SUDDILIVE || SHIVAMOGGA
ಸಿಮ್ಸ್ ನಲ್ಲಿ ಮಕ್ಕಳವಿಭಾಗದಲ್ಲಿ 30 ಬೆಡ್ ಹಾಸಿಗೆ ಆಸ್ಪತ್ರೆ-30-bed hospital in the pediatric ward at SIMS
ಸಿಮ್ಸ್ ಸಂಸ್ಥೆಯ ಮಕ್ಕಳ ವಿಭಾಗಕ್ಕೆ ಹೊಸದಾಗಿ 30 ಹಾಸಿಗೆ ಸಾಮರ್ಥ್ಯದ ಎನ್ ಐ ಸಿ ಯು ಘಟಕ ಸ್ಥಾಪಿಸುವ ಕುರಿತು ಸಂಸದ ರಾಘವೇಂದ್ರ ಸುದ್ದಿಗೋಷ್ಠಿ ನಡೆಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇವರ ನಿಧಿಯಲ್ಲಿ ರೂ.5.00 ಕೋಟಿಗಳು ಮಂಜೂರಾಗಿದೆ. ನವಜಾತ ಶಿಶುಗಳ ಆರೈಕೆಗೆ ಈ 30 ಬೆಡ್ ಹಾಸಿಗೆ ನಿರ್ಮಿಸಲಾಗಿದೆ.
ಈ ಹಿಂದೆ ಬಿಎಸ್ ವೈ ಸಿಎಂ ಆಗಿದ್ದಾಗ ಎನ್ ಐಸಿಯು ಘಟಕ ಆಕಸ್ಮಿಕ ಬೆಂಕಿ ಹತ್ತಿಕೊಂಡು ಭಸ್ಮವಾಗಿತ್ತು. ಅಲ್ಲಿ ಮಕ್ಕಳನ್ನ ಈ ಅವಘಢವನ್ನ ತಪ್ಪಿಸಲಾಗಿತ್ತು. ಹೊರ ಜಿಲ್ಲೆಯಿಂದ ಪೇಷೆಂಟ್ ಗಳು ಬರ್ತಾಯಿದ್ದರು. ಈ ಎನ್ಐಸಿಯುಬೆಡ್ ಹೆಚ್ಚಿಸಲು ನನಗೆ ಹೆಚ್ಚಿನ ಬೇಡಿಕೆಯನ್ನ ಸಂಬಂಧಿತ ಅಧಿಕಾರಿಗಳುಬೇಡಿಕೆ ಯಿಟ್ಟಿದ್ದರು. ಒಮ್ಮೆ ಕೇಂದ್ರ ಹಣಕಾಸಿನ ಮಂತ್ರಿಗಳಿಗೆ ಅನುದಾನದ 5 ಕೋಟಿ ಹಣ ಕೊಡಿ ಎಂದಾಗ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ವಿವರಿಸಿದರು.
ಸಿಎಸ್ಆರ್ ಫಂಡ್ ನಲ್ಲಿ ಹಲವು ಯೋಜನೆ
ಆರ್ ಡಿಪಿಆರ್ ಗೆ ಟೆಂಡರ್ ಕರೆಯಲಾಗಿದೆ. ಇನ್ಫ್ರಾಸ್ಟ್ರಕ್ಚರ್ ಗೆ 60 ಲಕ್ಷ ಕೊಟ್ಟಿದ್ದಾರೆ. ಉಳಿದ ಇನ್ ಸ್ಟ್ರುಮೆಂಟ್ಸ್ ಗೆ 4.4 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಸೂಕ್ಷ್ಮವಾದ ಕ್ಷೇತ್ರಕ್ಕೆ ಕೇಂದ್ರ ಸಚಿವರಿಗೆ ಮನವರಿಕೆಯಾಗಿ ಬಿಡುಗಡೆ ಮಾಡಿದ್ದಾರೆ. ಶಾರದ ಅಂಧರ ಶಾಲೆಗೆ ಸಿಎಸ್ಆರ್ ಫಂಡ್ ನಲ್ಲಿ ಒ ಸೋಲಾರ್ ಇನ್ ಸ್ಟ್ರುಮೆಂಟ್ಸ್ ನೀಡಲು ಕೇಂದ್ರ ಸರ್ಕಾರ ಅನುದಾನ ನೀಡಲಿದೆ. ಒನ್ ಜಿಸಿ ಅಡಿಯಲ್ಲಿ ಒಂದು ಸಾವಿರ ಗ್ರಾಮಗಳಿಗೆ ಸೋಲಾರ್ ಲೈಟ್ಸ್ ಗಳನ್ನ ಅಳವಡಿಸಲಾಗಿದೆ. ಇದರ ಅಡಿಯಲ್ಲಿ ಮತ್ತೊಂದು ಯೋಜನೆ ಅಡಿ 600 ಹೊಲಿಗೆ ಮಿಷಿನ್ ನೀಡಲಾಗುತ್ತಿದ್ದು, ಬೈಂದೂರಿನಲ್ಲಿ ಹಂಚಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಸ್ವಚ್ಛದಲ್ಲಿ ಮೆಗ್ಗಾನ್ ನಂಬರ್ ಒನ್ ಇದೆ. 1800 ಸಿಬ್ಬಂದಿಗಳು ಮತ್ತು ವೈದ್ಯರು ಇದ್ದಾರೆ. ಸೇವೆಯಲ್ಲೂ ನಂಬರ್ ಒನ್ ಬೇಕಿದೆ ಇದಕ್ಕೆ ಏನು ಮಾಡಬಹುದು ಯೋಚಿಸಬೇಕಿದೆ. ಮತ್ತೊಂದು ಜಿಲ್ಲಾ ಆಸ್ಪತ್ರೆಯನ್ನ ಫಾರೆಸ್ಟ್ ಡಿಪೋದಲ್ಲಿ ಜಾಗವಿದೆ ರಾಜ್ಯ ಸರ್ಕಾರ ಮತ್ತು ಜಿಲ್ಲಾ ಆಡಳಿತ ಯೋಚಿಸಬಹುದಾಗಿದೆ. ಯಾರೋ ಮಾಡಿದ ಸಣ್ಣತಪ್ಪುಗಳು ಮೆಗ್ಗಾನ್ ಮೇಲೆ ಬರ್ತಾಯಿದೆ ಎಂದರು.
