SUDDILIVE || SHIVAMOGGA
ಆಲಿಕಲ್ಲು ಮಳೆಗೆ ಕಲ್ಲಂಡಿ ಸಂಪೂರ್ಣ ನಾಶ- Kallandi completely destroyed by hailstorm
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ನಿನ್ನೆ ಮಲೆನಾಡಿನಲ್ಲಿ ಸುರಿದ ಆಲಿಕಲ್ಲು ಮಳೆ ಅಕ್ಷರಶಃ ರೈತರ ಪಾಲಿಗೆ ನರಕವನ್ನೇ ತೋರಿಸಿದೆ. ಇಲಾಖೆ ಎಂದು ನಾಮಕಾವಸ್ಥೆಗೆ ಇರುವ ಇಲಾಖೆ ರೈತರಿಗೆ ಇದ್ದರೆಷ್ಟು ಸತ್ತರೆಷ್ಟು ಎಂಬಂತಾಗಿದೆ.
ನಿನ್ನೆ ಸುರಿದ ಆಲಿಕಲ್ಲಿನ ಮಳೆ ರೈತರ ಯುಗಾದಿ ಸಂಭ್ರಮವನ್ನೇ ಕಸಿದುಕೊಂಡಿದೆ. ಶಿವಮೊಗ್ಗ ತಾಲೂಕಿನ ಅನುಪಿನಕಟ್ಟೆ ಗ್ರಾಮದಲ್ಲಿ ಕಲ್ಲಂಗಡಿ ಬೆಳೆ ಆಲಿಕಲ್ಲು ಮಳೆಗೆ ನಾಶವಾಗಿದೆ. ಮೂರು ಎಕರೆಯಲ್ಲಿ ಬೆಳೆದಿದ್ದ ಕಲ್ಲಂಗಡಿ ಸಂಪೂರ್ಣ ನಾಶವಾಗಿದೆ.
ಮೂರು ಲಕ್ಷ ರೂ. ಖರ್ಚು ಮಾಡಿ ಬೆಳೆದಿದ್ದ ಕಲ್ಲಂಗಡಿ ಸಂಪೂರ್ಣ ಮಣ್ಣುಪಾಲಾಗಿದೆ. ಅನುಪಿನಕಟ್ಟೆ ಗ್ರಾಮದ ರಾಮಣ್ಣ ಎಂಬುವರು ಬೆಳೆದಿದ್ದ ಕಲ್ಲಂಗಡಿ ಸಂಪೂರ್ಣ ನಾಶವಾಗಿದೆ.
25 ದಿನದಲ್ಲಿ ಕಟಾವು ಮಾಡಬೇಕಿದ್ದ ಕಲ್ಲಂಗಡಿ ಸಂಪೂರ್ಣ ನಾಶವಾಗಿದೆ. ತೋಟಗಾರಿಗೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಬೆಳೆ ನಾಶವಾದ್ರೂ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಕರೆ ಮಾಡಿದ್ರೂ ಅಧಿಕಾರಿಗಳು ಕರೆ ಸ್ವೀಕರಿಸುತ್ತಿಲ್ಲ ಎಂದು ರೈತರು ಆಕ್ರೋಶ. ವ್ಯಕ್ತಡಿಸಿದ್ದಾರೆ.
Kallandi completely destroyed by hailstorm

