SUDDILIVE || SHIVAMOGGA
15309 ಮಕ್ಕಳಲ್ಲಿ 15063 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು-15063 students out of 15309 children appeared for the exam
ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಇಂದಿನಿಂದ ಆರಂಭವಾಗಿದೆ. ಅದರಂತೆ ಶಿವಮೊಗ್ಗದಲ್ಲಿ ನಡೆದ ಮೊದಲನೇ ದಿನದ ಪರೀಕ್ಷೆಯಲ್ಲಿ ಇಂದು 15309 ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನ ಬರೆಯಬೇಕಿದ್ದು, ಇದರಲ್ಲಿ 15063 ಜನ ಮಕ್ಕಳು ಪರೀಕ್ಷೆ ಬರೆದಿದ್ದಾರೆ. 246 ಜನ ಗೈರಾಗಿದ್ದಾರೆ. ಒಟ್ಟು 98.6% ಮಕ್ಕಳು ಇಂದು ಪರೀಕ್ಷೆ ಎದುರಿಸಿದ್ದಾರೆ.
ಏಳು ತಾಲೂಕಗಳಾದ ಶಿವಮೊಗ್ಗದಲ್ಲಿ 17, ಭದ್ರಾವತಿಯಲ್ಲಿ 06, ತೀರ್ಥಹಳ್ಳಿ ಮತ್ತು ಹೊಸನಗರದಲ್ಲಿ ತಲಾ 03, ಸಾಗರ ಮತ್ತು ಶಿಕಾರಿಪುರದಲ್ಲಿ ತಲಾ 05 ಮತ್ತು ಸೊರಬದಲ್ಲಿ 02 ಪರೀಕ್ಷಾ ಕೇಂದ್ರಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 41ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದೆ.
15063 students out of 15309 children appeared for the exam

