SUDDILIVE || SHIVAMOGGA
ದಾವಣಗೆರೆಯಲ್ಲಿ ನಡೆಯುತ್ತಿರುವುದೇನು? ಈಶ್ವರಪ್ಪ ಪ್ರಶ್ನೆ- What is happening in Davangere? Eshwarappa's question
ಉಪಚುನಾವಣೆ ರೀತಿ ಅನೇಕ ಚುನಾವಣೆ ನಡೆಯುತ್ತೆ, ಆ ಸಂದರ್ಭದಲ್ಲಿ ಹಿಂದುತ್ವ, ಹಿಂದೂಗಳ ಬಗ್ಗೆ ಅನೇಕ ಮುಖಂಡರು ಮಾತಾಡ್ತಾರೆ. ಹಿಂದುತ್ವದ ಬಗ್ಗೆ ಮಾತಾಡಿದ್ದಕ್ಕೆ ನನ್ನ ಮೇಲೆ 5 ಕೇಸ್ ಇದೆ. ಆದ್ರೇ, ಈಗ ಪ್ರತಿನಿತ್ಯ ದಾವಣಗೆರೆಯಲ್ಲಿ ಏನು ನಡೀತಿದೆ..? ಎಂದು ಮಾಜಿ ಡಿಸಿಎಂ ಈಶ್ವಪ್ಪ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸಲ್ಮಾನರಿಗೆ ಟಿಕೆಟ್ ಕೊಡದಿದ್ರೇ ನಾನು ರಾಜೀನಾಮೆ ಕೊಡ್ತೇನೆ ಎಂದು ಸಚಿವ ಜಮೀರ್ ಅಹ್ಮದ್ ಹೇಳ್ತಾರೆ. ಸಿಎಂ, ಡಿಸಿಎಂ ಸೇರಿದಂತೆ ಅನೇಕ ಮುಖಂಡರು ಮುಸ್ಲಿಂರಿಗೆ ಅನ್ಯಾಯ ಆಗಿದೆ. ಮುಸ್ಲಿಮರನ್ನ ಸಂತೃಪ್ತಿ ಪಡಿಸ್ತೇವೆ ಅಂತಾರೆ. ಚುನಾವಣಾ ಆಯೋಗ ಬದುಕಿದ್ರೇ ಎಲ್ಲರ ಮೇಲೆ ಕೇಸ್ ಹಾಕಬೇಕು ಎಂದರು.
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಸಲೀಂ ಅಹಮದ್, ಜಮೀರ್ ಅಹಮದ್, ರಿಜ್ವಾನ್ ಮೇಲೆ ಕೇಸ್ ಹಾಕಬೇಕು. ಮುಸ್ಲಿಂ ಧರ್ಮ ಪ್ರಚೋಧಿಸಿ, ಧರ್ಮದ ಆಧಾರದಲ್ಲಿ ಚುನಾವಣೆ ಮಾಡ್ತಿದ್ದಾರೆ.
ಹಿಂದುಗಳ ಬಗ್ಗೆ ಮಾತಾಡಿದ್ರೇ ಮಾತ್ರ ಕೋಮುವಾದನಾ?ಚುನಾವಣೆ ವೇಳೆ ಮುಸ್ಲಿಂರ ಪರ ಮಾತಾಡಿದ್ರೇ ಅದು ಜಾತ್ಯಾತೀತತೆ ನಾ..?ಇಲ್ಲವಾದ್ರೇ ನಮ್ಮ ಮೇಲೆ ಹಾಕಿರುವ ಕೇಸ್ ವಾಪಸ್ ತಗೊಳ್ಳಿ. ನಾವು ಮಾಡಿದ್ದು ತಪ್ಪಾಯ್ತು ಎಂದು ಕೇಸ್ ವಾಪಸ್ ಪಡೆಯಿರಿ ಎಂದು ಆಗ್ರಹಿಸಿದರು.
ಹಿಂದುಗಳು ಚುನಾವಣೆ ವೇಳೆ ಎಚ್ಚೆತ್ತುಕೊಳ್ಳಬೇಕು. ರಾಷ್ಟ್ರೀಯ ಚಿಂತನೆ, ಹಿಂದೂಗಳ ರಕ್ಷಣೆ ಮಾಡುವ ಅಭ್ಯರ್ಥಿ ಬೆಂಬಲಿಸಬೇಕು ಎಂದು ಈಶ್ವರಪ್ಪ ಪುನರ್ ಉಚ್ಚರಿಸಿದ್ದಾರೆ.
What is happening in Davangere? Eshwarappa's question

