ಸೂರಗೊಂಡನಕೊಪ್ಪದಲ್ಲಿ ನಡೆದ ಪ್ರಕರಣದಲ್ಲಿ ದಾಖಲಾಗಿರುವ ಪ್ರಕರಣಗಳನ್ನ ಸರ್ಕಾರ ಹಿಂಪಡೆಯಬೇಕು-ಮಾಜಿ ಶಾಸಕ

 SUDDILIVE || SHIVAMOGGA

ಸೂರಗೊಂಡನಕೊಪ್ಪದಲ್ಲಿ ನಡೆದ ಪ್ರಕರಣದಲ್ಲಿ ದಾಖಲಾಗಿರುವ ಪ್ರಕರಣಗಳನ್ನ ಸರ್ಕಾರ ಹಿಂಪಡೆಯಬೇಕು-ಮಾಜಿ -The government should withdraw case happened in the Suragondanakoppa case- former MLAs - Former

Case, suragondanakoppa


ಮೀಸಲಾತಿಯಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡುತ್ತಿರುವ ಬಗ್ಗೆ, ಸೂರಗೊಂಡನಕೊಪ್ಪದಲ್ಲಿ ಡಿಸಿಎಂಗೆ ಕಪ್ಪುಪಟ್ಟಿ ತೋರಿದ ಯುವಕರ ಮೇಲೆ ಪ್ರಕರಣ ದಾಖಲು ಹಾಗೂ ಜಿಲ್ಲಾ ಬಂಜಾರ ಸಂಘದ ವಿರುದ್ಧ ತಪ್ಪು ಮಾಹಿತಿ ನೀಡುತ್ತಿರುವ ಬಗ್ಗೆ ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಮತ್ತು ಅವರ ತಂಡ ಸ್ಪಷ್ಟನೆ ನೀಡಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕರು, ಸದಾಶಿವ ಆಯೋಗ ಮತ್ತು ನಾಗಮೋಹನ ದಾಸ್ ಅವರ ವರದಿಯ ವಿರುದ್ಧ ಬಂಜಾರ ಸಮುದಾಯ ಹೋರಾಟ ನಡೆಸುತ್ತಾ ಬಂದಿದೆ. ಪ್ರತಿ ವರ್ಷ ಫೆ.14 ಮತ್ತು 15 ರಂದು ಸೂರಗೊಂಡನಕೊಪ್ಪದಲ್ಲಿ ಸೇವಲಾಲ್ ಜಯಂತಿ ನಡೆಯುತ್ತದೆ. ಈ ವರ್ಷವೂ ಸಹ ಫೆ.15 ರಂದು ಸೇವಾಲಾಲ್ ಜಯಂತಿಗೆ ಡಿಸಿಎಂ ಡಿಕೆಶಿಗೆ ಆಹ್ವಾನಿಸಲಾಗಿತ್ತು. 

ಸಮಾಜಕ್ಕೆ ಆಗುತ್ತಿರುವ ಅನ್ಯಾಯವನ್ನ ವಿರೋಧಿಸಿ ಮಾಲಾಧಾರಿಗಳು ಡಿಕೆಶಿಗೆ ಕಪ್ಪುಪಟ್ಟಿ ಪ್ರದರ್ಶಿಸಿದ್ದರು. ಇಂತಹ ಮಾಲಾಧಾರಿಗಳ ಮೇಲೆ ಇಲ್ಲ ಸಲ್ಲದ ಪ್ರಕರಣಗಳನ್ನ ದಾಖಲಿಸಿ ಜೈಲಿಗೆ ಕಳುಹಿಸುತ್ತಿದೆ. ನಮಗೆ ಆಗುತ್ತಿರುವ ಅನ್ಯಾಯವನ್ನ ಪ್ರಶ್ನಿಸಿದರೆ ಕೇಸ್ ಹಾಕಿದರೆ ಹೇಗೆ ಎಂದು ಪ್ರಶ್ನಿಸಿದ ಅವರು ಅವರ ಮೇಲಿನ ಕೇಸ್ ನ್ನ ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು. 

ಮಾಲಾಧಾರಿಯಲ್ಲಿ ಐಎಎಸ್ ಅರ್ಹನಾಗಿದ್ದವನ‌ಮೇಲೆ, ಮಹಿಳೆಯೊಬ್ಬರು ಸೇರಿದಂತೆ 100 ಜನರ ಮೇಲೆ ಪ್ರಕರಣ ದಾಖಲಿಸಿದೆ. ಇದನ್ನ ಕಾನೂನು ಹೋರಾಟದ ಮೂಲಕ ಹೋರಾಡಲು ಸಮಾಜ ಶಕ್ತವಿದೆ. ಆದರೆ ಸರ್ಕಾರದ ಅನ್ಯಾಯವನ್ನ ಖಂಡಿಸಬೇಕಿದೆ. ಸಚಿವ ಸಂಪುಟದಲ್ಲಿ ಮೀಸಲಾತಿಯ ವಿರುದ್ಧ ಅಭಿಪ್ರಾಯ ಬಂದರೆ ಪ್ರತಿಭಟಿಸಲಾಗುವುದು‌ ಇಂದು ನಡೆಯುವ ನಿರ್ಧಾರದ ಮೇಲೆ ಪ್ರತಿಭಟನೆ ಮತ್ತು ಹೋರಾಟದ ದಿಕ್ಕು ನಡೆಯಲಿದೆ ಎಂದರು. 

