SUDDILIVE || SHIVAMOGGA
ಅಶೋಕ ವೃತ್ತದ ಸಿಗ್ನಲ್ ನಲ್ಲಿ ಸರಣಿ ಅಪಘಾತ-ಆಟೋ ನುಜ್ಜುಗುಜ್ಜು, ಚಾಲಕನಿಗೆ ಮೂಳೆ ಮುರಿತ- Serial accident at Ashoka Circle signal - Auto crushed, driver suffers bone fracture
ಶಿವಮೊಗ್ಗದ KSRTC ಬಸ್ ನಿಲ್ದಾಣದ ಎದುರಿನ ಅಶೋಕ ವೃತ್ತದ ಬಳಿಯ ಸಿಗ್ನಲ್ ನಲ್ಲಿ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಆಟೋ ಚಾಲಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ವರದಿಯಾಗಿದೆ. ಈ ಘಟನೆ ಇಂದು ಬೆಳಿಗ್ಗೆ 10-15 ರ ಆಜುಬಾಜಿನಲ್ಲಿ ಸಂಭವಿಸಿದೆ.
ಅಶೋಕ ವೃತ್ತದ ಸಿಗ್ನನಲ್ಲಿ ನಿಂತಿದ್ದ ಪ್ಯಾಸೆಂಜರ್ ಆಟೋಗೆ ಎಎ ವೃತ್ತದ ಕಡೆಯಿಂದ ಬಂದ KSRTC ಶಿವಮೊಗ್ಗ-ಭದ್ರಾವತಿ ನಗರ ಸಾರಿಗೆ ಬಸ್ ಚಾಲಕನ ನಿರ್ಲಕ್ಷ ತನದಿಂದ ಹಿಂದಿನಿಂದ ಗುದ್ದಿದೆ. ಗುದ್ದಿದ ರಭಸಕ್ಕೆ ಆಟೋ ಮುಂದೆ ನಿಂತಿದ್ದ ಕಿಯಾ ಕಾರಿಗೆ, ಕಿಯಾ ಕಾರು ಅದರ ಮುಂದೆ ನಿಂತಿದ್ದ ನಂಬರ್ ಪ್ಲೇಟ್ ಇಲ್ಲದ ಶಾಲಾ ವಾಹನಕ್ಕೆ ಗುದ್ದಿದೆ.
ಹೀಗೆ KSRTC ಬಸ್ ಚಾಲಕನ ಅತಿವೇಗ ಹಾಗೂ ನಿರ್ಲಕ್ಷತನದಿಂದ ಸರಣಿ ಅಪಘಾತ ನಡೆದಿದೆ. ಸರಣಿ ಅಪಘಾತದಲ್ಲಿ ಗಾಯಗೊಂಡ ಆಟೋ ಚಾಲಕ ರಾಜು (37)ಗೆ ಎಡಗೈ ಮೂಳೆ ಮುರಿದೆ. ಸೊಂಟ ಎದೆ ಹಾಗೂ ಬಲಗಾಲಿಗೆ ಒಳಪೆಟ್ಟಾಗಿದೆ. ಅಲ್ಲೆ ಇದ್ದ ಕಿಯಾ ಕಾರಿನ ಚಾಲಕ ಸಂದೀಪ್ ಶೆಟ್ಟಿ, ಶಾಲಾ ಬಸ್ ಚಾಲಕ ಖಾಸಿಂ ಖಾನ್, ಅಪಘಾತ ಪಡಿಸಿದ ಬಸ್ ನ ನಿರ್ವಾಹಕ ಕರಿಬಸಪ್ಪ ಇವರುಗಳೆ ಆಟೋ ಚಾಲಕನನ್ನ ಮೆಗ್ಗಾನ್ ಗೆ ದಾಖಲಿಸಲು ಬೇರೆ ಆಟೋದಲ್ಲಿ ಸಾಗಿಸಿದ್ದಾರೆ.
ಬಸ್ ಚಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆಟೋ ಅಪಘಾತ ಪಡಿಸಿದ ಬಸ್ ಮತ್ತು ಕಾರಿನ ನಡುವೆ ಸಿಲುಕಿಕೊಂಡು ನುಜ್ಜುಗುಜ್ಜಾಗಿದೆ. ಅದೃಷ್ಠ ವಶಾತ್ ಆಟೋದಲ್ಲಿ ಪ್ರಯಾಣಿಕರು ಇರಲಿಲ್ಲ. ಪ್ಯಾಸೆಂಜರ್ ಗಾಗಿ ರಾಜು ಮಲವಗೊಪ್ಪದಿಂದ ಬಸ್ ನಿಲ್ದಾಣಕ್ಕೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Serial accident at Ashoka Circle signal - Auto crushed, driver suffers bone fracture

