ಇಪಿಟಿ ನಿರ್ಮಾರಣಕ್ಕೆ ಗ್ರಾಮಸ್ಥರ ವಿರೋಧ-Villagers oppose EPT construction

SUDDILIVE || SHIVAMOGGA

ಇಪಿಟಿ ನಿರ್ಮಾರಣಕ್ಕೆ ಗ್ರಾಮಸ್ಥರ ವಿರೋಧ-Villagers oppose EPT construction     

Villegers, oppose

ಇಪಿಟಿ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ ವ್ಯಕ್ತಡಿಸಿದ್ದಾರೆ. ಇಪಿಟಿ ನಿರ್ಮಾಣಕ್ಕೆ ಮುಂದಾಗಿದ್ದ ಜೆಸಿಬಿ ವಾಹನವನ್ನು ತಡೆದು ಪ್ರತಿಭಟನೆ ನಡೆಸಿದ ಕಾರಣಕ್ಕೆ  ತಾತ್ಕಾಲಿಕವಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳದಿಂದ ಕಾಲುತ್ತಿದ್ದಾರೆ.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಟಿ.ಹನುಮಂತಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿಯ  ಆನವೇರಿ ಗ್ರಾಮಸ್ಥರಿಂದ ಪ್ರತಿಭಟನೆ ನಡೆದಿದೆ. 

ಗ್ರಾಮದ ಬಳಿಯ ಅಮ್ಮನಗುಡ್ಡದ ಬಳಿ ಟ್ರೆಂಚ್ ನಿರ್ಮಾಣಕ್ಕೆ ಮುಂದಾಗಿದ್ದ ಅರಣ್ಯ ಇಲಾಖೆ ಜೆಸಿಬಿಯಿಂದ ಒತ್ತುವರಿ ತೆರವಿನ ನೆಪದಲ್ಲಿ ಬಂದಿದ್ದರು. ಹಿರೇಮಾವುರದಮ್ಮನ ಗುಡ್ಡದ ಬಳಿ ಟ್ರೆಂಚ್ ನಿರ್ಮಾಣಕ್ಕೆ  ಅರಣ್ಯ ಇಲಾಖೆ ಸಿದ್ಧತೆ ನಡೆಸಿತ್ತು. ಒಟ್ಟು ೩೦೦ ಎಕರೆಯಷ್ಟು ವಿಸ್ತೀರ್ಣ ಹೊಂದಿರುವನ್ನ ಈ ಗುಡ್ಡ ಹೊಂದಿದೆ. 

ಈ ಪೈಕಿ ಕಂದಾಯ ಇಲಾಖೆಗೆ ಸೇರಿದ ೧೬೪ ಎಕರೆ ನಮ್ಮದು ಎಂದು ಗ್ರಾಮಸ್ಥರುಹೇಳಿದರೆ. ಉಳಿದ ೧೪೬ ಎಕರೆ ಅರಣ್ಯ ಇಲಾಖೆ ಸೇರಿದ್ದು ಎಂದು ಹೇಳಲಾಗುತ್ತಿದೆ. ಜಾನುವಾರು ಬಳಕೆಗೆ ಮೀಸಲಾಗಿದ್ದ ಕಂದಾಯ ಜಾಗವಿದು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ. 

ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಸುಮಾರ ೧೦೦ ಎಕರೆಯಲ್ಲಿ ಉಳುಮೆ ಮಾಡುತ್ತಿರುವ ರೈತರು, ಉಳಿದ ೬೭ ಎಕರೆ ಜಾನುವಾರು ಮೇವಿಗೆ  ಬಳಕೆಯಾಗುತ್ತಿತ್ತು. ಇದನ್ನು ತನ್ನ ಹೆಸರಿಗೆ  ಅರಣ್ಯ ಇಲಾಖೆ ಇಂಡೀಕರಣಗೊಳಿಸಿ ಜಾಗ ತೆರವಿಗೆ ಬಂದಿದ್ದಾರೆ ಎಂದು ದೂರಿದ್ದಾರೆ. ಇದಕ್ಕೆ ಗ್ರಾಮಸ್ಥರು ಆಕ್ಷೇಪಿಸುತ್ತಿದ್ದಾರೆ. 

ಈ ಜಾಗವನ್ನು ಗ್ರಾಮಸ್ಥರ ಬಳಕೆಗೆ ಮೀಸಲಿಡುವಂತೆ ರೈತರು ಆಗ್ರಹಿಸಿದ್ದಾರೆ. ಯಾವುದೇ ಕಾರಣಕ್ಕೂ ಟ್ರಂಚ್ ನಿರ್ಮಾಣ ಮಾಡಬಾರದೆಂದು ಒತ್ತಾಯಿಸಿದ್ದಾರೆ. ಗ್ರಾಮಸ್ಥರ ಆಗ್ರಹದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ತಾತ್ಕಾಲಿಕವಾಗಿ ಹಿಂದಿರುಗಿದ್ದಾರೆ. 

Villagers oppose EPT construction 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close