ನೈಟ್ ಲ್ಯಾಂಡಿಂಗ್ ತಂತ್ರಜ್ಞಾನ ಅಳವಡಿಕೆಗೆ ಪಾಸಿಟಿವ್ ವರದಿ-Positive report on the implementation of night landing technology

SUDDILIVE || SHIVAMOGGA

ನೈಟ್ ಲ್ಯಾಂಡಿಂಗ್ ತಂತ್ರಜ್ಞಾನ ಅಳವಡಿಕೆಗೆ ಪಾಸಿಟಿವ್ ವರದಿ-Positive report on the implementation of night landing technology   

Air, port

ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ ಬಹುನಿರೀಕ್ಷಿತ ವಿಮಾನಗಳ ನೈಟ್‌ ಲ್ಯಾಂಡಿಂಗ್‌ ಸೌಲಭ್ಯಕ್ಕೆ ಅಗತ್ಯವಿರುವ ಪ್ರಕ್ರಿಯೆಗಳು ವೇಗ ಪಡೆದುಕೊಂಡಿವೆ. ಈ ಸಂಬಂಧ ಕೈಗೊಳ್ಳಲಾಗಿದ್ದ ಮಣ್ಣು ಪರೀಕ್ಷೆಯ ವರದಿ ಈಗ ಪಾಸಿಟಿವ್ ಆಗಿ ಬಂದಿದೆ.

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು ಈ ಕುರಿತು ಪ್ರಕಟಣೆ ನೀಡಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಅವರು, ‘ವಿಮಾನ ನಿಲ್ದಾಣದಲ್ಲಿ ಡಾಪ್ಲರ್ ವೆರಿ ಹೈ ಫ್ರೀಕ್ವೆನ್ಸಿ ಓಮ್ನಿ ರೇಂಜ್ (DoVR) ಉಪಕರಣ ಅಳವಡಿಸಲು ಉದ್ದೇಶಿಸಲಾಗಿದೆʼ ಎಂದು ತಿಳಿಸಿದ್ದರು.

ಮಣ್ಣು ಪರೀಕ್ಷೆಯಲ್ಲಿ ಪಾಸ್‌

ಅತ್ಯಾಧುನಿಕ ತಾಂತ್ರಿಕ ಉಪಕರಣ ಅಳವಡಿಸಲು  ಮೊದಲು ಆ ಪ್ರದೇಶದ ಭೂಮಿಯ ಸ್ಥಿರತೆ ಪರೀಕ್ಷಿಸುವುದು ಕಡ್ಡಾಯವಾಗಿದೆ. ಅದರಂತೆ DoVR ಸ್ಥಾಪಿಸಲು ಉದ್ದೇಶಿಸಲಾದ ಜಾಗದ ಮಣ್ಣನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈಗ ಮಣ್ಣಿನ ಪರೀಕ್ಷಾ ವರದಿ ಲಭ್ಯವಾಗಿದ್ದು, ಉಪಕರಣ ಅಳವಡಿಕೆಗೆ ಮಣ್ಣು ಪೂರಕವಾಗಿದೆ ಎಂದು ದೃಢಪಟ್ಟಿದೆ.

DoVR ಅಳವಡಿಕೆ ಕಾರ್ಯ ಆರಂಭ

‘ಮಣ್ಣು ಪರೀಕ್ಷೆ ಯಶಸ್ವಿಯಾದ ಬೆನ್ನಲ್ಲೇ, DoVR ಕೆಲಸ ಪ್ರಾರಂಭವಾಗಿವೆʼ ಎಂದು ನಂಜಯ್ಯನಮಠ ಅವರು ತಿಳಿಸಿದ್ದಾರೆ. ಈ ತಾಂತ್ರಿಕ ಸೌಲಭ್ಯವು ಕಾರ್ಯಗತಗೊಂಡರೆ, ವಿಮಾನಗಳು ರಾತ್ರಿ ವೇಳೆ ಹಾಗೂ ಮಂದ ವಾತಾವರಣ ಇರುವ ಸಂದರ್ಭದಲ್ಲೂ ಸುರಕ್ಷಿತವಾಗಿ ವಿಮಾನವನ್ನ ಇಳಿಯಲು ಸಹಕಾರಿಯಾಗಲಿದೆ.

ಕಳೆದ ತಿಂಗಳು ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಮಾನ ನಿಲ್ದಾಣದ ಅಭಿವೃದ್ಧಿ ಮತ್ತು ನೈಟ್‌ ಲ್ಯಾಂಡಿಂಗ್‌ ಸೌಲಭ್ಯದ ವಿಳಂಬದ ಬಗ್ಗೆ ಚರ್ಚೆಗಳಾಗಿದ್ದವು.

Positive report on the implementation of night landing technology

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close