SUDDILIVE || SHIVAMOGGA
ಲೋಡಿಗಾಗಿ ಪಾಳೆ ಹಚ್ಚಿದ ಲಾರಿಯಲ್ಲಿ ಕಾಣಿಸಿಕೊಂಡ ಬೆಂಕಿ- Fire breaks out in lorry parked for loading
ನಗರದ ರೈಲ್ವೆ ಗೋಡನ್ ನಲ್ಲಿ ಯೂರಿಯಾ ಲೋಡ್ ಮಾಡಲು ನಿಂತಿದ್ದ ಲಾರಿಯ ಕ್ಯಾಬಿನ್ ನಲ್ಲಿ ದಿಡೀರ್ ಎಂದು ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಆರಿಸುವ ಮುನ್ನ ಕ್ಯಾಬಿನ್ ಗೆ ಬೆಂಕಿ ಆವರಿಸಿಕೊಂಡು ಕರಕಲಾಗಿದೆ.
ರೈಲ್ವೆ ನಿಲ್ದಾಣಕ್ಕೆ ಯೂರಿಯಾ ಚೀಲಗಳು ಇಂದು ಬರುತ್ತದೆ ಎಂಬ ಮಾಹಿತಿ ಆಧಾರದ ಮೇರೆಗೆ ಅಬೀದ್ ಎಂಬುವರು ನಿನ್ನೆ ರಾತ್ರಿಯೇ ಪಾಳೆಹಚ್ಚಿ ಹೋಗಿದ್ದರು. ಇಂದು ಬೆಳಗಿನ ಜಾವ 6 ಗಂಟೆಗೆ ಸುಮರಿಗೆ ಕ್ಯಾಬಿನ್ ನಲ್ಲಿ ಬೆಂಕಿ ಆವರಿಸಿಕೊಂಡಿದೆ.
ಬಾಪೂಜಿ ನಗರದಲ್ಲಿರುವ ಅಬೀದ್ ಅವರು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸಲು ಯತ್ನಿದ್ದಾರೆ. ಗಾಳಿಗೆ ಲಾರಿ ಕ್ಯಾಬಿನ್ ಆವರಿಸಿಕೊಂಡಿದೆ. ನಂತರ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದೆ. ಅಗ್ನಿಶಾಮಕ ದಳ ಬೆಂಕಿಯನ್ನ ನಂದಿಸಿದ್ದಾರೆ. ಲಾರಿ ಯೂರಿಯಾಗೆ ಲೋಡ್ ಮಾಡಿಕೊಂಡು ಶಿಕಾರಿಪುರಕ್ಕೆ ಹೋಗಬೇಕಿತ್ತು.
Fire breaks out in lorry parked for loading
