SUDDILIVE || SHIVAMOGGA
ದುಬೈನಲ್ಲಿ ಎಲ್ಲಾ ಭಾರತೀಯರು ಸೇಫ್, ಸಧ್ಯಕ್ಕೆ ಯಾವ ದರವೂ ಏರಿಸೊಲ್ಲ-ಸಿಎಂ-All Indians are safe in Dubai, no price hike for now - CM
ಇರಾನ್ ದೇಶದ ಮೇಲೆ ಅಮೆರಿಕ ಹಾಗೂ ಇಸ್ರೇಲ್ ನಡೆಸಿರುವ ದಾಳಿ ಹಾಗೂ ಹಯಾತುಲ್ಲಾ ಖಮೈನಿ ಹತ್ಯೆಯನ್ನು ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ ಅಮೆರಿಕ ದ್ವಂದ್ವ ನಿಲುವನ್ನು ತಾಳಿದೆ ಎಂದು ವ್ಯಾಖ್ಯಾನಿಸಿದ್ದಾರೆ
ಶಿವಮೊಗ್ಗ ಏರ್ಪೋರ್ಟ್ ನಲ್ಲಿ ಮಾತನಾಡಿದ ಅವರು ಅಮೆರಿಕ ಒಂದು ಕಡೆ ಶಾಂತಿಮಂತ್ರವನ್ನು ಹೇಳುತ್ತದೆ ಇನ್ನೊಂದು ಕಡೆ ಈ ರೀತಿ ದಾಳಿ ನಡೆಸಿ ಇರಾನ್ ಪ್ರಧಾನಿಯನ್ನು ಹತ್ಯೆಗೈದಿದೆ. ಅಮೆರಿಕದ್ದು ತದ್ವಿರುದ್ಧವಾದ ನಿಲುವುಗಳು ಇದನ್ನ ನಾನು ತೀವ್ರವಾಗಿ ಖಂಡಿಸುತ್ತೇನೆ ಖಮೈನಿಯವರ ಹತ್ಯೆಯಾಗಿದ್ದು ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕೋರುತ್ತೇನೆ ಎಂದು ತಿಳಿಸಿದರು.
ದುಬೈ ನಲ್ಲಿ ಕನ್ನಡಿಗರು ಹಾಗೂ ಪ್ರವಾಸಿಗರು ಸಿಲುಕಿಕೊಂಡಿರುವ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರದ ಜೊತೆ ಮಾತನಾಡಿದ್ದೇನೆ. ಸರ್ಕಾರದ ಮುಖ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಜೊತೆಯು ಮಾತನಾಡಿದ್ದೇನೆ ಈಗಾಗಲೇ ದುಬೈ ನಲ್ಲಿ ಏರ್ ಪೋರ್ಟ್ ಗಳು ಬಂದಾಗಿವೆ ಏರ್ಪೋರ್ಟ್ ಗಳು ಆರಂಭಗೊಂಡ ತಕ್ಷಣವೇ ಅವರನ್ನೆಲ್ಲ ಕರೆಸಿಕೊಳ್ಳುವ ಕಾರ್ಯ ಚಾಲನೆಗೊಳ್ಳುತ್ತದೆ ಎಂದರು
ಎಂಎಲ್ಸಿ ಬೋಜೇಗೌಡರು ದುಬೈ ಏರ್ಪೋರ್ಟಲ್ಲಿ ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ಇದೆ ಅವರೊಂದಿಗೆ ನಾನು ಮಾತನಾಡಿದ್ದೇನೆ ಅವರಿಗೆ ಹೋಟೆಲ್ನಲ್ಲಿ ತಂಗಿದ್ದಾರೆ ವಿದೇಶಾಂಗ ಸಚಿವಾಲಯ ಜೊತೆ ನಾನು ಮಾತನಾಡುತ್ತೇನೆ. ವಿಡಿಯೋ ಕಾಲ್ ಮುಖಾಂತರ ಮಾತನಾಡಿದ್ದೇನೆ. ಬಳ್ಳಾರಿಯ 35 ಜನ ಕನ್ನಡಿಗರು ದುಬೈನಲ್ಲಿ ಸಿಲುಕಿಕೊಂಡಿದ್ದಾರೆ. ನಾವು ವಿಧೇಶಾಂಗ ಕಾಯಾಲಯದ ಜೊತೆ ಸಂಪರ್ಕದಲ್ಲಿದ್ದೇವೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆಯುತ್ತಿದೆ. ಸಧ್ಯಕ್ಕೆ ದುಬೈನಲ್ಲಿ ಎಲ್ಲಾ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದರು.
ಬಜೆಟ್ ಬಗ್ಗೆ ಕೇಳಿದ ಪ್ರಶ್ನೆಗೆ ಬಜೆಟ್ ವರೆಗೂ ಕಾದು ನೋಡಿ ಎಂದಿರುವ ಸಿಎಂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಮಾಧ್ಯದಮದವರ ಪ್ರಶ್ನೆಗೆ ಜೊತೆಯಲ್ಲಿದ್ದ ಶಾಸಕ ಚೆನ್ನಬಸಪ್ಪನವರನ್ನ ನೋಡಿ ವಿಪಕ್ಷಗಳಿಗೆ ಬೇರೆ ಏನೂ ಕೆಲಸವಿಲ್ಲ ಎಂದು ಹಾಸ್ಯ ಮಾಡಿದರು. ಹಾಗೆ ಏಪ್ರಿಲ್ ನಲ್ಲಿ ವಿದ್ಯುತ್ ದರ ಏರಿಕೆಯಾಗುತ್ತಾ ಎಂಬ ಪ್ರಶ್ನೆಗೆ ಸದ್ಯಕ್ಕೆ ಬೆಲೆ ಏರಿಕೆಯಾವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮೊದಲು ಸೂಳೆಬೈಲಿನಲ್ಲಿ ಹತ್ಯೆಯಾದ ಸಂಕೇತ್ ಕುಟುಂಬಕ್ಕೆ ಸರ್ಕಾರ ಘೋಷಿಸಿದ ಪರಿಹಾರ ನಿಧಿಯ 15 ಲಕ್ಷ ರೂ.ಗಳ ಚೆಕ್ ನ್ನ ನೀಡಿದರು.
All Indians are safe in Dubai, no price hike for now - CM
