SUDDILIVE || SHIVAMOGGA
ಹರ್ನಿಯಾ ಚಿಕಿತ್ಸೆ ಪಡೆದಿದ್ದ ಮಹಿಳೆ ದಿಡೀರ್ ಎಂದು ಕೋಮಾಗೆ-Woman who was treated for Harniya suddenly falls into a coma
ಹರ್ನಿಯಾ ಸಮಸ್ಯೆಗೆ ಒಳಗಾದ ಮಹಿಳೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆ ಪಡೆದುಕೊಂಡು ಕೆಲವೇ ಗಂಟೆಯಲ್ಲಿ ಬ್ರೈನ್ ಸ್ಟ್ರೋಕ್ ನಿಂದ ಕೋಮಾಗೆ ತಲುಪಿರುವ ಘಟನೆ ನಡೆದಿದ್ದು, ರೋಗಿಯ ಕುಟುಂಬ ಖಾಸಗಿ ಆಸ್ತ್ರೆಯ ವೈದ್ಯರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆಯನೂರಿನ ಕೋಟೆ ತಾಂಡದ ಮಹಿಳೆ ದೇವಿ ಬಾಯಿ (47) ಎಂಬುವರು ಹರ್ನಿಯಾ ಸಮಸ್ಯೆಯಿಂದಾಗಿ ಜಯನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ಬಂದು ಮಾ.11 ನೇ ತಾರೀಖು ಅಡ್ಮಿಟ್ ಆಗಿದ್ದರು. ಅದೂ ಮೆಗ್ಗಾನ್ ಗೆ ತೆರಳಿದ್ದ ಮಹಿಳೆಗೆ ಅಲ್ಲೇ ಸಿಕ್ಕ ರೋಗಿಗಳ ಕಡೆಯವರು ಮೆಗ್ಗಾನ್ ನಲ್ಲಿ ಕೆಲಸ ಮಾಡುವ ವೈದ್ಯರೇ ಜಯನಗರ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಾರೆ ಎಂದು ಹೇಳಿದ ಮೇರೆಗೆ ಜಯನಗರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದಕ್ಕೂ ಮೊದಲು, ಮೆಗ್ಗಾನ್ ನಲ್ಲಿ ಚಿಕಿತ್ಸೆ ತಡ ಮಾಡಿದ್ದರಿಂದ ಅಲ್ಲಿ ಸಿಕ್ಕ ಸಹ ರೋಗಿಗಳು ಜಯನಗರ ಖಾಸಗಿ ಆಸ್ಪತ್ರೆಯಲ್ಲೂ ಇದೇ ವೈದ್ಯ ಡಾ. ಧನಂಜಯ ಕುಮಾರ್ ಸೇವೆ ಸಲ್ಲಿಸುತ್ತಿರುವುದರಿಂದ ಅಲ್ಲಿಗೆ ಹೋಗಿ ಎಂದು ಹೇಳಿದ ಕಾರಣ ದೇವಿ ಬಾಯಿ ಜಯನಗರ ಖಾಸಗಿ ಆಸ್ಪತ್ರೆಗೆ ಬಂದು ದಾಖಲಾಗಿದ್ದರು.
ಮಾ.12 ರಂದು ಹರ್ನಿಯಾ ಶಸ್ತ್ರಚಿಕಿತ್ಸೆ ಆಗುತ್ತಿದ್ದಂತೆ ಮಹಿಳೆಗೆ ಬ್ರೈನ್ ಸ್ಟ್ರೋಕ್ ಆಗಿ ಕೈ ಮತ್ತು ಕಾಲಿನ ಚಲನ ವಲನ ಕಡಿಮೆಯಾಗಿದೆ. ಬ್ರೈನ್ ಸ್ಟೋಕ್ ಹೊಡೆದಾಗಲೇ ಹೇಳಿದ್ದರೆ ನಮಗೆ ಗೋಲ್ಡನ್ ಟೈಮ್ ನಲ್ಲಿ ಚಿಕಿತ್ಸೆ ಕೊಡಿಸಬಹುದಿತ್ತು ಎಂದು ರೋಗಿಯ ಕುಟುಂಬ ಮಾಧ್ಯಮಗಳ ಜೊತೆ ಅಳಲು ಹೇಳಿಕೊಂಡಿದೆ.
