ಹೋಳಿ ಹಬ್ಬದಲ್ಲಿ ಯುವಕರ ನಡುವೆ ಮಾರಾಮಾರಿ-10 ಜನ ಯುವಕರ ಬಂಧನ-Fight between youths during Holi festival - 10 youths arrested

 SUDDILIVE || SHIVAMOGGA

ಹೋಳಿ ಹಬ್ಬದಲ್ಲಿ ಯುವಕರ ನಡುವೆ ಮಾರಾಮಾರಿ-10 ಜನ ಯುವಕರ ಬಂಧನ-Fight between youths during Holi festival - 10 youths arrested    

Holi, fight

ನಿನ್ನೆ ಹೋಳಿ ಹಬ್ಬದ ದಿನದಂದು ಜೆಪಿ ನಗರದಲ್ಲಿ ಓರ್ವ ಅಪ್ರಾಪ್ತ ಹಾಗೂ ಯುವಕನ ಮೇಲೆ ಮನಸ್ಸು ಇಚ್ಛೆ ತಳಿಸಿದ ಘಟನೆಗೆ ಸಂಬಂಧಿಸಿದಂತೆ 10 ಜನ ಯುವಕರನ್ನು ತುಂಗಾ ನಗರ ಪೊಲೀಸರು ಬಂಧಿಸಿದ್ದಾರೆ.


ಘಟನೆಯ ವಿವರ


ಒಂದುವರೆ ತಿಂಗಳು ಹಿಂದೆ ಹಲ್ಲೆಗೊಳಗಾದ ಸಚಿನ್ ಸ್ನೇಹಿತ ಯಶ್ವಿನ್ ಹಾಗೂ ಚಿರಂತನ್ ಎಂಬುವರ ನಡುವೆ ವಾಚ್ ವಿಚಾರದಲ್ಲಿ ಗಲಾಟೆ ಯಾಗಿತ್ತು ಈ ವಿಚಾರದಲ್ಲಿ ಚಿರಂತನ್ ಕಡೆಯವರಾದ ಕಿಟಿ ಕಿಟಿ ಮಂಜ ಚೇತು ಸೂರಿ ಮತ್ತಿತರರು ಸೇರಿಕೊಂಡು ಯಶ್ವಿನ್ ಎಲ್ಲಿದ್ದಾನೆ ಎಂದು ಕೇಳುವ ನೆಪದಲ್ಲಿ ಸಚಿನ್ ಹಾಗೂ ಆತನ ಸ್ನೇಹಿತರಿಗೆ ಬೆದರಿಕೆ ಹಾಕಿದ್ದರು.

ನೆನ್ನೆ ಗೋಪಿ ವೃತ್ತದಲ್ಲಿ ಹೋಳಿ ಆಡಲು ಸಚಿನ್, ಅಪ್ರಾಪ್ತ ಬಾಲಕ ಹಾಗೂ ಇತರರು ಸೇರಿಕೊಂಡು ಬಂಡವಾಟವಾಡಲು ಅಶೋಕನಗರದ ಅಪ್ಪು ಸ್ಟ್ಯಾಚುವಿನ ಬಳಿ ಕುಳಿತಿದ್ದಾಗ ಅಲ್ಲಿಗೆ ಬಂದ ವಿನಯ್ ಚಿನ್ಮಯ್ ಮನು ವೆಂಕಿ ಸಚಿನ್ ಹಾಗೂ 17 ವರ್ಷದ ಬಾಲಕನನ್ನು ಅಗತ್ಯ ಶಬ್ದಗಳಿಂದ ಬೈದು ಬೈಕ್ ನಲ್ಲಿ ಕೂರಿಸಿಕೊಂಡು ಜೆಪಿ ನಗರದ ಕಣ್ಣನ್ ಮನೆ ಹತ್ತಿರ ಇರುವ ಒಂದು ಶೆಡ್ಡಿಗೆ ಕರೆದುಕೊಂಡು ಹೋಗಿರುತ್ತಾರೆ.

