸ್ಟ್ ಆಗಿದ್ದ ನೌಕರ ಸಾವು- Road accident in Gajanur - typist at DC's office dies

SUDDILIVE || SHIVAMOGGA

ಗಾಜನೂರಿನಲ್ಲಿ ರಸ್ತೆ ಅಪಘಾತ-ಡಿಸಿ ಆಫೀಸ್ ನಲ್ಲಿ ಟೈಪಿಸ್ಟ್ ಆಗಿದ್ದ ನೌಕರ ಸಾವು- Road accident in Gajanur - typist at DC's office dies     

Road, accident


ಶಿವಮೊಗ್ಗ ತಾಲೂಕಿನ ಗಾಜನೂರು ಬಳಿ ಭೀಕರ ರಸ್ತೆ  ಅಪಘಾತ ಉಂಟಾಗಿದ್ದು, ಅಪಘಾತದಲ್ಲಿ ಡಿಸಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇರೆಗೆ ಟೈಪಿಸ್ಟ್ ಆಗಿದ್ದ ನೌಕರ ಸಾವುಕಂಡಿದ್ದಾರೆ. 

ಮಂಗಳೂರಿನಿಂದ ಬರುತ್ತಿದ್ದ ಮದನೇಶ್ವರ ಎಂಬ ಖಾಸಗಿ ಬಸ್ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿ ಉಂಟಾಗಿದೆ. ಗಾಜನೂರು ಮುರಾರ್ಜಿ ದೇಸಾಯಿ ವಸತಿ ಶಾಲೆ ಕ್ರಾಸ್ ಬಳಿಯ ವನಶ್ರೀ ನರ್ಸರಿ ಬಳಿ  ನಡೆದ ಘಟನೆ

ಶಿವಮೊಗ್ಗದಿಂದ ಗಾಜನೂರು ಕಡೆಗೆ ಹೋಗುತ್ತಿದ್ದ ಆಟೋದಲ್ಲಿಪ್ರೇಮ್ ಕುಮಾರ್ (28), ಮನೋಜ್ (21), ಪವನ್(21) ಹಾಗೂ ಗಿರೀಶ್ ಎಂಬ (21) ವರ್ಷದ ಯುವಕರು ಚಲಿಸುತ್ತಿದ್ದರು. ಎದುರಿನಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ.  ಶಿವಮೊಗ್ಗ ಬುದ್ಧನಗರದ ಪ್ರೇಮ್ ಕುಮಾರ್  ಮೃತ ದುರ್ದೈವಿಯಾಗಿದ್ದಾರೆ.

ಮೂವರು ಗಾಯಾಳುಗಳು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಆಟೋ ಸಂಪೂರ್ಣ ಜಖಂಗೊಂಡಿದೆ. ನಾಲ್ವರೂ ಶಿವಮೊಗ್ಗ ಬುದ್ದನಗರ ನಿವಾಸಿಗಳಾಗಿದ್ದಾರೆ. ಪ್ರೇಮ್ ಕುಮಾರ್ ಮೃತದೇಹ ಮೆಗ್ಗಾನ್ ಶವಾಗಾರಕ್ಕೆ ಶಿಫ್ಟ್ ಆಗಿದೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

Road accident in Gajanur - typist at DC's office dies

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close