ಇತ್ತ ಜಯನಗರದಲ್ಲಿರುವ ಖಾಸಗಿ ಆಸ್ಪತ್ರೆಯ ವೈದ್ಯರು ಹರ್ನಿಯಾ ಚಿಕಿತ್ಸೆಯ ಮರುದಿನ ರೋಗಿಯ ಒಂದು ಕೈ ಮತ್ತು ಒಂದು ಕಾಲಿನಚಲನ ವಲನ ಕಡಿಮೆಯಾಗಿದ್ದರಿಂದ ತಕ್ಷಣವೇ ಅವರನ್ನಬೇರೆ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದೇವೆ ಎಂದು ಹೇಳಿದ್ದಾರೆ. ನಮ್ಮಲ್ಲಿ ಎಲ್ಲಿಯೂ ವೈದ್ಯಕೀಯ ನಿರ್ಲಕ್ಷವಾಗಿಲ್ಲ. ಬೇಕಾದರೆ ಸಂಬಂಧ ಪಟ್ಟ ರೋಗಿಗಳು ಕಾನೂನಾತ್ಮಕ ಕ್ರಮಜರುಗಿಸಲಿ ಎಂದು ಸವಾಲು ಸಹ ಹಾಕಿದ್ದಾರೆ.
ಮಾ.13 ರ ನಂತರ ಮಹಿಳೆಯನ್ನ ನಂಜಪ್ಪ ಆಸ್ಪತ್ರೆಗೆ ತಂದು ಬ್ರೈನ್ ಸ್ಟ್ರೋಕ್ ಗೆ ಚಿಕಿತ್ಸೆ ಕೊಡಿಸಲಾಗಿದೆ. ಕಣ್ಣುಬಿಟ್ಟರೂ ಹಾಸಿಗೆಯಿಂದ ಏಳುವ ಸ್ಥಿತಿಯಲ್ಲಿ ಮಹಿಳೆ ಇಲ್ಲವಾಗಿದ್ದಾರೆ. ಇಲ್ಲಿ ಯಾರದ್ದು ತಪ್ಪಿದೆ ಎಂಬುದು ಓದುಗರೆ ಗುರುತಿಸಲಿ. ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರದ ಆದೇಶದ ಪ್ರಕಾರ ಆಸ್ಪತ್ರೆಯ ರಿಸೆಪ್ಷನ್ ನಲ್ಲಿ ಯಾವ ಚಿಕಿತ್ಸೆಗೆ ಯಾವ ದರ ಎಂಬ ದರದ ರೇಟು ಸಹ ಹಾಕಿಲ್ಲ. ಆದರೆ ಇಲ್ಲಿನ ವೈದ್ಯರು ಕಾನೂನು ಹೋರಾಟ ನಡೆಸಲಿ ಎಂದು ಸವಾಲು ಹಾಕಿರುವುದು ಅಚ್ಚರಿ ಮೂಡಿಸಿದೆ.
ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗೆ ಬಂದು ಇಲ್ಲಿ ಸೇವೆ ಸಲ್ಲಿಸುತ್ತಾರೆ. ಪತ್ರಕರ್ತರು ಬೈಟ್ ಪಡೆಲು ಹೋದಾಗ ಉದ್ದಟತನ ತೋರಿ ನಾವು ಕಾನೂನಾತ್ಮಕವಾಗಿ ಸರಿಯಿದ್ದೇವೆ ಎಂದು ಫೋಸ್ ಕೊಡುತ್ತಾರೆ.
ಒಟ್ಟಿನಲ್ಲಿ ಅಮಾಯಕ ಮಹಿಳೆಯ ಜೀವಕ್ಕೆ ಕುತ್ತು ಬಂದಿದೆ. ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೀವಂತವಾಗಿದ್ದರೆ ಮಹಿಳೆಗೆ ನ್ಯಾಯ ಕೊಡಿಸಲಿ. ಈಗಾಗಲೆ ರೋಗಿಯ ಕುಟುಂಬ ಜಯನಗರ ಪೊಲೀಸ್ ಠಾಣೆಗೆ ಖಾಸಗಿ ಆಸ್ಪತ್ರೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಏನಾಗಲಿದೆ ಕಾದುನೋಡೋಣ
Woman who was treated for Harniya suddenly falls into a coma

