SUDDILIVE || SHIVAMOGGA
ಶಾಲಾ ಬಸ್ ಹರಿದು ಮಗು ಸಾವು-Child dies after school bus overturns
ಶಿವಮೊಗ್ಗದಲ್ಲಿ ಸ್ಕೂಲ್ ಬಸ್ ಹರಿದು, 1 ವರ್ಷದ 6 ತಿಂಗಳ ಮಗು ಸಾವುಕಂಡಿದೆ. ನಗರದ ಗೋಪಾಲಗೌಡ ಬಡಾವಣೆ ಬಳಿ ನಡೆದ ಘಟನೆ ನಡೆದಿದೆ.
ಅಪಘಾತದಲ್ಲಿ ಸಾವುಕಂಡ 1 ವರ್ಷ 6 ತಿಂಗಳ ಮಗು ಆರ್ಯನ್ ಎಂದು ಗುರುತಿಸಲಾಗಿದೆ. ಗೋಪಾಲಗೌಡ ಬಡಾವಣೆಯ ಚಂದನ ಪಾರ್ಕ್ ಬಳಿ ಘಟನೆ ನಡೆದಿದೆ. ಓಪನ್ ಮೈಂಡ್ ಸ್ಕೂಲ್ ನ ಬಸ್ ಹರಿದು, ಮಗು ಸಾವು ಕಂಡಿರುವುದಾಗಿ ಹೇಳಲಾಗುತ್ತಿದೆ.
ಗೋಪಾಲಗೌಡ ಬಡಾವಣೆ 'ಎ' ಬ್ಲಾಕ್ ನಿವಾಸಿ ಮಂಜುನಾಥ್ ರ ಮಗ ಅರ್ಯನ್ ಎನ್ನಲಾಗಿದೆ. ಮಂಜುನಾಥ್ ಅವರ ಮನೆಯ ಬಳಿಯೇ ಅಪಘಾತ ಸಂಭವಿಸಿದೆ.
ಆರ್ಯನ್ ಅಣ್ಣನನ್ನ ಸ್ಕೂಲ್ ಬಸ್ ನಿಂದ ಕರೆದೊಯ್ಯಲು ಬಂದಿದ್ದ ಮನೆ ಕೆಲಸದಾಕೆ, ಮನೆ ಕೆಲಸದವರ ಹಿಂದಿನಿಂದ ಮಗು ಆರ್ಯನ್ ಓಡಿ ಬಂದಿದೆ. ಸಹೋದರ ಇಳಿಸಿಕೊಳ್ಳುವ ವೇಳೆ ಬಸ್ ನ ಮುಂಭಾಗ ಆರ್ಯನ್ ನ ಮೇಲೆ ಹರಿದು ಹೋಗಿದೆ.
ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಮಗು ಆರ್ಯನ್ ಸಾವು ಕಂಡಿದೆ. ಆರ್ಯನ್ ಮೃತದೇಹ ಮೆಗ್ಗಾನ್ ಶವಾಗಾರಕ್ಕೆ ರವಾನಿಸಲಾಗಿದೆ. ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Child dies after school bus overturns

