ಹೋಳಿ ಹಬ್ಬದ ವೇಳೆ ಯುವಕರ ನಡುವೆ ಮಾರಾಮಾರಿ-Fight breaks out between youths during Holi celebrations

 SUDDILIVE || SHIVAMOGGA

ಹೋಳಿ ಹಬ್ಬದ ವೇಳೆ ಯುವಕರ ನಡುವೆ ಮಾರಾಮಾರಿ-Fight breaks out between youths during Holi celebrations    

Fight, youths


ವಾಚ್ ವಿಚಾರದಲ್ಲಿ ಯುವಕರ ನಡುವೆ ಗಲಾಟೆಯಾಗಿದೆ. ಬೇರೆ ಬೇರೆ ಕಾಲೇಜಿನ ಯುವಕರ ನಡುವೆ ಗಲಾಟೆಯಾಗಿದೆ. ಇದರಲ್ಲಿ ಇಬ್ಬರಿಗೆ ಹೊಡೆತ ಬಿದ್ದಿದ್ದು ಇಬ್ವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ವಾಚ್ ನ್ನ ವಿಚಾರದಲ್ಲಿ ಸಚಿನ್(20) ಎಂಬುವನ ಬಳಿಯಿಂದ ಕಿತ್ತುಕೊಂಡು ನನ್ನದು ವಾಚ್ ಎಂದು ಒಂದು ಗುಂಪು ಸಚಿನ್ ಮೇಲೆ ದಾಳಿ ನಡೆದಿದೆ. ಈ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಹೋಳಿಹಬ್ಬದ ವೇಳೆ ಗಲಾಟೆಯಾಗಿದೆ. ಇದರಲ್ಲಿ ಅಪ್ರಾಪ್ತನೊಬ್ಬನ ಮೇಲೂ ಮಾರಣಾಂತಿಕ ಹಲ್ಲೆ ನಡೆದಿದೆ. 

ಅಪ್ರಾಪ್ತ ಹಾಗೂ ಸಚಿನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕೈದು ಜನ ಬೇರೆ ಬೇರೆ ಕಾಲೇಜಿನ ಯುವಕರು ದೊಡ್ಡಪೇಟೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿದ್ದಯುವಕರನ್ನ ಹೋಳಿ ಆಡೋಣವೆಂದು ಕರೆದುಕೊಂಡು ಬಂದು ಜೆಪಿ ನಗರದಲ್ಲಿ ಹಲ್ಲೆ ನಡೆಸಿದ್ದಾರೆ.

ಈ ವಿಚಾರದ ಸಂಬಂಧ ತುಂಗ ನಗರ ಪೊಲೀಸರು ನಾಲ್ಕು ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಗಲಾಟೆ ಹೊರತು ಪಡಿಸಿ ಹೋಳಿ ಹಬ್ಬ ಭರ್ಜರಿಯಾಗಿ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಗೋಪಿ ವೃತ್ತದಲ್ಲಿ ಹಿಂದೂ ಕೇಸರಿ ಅಲಂಕಾರ ಸಮಿತಿ ಡಿಜೆ ಹಾಕಿ ಯುವಕರನ್ನ ಕುಣಿಸಿಕುಪ್ಪಳಿಸಿದ್ದಾರೆ. ಯುವಕರು ಯುವತಿಯರು ಹೋಳಿಯಲ್ಲಿ ಮಿಂದೆದ್ದಿದ್ದಾರೆ. 

ಇದೇ ವೇಳೆ ಮಾಜಿ ಡಿಸಿಎಂ ಈಶ್ವರಪ್ಪ ಮತ್ತು ಅವರ ಕುಟುಂಬ ಮನೆಯ ಮುಂದೆ ಹೋಳಿ ಹಬ್ಬದಲ್ಲಿ ಮಿಂದೆದ್ದಿದ್ದಾರೆ. ಶಾಸಕ ಚೆನ್ನಬಸಪ್ಪ ಹೋಳಿ ಸಂಭ್ರಮಾಚರಣೆಯಲ್ಲಿ ಬಣ್ಣಹಚ್ಚಿಕೊಂಡು ಯುವಕರ ಜೊತೆ ಡಿಜೆಗೆ ಕುಣಿದುಕುಪ್ಪಳಿಸಿದ್ದಾರೆ. 

Fight breaks out between youths during Holi celebrations

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close