ಜಿಲ್ಲಾ ಬಂಜಾರ ಸಂಘದ ನಿರ್ದೇಶಕರಾದ ಆರ್ ಸಿ ನಾಯ್ಕ್  ಮಾತನಾಡಿ, ಶಶಿನಾಯ್ಕ್ ಸಂಘಕ್ಕೆ  ಮಾಜಿ ಶಾಸಕರಾದ ಕೆಬಿ ಅಶೋಕ್ ನಾಯ್ಕ್ ರಾಜೀನಾಮೆ ನೀಡಿದ್ದು ಅವರ ಅವಧಿಯಲ್ಲಿ ಕಟ್ಟಡಕ್ಕೆ ತಗುಲಿದ ಕರ್ಚಿನ ಬಗ್ಗೆ ಲೆಕ್ಕ ಕೇಳಿದ್ದಾರೆ. ಮಾಜಿ ಶಾಸಕರು ರಾಜೀನಾಮೆ ನೀಡಿರುವುದು ನಿಜ. ಆದರ  ಅವರ ಮನವೊಲಿಸಿ ಅಧ್ಯಕ್ಷ ಸ್ಥಾನದಲ್ಲಿ ಅವರನ್ನ‌ ಮುಂದುವರೆಸಿದ್ದೇವೆ. ಸಮುದಾಯದ ಕಟ್ಟಡಕ್ಕೆ ಶಶಿನಸಯ್ಕ್  16 ಕೋಟಿ ತಗುಲಿದೆ ಎಂದಿದ್ದಾರೆ. ಮಾಹಿತಿಯ ಕೊರತೆ ಅವರಲ್ಲಿದೆ. ಕಟ್ಟಡದ ನಿರ್ಮಾಣಕ್ಕೆ 11 ಕೋಟಿ ಹಣ ವೆಚ್ಚವಾಗಿದೆ. ರಾಜಕೀಯ ಉದ್ದೇಶದಿಂದ ಶಶಿನಾಯ್ಕ್ ಅಶೋಕ ನಾಯ್ಕರ ಅಭಿವೃದ್ಧಿ ಸಹಿಸದೆ ತೇಜೋವಧೆ ಮಾಡುತ್ತಿದ್ದಾರೆ. ಇದಕ್ಕೆ ಸಂಘ ಬಗ್ಗೊದಿಲ್ಲ ಜಗ್ಗೋದಿಲ್ಲ ಎಂದರು. 

ಬೋಜ್ಯನಾಯ್ಕ್ ಮಾತನಾಡಿ, ನಾನು ಅಧ್ಯಕ್ಷರಾಗಿದ್ದಾಗ ಶಶಿನಾಯ್ಕ್ ಪದಾಧಿಕಾರಿಯಾಗಿದ್ದರು. ಸದಸ್ಯತ್ವ ನೋಂದಣಿಯ ಹಣವನ್ನೇ ಅವರು ಕಟ್ಟಲಿಲ್ಲ. ಆಗಿಂದಲೇ ಅವರನ್ನ ಸಂಘದಿಂದ ಹೊರಹಾಕಲಾಗಿದೆ. ಕೆಲಸದ ಒತ್ತಡದಿಂದ ಅಶೋಕ್ ನಾಯ್ಕ್ ರಾಜೀನಾಮೆ ನೀಡಿದ್ದರು. ಆದರೆ ಅವರ ಮನವೊಲಿಕೆ ಮಾಡಲಾಗಿದೆ. ಆದರೆ ಸಭೆ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರೆಸಲು ತೀರ್ಮಾನಿಸಲಾಗಿದೆ. ಕಟ್ಟಡ ಅಭಿವೃದ್ಧಿಗೆ ಬೈಲಾದಲ್ಲಿ ಹೇಳಿರುವಂತೆ ವಸತಿ ನಿಲಯ, ವಿದ್ಯಾರ್ಥಿ ನಿಲಯ ನಿರ್ಮಿಸಲಾಗುವುದು ಎಂದರು. 

The government should withdraw case happened in the Suragondanakoppa case- former MLAs - Former

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close