ಮಹಿಳೆಯರ ಗರ್ಭಕಂಠದ ಕ್ಯಾನ್ಸರ್ ಗೆ ಲಸಿಕೆ ನೀಡಲಾಗುತ್ತಿದೆ. ಶಾಲೆಗೆ ಹೋಗಿ ಆರೋಗ್ಯ ಅಧಿಕಾರಿಗಳ ನೇತೃತ್ವದಲ್ಲಿ ನಡೆಯಲಾಗುತ್ತಿದೆ. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಕಾಮಗಾರಿ ನಡೆಯುತ್ತಿದೆ. ಕ್ರಿಟಿಕಲ್ ಕೇರ್ ಕ್ಲೀನಿಕ್ ಕಾಮಗಾರಿ ಆರಂಭವಾಗಿದೆ ಎಂದರು.
ಶಿರಸಿ ತಾಳಗುಪ್ಪ ರೈಲ್ವೆಗೆ ಸರ್ವೆ
ಶಿರಸಿ ತಾಳಗುಪ್ಪ ರೈಲ್ವೆಗೆ ಸರ್ವೆ ಆಗ್ತಾಯಿದೆ. ಹಣಕಾಸುವಿದೆ. ಗೂಡ್ಸ್ ರೈಲಿನಲ್ಲಿ ಆರ್ಥಿಕವಾಗಿ ನೋಡಲಾಗುತ್ತಿದೆ. ಆದರೆ ಇಲ್ಲಿ ವಾಣಿಜ್ಯಕ್ಕಿಂತ ಸೇವೆಗೆ ಒತ್ತು. ಬೀರೂರು ಮತ್ತು ಶಿವಮೊಗ್ಗ ನಡುವೆ ಡಬ್ಬಲ್ ಟ್ರ್ಯಾಕ್ ಇಲ್ಲ. ಇದಕ್ಕೆ ರಾಣೇಬೆನ್ನೂರಿಗೆ ಸಂಪರ್ಕವಾಗುತ್ತಿದೆ. ಇದರಿಂದ ಡಬ್ಬಲ್ ಟ್ರ್ಯಾಕ್ ಆಗಬೇಕು. ಇದರಿಂದ ವಂದೇ ಭಾರತ್ ರೈಲು ಡಬ್ಬಲ್ ಟ್ರ್ಯಾಕ್ ಓಡಾಡಲಿದೆ ಎಂದರು.
ಟೆರರಿಸಂಗೆ ತಕ್ಕ ಉತ್ತರ
ಪೆಹಲ್ಗಾಮ್ ಘಟನೆ ನಡೆದು ಒಂದು ವರ್ಷವಾಗಿದೆ. ಭಯೋತ್ಪಾದನೆಯನ್ನ ಹಿಂದಿನಿಂದ ಕ್ಷಮಿಸುತ್ತ ಬಂದ ಪರಿಣಾಮ ಅಟ್ಟಹಾಸ ಮೆರೆದಿತ್ತು. ಪೆಹಲ್ಗಾಮ್ ಗೆ ತಕ್ಕನಾಗಿ ಆಪರೇಷನ್ ಸಿಂಧೂರ್ ನಿಂದ ಭಯೋತ್ಪಾದಕತೆಗೆ ತಕ್ಕ ಉತ್ತರ ನೀಡಲಾಯಿತು. ಖರ್ಗೆಯವರು ಪಿಎಂರನ್ನ ಭಯೋತ್ಪಾದಕ ಎಂದು ಕರೆಯುವ ಮೂಲಕ ಅವರ ಅವರ ಮನಸ್ಥಿತಿಯನ್ನ ಪ್ರದರ್ಶಿಸಿದ್ದಾರೆ ಎಂದರು.
30-bed hospital in the pediatric ward at SIMS
