SUDDILIVE || BHADRAVATHI
ಎತ್ತಿನ ಗಾಡಿಯಿಂದ ಕುಸಿದು ಬಿದ್ದು ಕೂಲಿಕಾರ್ಮಿಕ ಸಾವು-Laborer dies after falling from bullock cart
![]() |
| ಸಾಂಧರ್ಭಿಕ ಚಿತ್ರ |
ಅಡಿಕೆ ಮರ ಕಡೆದುಕೊಂಡು ಭದ್ರಾವತಿ ಕಡೆಗೆ ತೆರಳುತ್ತಿದ್ದ ಕೂಲಿಕಾರ್ಮಿಕನೋರ್ವ ದಿಡೀರ್ ಎಂದು ಎತ್ತಿನ ಗಾಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ.
ಇಂದು ಬೆಳಿಗ್ಗೆ ಭದ್ರಾವತಿಯ ಜೆಡಿಕಟ್ಟೆ ಹೊಸೂರಿನಿಂದ ಶರವಣ ಎಂಬ 53 ವರ್ಷದ ಕೂಲಿಕಾರ್ಮಿಕ 20 ಅಡಿ ಉದ್ದದ ಅಡಿಕೆ ಮರವನ್ನ ಕಡಿದುಕೊಂಡು ಎತ್ತಿನಗಾಡಿಯಲ್ಲಿ ಹಾಕಿಕೊಂಡು ಭದ್ರಾವತಿ ಕಡೆ ಬಂಡಿಹೊಡೆದುಕೊಂಡು ಬರುತ್ತಿದ್ದನು. ಈ ವೇಳೆ ಜೇಡಿಕಟ್ಟೆಯ ವಿನಾಯಕ ಇಂಡಸ್ಟ್ರೀಸ್ ಬಳಿ ಶರವಣ ಎತ್ತಿನಗಾಡಿಯಿಂದ ಕುಸಿದು ಬಿದ್ದು ಸ್ಥಳದಲ್ಲಿಯೇ ಸಾವು ಕಂಡಿದೆ.
ದೇಹದ ರಕ್ತದಲ್ಲಿ ಸೋಡಿಯಂ, ಕ್ಯಾಲ್ಷಿಯಂ, ಪೊಟಾಷಿಯಂ ಏನಾದರೂ ಹೆಚ್ಚಿಗೆ ಇದ್ದರೆ ಅಥವಾ ಕಡಿಮೆಯಿದ್ದರೆ ಎಲೆಕ್ಟ್ರೋಲೈಟ್ಸ್ ಇಂಬ್ಯಾಲೆನ್ಸ್ ಉಂಟಾಗುವ ಸಾಧ್ಯತೆಯಿಂದ ಪ್ರಾಣ ಕಳೆದುಕೊಳ್ಳಬಹುದಾಗಿದೆ. ಮೇಲ್ನೇಟಕ್ಕೆ ಈ ರೀತಿಯ ವ್ಯತ್ಯಾಸದಿಂದ ಶರವಣ ಸತ್ತಿರಬಹುದೆಂದೆ ಶಂಕಿಸಲಾಗಿದೆ.
ಆದರೂ ಆತನ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ವರದಿಯಿಂದ ಆತನ ಸಾವು ಖಚಿತಗೊಳಲಿದೆ. ಪ್ರಕರಣ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Laborer dies after falling from bullock cart