ಇವರನ್ನು ಕರೆದುಕೊಂಡು ಹೋಗುವ ಮೊದಲೆ ಚಿಟಿಕಿಟಿ ಮಂಜ ಸೂರಿ ಚೇತು ಮತ್ತಿತರರು ಶೆಡ್ ನಲ್ಲಿ ಇರುತ್ತಾರೆ ಸಂತ್ರಸ್ತರು ಶೆಡ್ ನ ಒಳಗೆ ಹೋದಾಗ ಅವ್ಯಾಚ್ಯ ಶಬ್ದಗಳಿಂದ ಬೈದ ಕಿಟಿ ಕಿಟ್ಟಿ ಮಂಜ ಚಾಕುವಿನಿಂದ ಸಚಿನ್ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾನೆ. ಮಂಜ ಬೀಸಿದ ಚಾಕುವಿನ ಹೊಡೆತದಿಂದ ತಪ್ಪಿಸಿಕೊಂಡ ಸಚಿನ್ ಮತ್ತು 17 ವರ್ಷದ ಯುವಕನ ಮೇಲೆ ಸೂರಿ ಅಲುಮಿನಿಯಂ ರಾಡಿನಿಂದ ಮನಸೋ ಇಚ್ಛೆ ಥಳಿಸುತ್ತಾನೆ.ಇಬ್ಬರನ್ನೂ ನೆಗ್ಗಾನ್ ಗೆ ದಾಖಲಿಸಲಾಗಿತ್ತು. 

ಯಶ್ವಿನ್ ನನ್ನು ಹುಡುಕಿಕೊಂಡು ಬಂದಾಗೆಲ್ಲ ನಮಗೆ ಆಟ ಆಡಿಸುತ್ತೀರಾ ನಿಮ್ಮನ್ನೇ ಇಲ್ದಾಗೆ ಮಾಡಿದರೆ ಹೇಗೆ ಎಂದು ಹೇಳಿ ಯುವಕರ ಗುಂಪು ಸಂತ್ರಸ್ತರ ಮೇಲೆ ಮುಗಿಬಿದ್ದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿನ್ ಪೆಸಿಟ್ ಕಾಲೇಜಿನಲ್ಲಿ ಮೂರನೇ ವರ್ಷದ ಮೆಕಾನಿಕ್ ಡಿಪ್ಲೋಮೋ ಓದುತ್ತಿದ್ದಾನೆ ಇವನಿಗೆ ಯಶ್ವಿನ್ ಸ್ನೇಹಿತನಾಗಿರುತ್ತಾನೆ. 

ಬಂಧನ

ವಿಚಾರಣೆ ನಡೆಸಿದ ಪೊಲೀಸರು ಜೆಪಿ ನಗರದ ನೇತಾಜಿ ವೃತ್ತದ ಬಳಿಯ ನಿವಾಸಿ, ಚಿನ್ಮಯ್, ಶ್ರೀರಾಮ್ ನಗರದ ಶ್ರೀನಿವಾಸ್, ಕೊರಮರ ಬೀದಿಯ ಚೇತನ್, ಜೆಪಿ ನಗರದ ನೇತಾಜಿ ವೃತ್ತದ ಬಳಿ ವಾಸವಾಗಿರುವ ಮನು, ಅಶೋಕ್ ನಗರದ ಜನತಾ ಕಾಲೋನಿ ನಿವಾಸಿ ಶ್ರೀಧರ, ಆಲ್ಕೊಳ ನಿವಾಸಿ ಕಿಟಿ ಕಿಟಿ ಮಂಜ, ಗೋಪಾಳದ ರಂಗನಾಥ ಬಡಾವಣೆಯ ನಿವಾಸಿ ಅಮಿತ್, ಗಿರೀಶ್ ಗೌಡ, ಅನುಪಿನಕಟ್ಟೆ ನಿವಾಸಿ ವಿನಯ್ ಬಿನ್ ಪರಶುರಾಮ್, ಗೋಪಾಲದ ಸಿ ಬ್ಲಾಕ್ ನಿವಾಸಿ ರಂಗನಾಥ್ ಇವರನ್ನು ಪೊಲೀಸರು ಬಂಧಿಸಿದ್ದಾರೆ

Fight between youths during Holi festival - 10 youths arrested

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close