ಕಿಮ್ಮನೆ ಸವಾಲು ಸ್ವೀಕರಿಸಿದ ಈಶ್ವರಪ್ಪ-Eshwarappa accepts the challenge with Kimnane

 SUDDILIVE || SHIVAMOGGA

ಕಿಮ್ಮನೆ ಸವಾಲು ಸ್ವೀಕರಿಸಿದ ಈಶ್ವರಪ್ಪ-Eshwarappa accepts the challenge with Kimmane

Eshwarappa, accepts


60 ವರ್ಷ ಮಹಿಳಾ ಮೀಸಲಾತಿ ಕಲ್ಪಿಸದ ಕಾಂಗ್ರೆಸ್ ಮೋದಿಜಿಗೂ ಜಾರಿಗೆ ತರಲು ಬಿಡುತ್ತಿಲ್ಲ ಎಂದು ಮಾಜಿ ಡಿಸಿಎಂ ಈಶ್ವರಪ್ಪ ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮಹಿಳೆಯರಿಗೆ ಮೋಸ ಮಾಡಿಕೊಂಡೆ ಬಂದಿದೆ. ಮುಸ್ಲೀಂರಿಗೆ ಮೀಸಲಾತಿಯಿಲ್ಲ ಎನ್ನುವ ಕಾಂಗ್ರೆಸ್ ಮಾತೆತ್ತಿದರೆ ಸಂವಿಧಾನ ಎನ್ನುತ್ತಾರೆ. ಸಂವಿಧಾನ ಪುಸ್ತಕ ಇಟ್ಟುಕೊಂಡು ಓಡಾಡುವ ಅವರಿಗೆ ಧರ್ಮದ ಅಡಿ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂಬುದು ಗೊತ್ತಿಲ್ಲ ಎಂದರು. 

ಡಿಲಿಮಿಟ್ಸ್ ಮತ್ತು ಮೀಸಲಾತಿ ನೀಡಿದ್ದಕ್ಕೆ ವಿರೋಧ ಎನ್ನುವ ಕಾಂಗ್ರೆಸ್ ಜಬರನ್ನ ಎಷ್ಟು ದಿನ ಮೋಸ ಮಾಡುತ್ತಿದ್ದೀರಿ. ಮೊನ್ನೆ ವೋಟಿಂಗ್ ಮಾಡಿದ್ದು ಮಹಿಳ ಮೀಸಲಾತಿ ಬಗ್ಗೆ ಮಾತ್ರ. ಮುಸ್ಲೀಂರನ್ನ ನಂಬಿಕೊಂಡಿದ್ದ ಕಾಂಗ್ರೆಸ್ ದೇಶದಲ್ಲಿ ಮರೆಯಾಗುತ್ತಿದೆ. ಈಗ ಮಹಿಳೆಯರನ್ನ ಎದುರು ಹಾಕಿಕೊಂಡು ಅನುಭವಿಸುತ್ತೀರಿ ಎಂದು ಎಚ್ಚರಿಸಿದರು. 

ಸಚಿವ ದಿನೇಶ್ ಗುಂಡೂರಾವ್ 50% ಸ್ಥಾನ ಹೆಚ್ಚಿಸಿದರೆ ಸ್ವಾಗತ ಎಂದಿದ್ದರು.  ಅವರು ಹೇಳಿದಂಗೆ ಹೆಚ್ಚಿಸಿದರು ಬಿಲ್ ವಿರೋಧ ಮಾಡಿದರು. ಪ್ರಧಾನಿಯವರು ಮತ್ತೊಮ್ಮೆ ಮಹಿಳ ಮೀಸಲಾತಿ ಮಂಡಿಸಬೇಕು ಎಂದರು. 

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಎಲ್ಲಾ ಬಿಜೆಪಿರಿಗೆ ಸವಾಲು ಹಾಕಿದ್ದಾರೆ. ನಾನು ಅವರ ಜೊತೆ ಚರ್ಚಿಸಲು ಸಿದ್ದ ಎಂದಿರುವ ಈಶ್ವರಪ್ಪ, ಮೋದಿ ಮತ್ತು ಆರ್ ಎಸ್ ಎಸ್ ಬಗ್ಗೆ ಹದ್ದು ಮೀರಿ ಮಾತನಾಡಿದ್ದಾರೆ. ಖರಘೆಯವರಿಗೆ ನಾನು ಇಷ್ಟುದಿನ ಗೌರವಕೊಟ್ಟುಕೊಂಡು ಬಂದಿದ್ದೆ. ಈಗ ಮೋದಿಯನ್ನ ಭಯೋತ್ಪಾದಕ ಎಂದು ನಾನು ಹಾಗೆ ಹೇಳಿಲ್ಲ ಎಂದು ಹೇಳಿದರು. ಆದರೆ ಕಿಮ್ಮನೆ ಮೋದಿ ಭಯೋತ್ಪಾದಕ ಎಂದು ಒತ್ತಿ ಹೇಳಿದರು. 

ಆರ್ ಎಸ್ ಎಸ್ ಬಗ್ಗೆ ಟೀಕಿಸುತ್ತಾ ಬಂದವರು ಯಾರೂ ಉದ್ದಾರ ಆಗಿಲ್ಲ. ಲಕ್ಷ ಲಕ್ಷ ಜನ ಬಂದು ಆರ್ ಎಸ್ ಎಸ್ ನ್ನ ಸೇರುತ್ತಿದ್ದಾರೆ. ಅಂತಹ ರಾಷ್ಟ್ರಭಕ್ತ ಸಂಘಟನೆ ಬಗ್ಗೆ ಕಿಮ್ಮನೆ ಮಾತನಾಡುತ್ತಾರೆ ಎಂದರೆ ಏನು ಹೇಳೋಣ. ಸೂರ್ಯನಿಗೆ ಉಗಿದರೆ ಯಾರ ಮುಖಮೇಲೆ ಬೀಳುತ್ತೆ ಅದನ್ನ‌ ಕಾಂಗ್ರೆಸ್  ಕಿಮ್ಮನೆ ಮತ್ತೊಮ್ನೆ ಚಿಂತಿಸಲಿ ಎಂದರು. 

ಪೆಹಲ್ಗಾಮ್ ಘಟನೆ ನಡೆದು ಒಂದು ವರ್ಷ ಕಳೆದಿದೆ. ಪ್ರಧಾನಿ ಮೋದಿ ಆಪರೇಷನ್ ಸಿಂದೂರದ ಮೂಲಕ ಉತ್ತರ ನೀಡಿದರು. ಮತ್ತೊಮ್ಮೆ ಪಾಕ್ ಈ ಬಗ್ಗೆ ಯೋಚಿಸೊಲ್ಲ ಎಂದು ಹೇಳಿದರು. 

ಜನನ ಎ.ಈ.ಕಾಂತೇಶ ಮಾತನಾಡಿ,  ಜಿಲ್ಲಾಧಿಕಾರಿ ಕಚೇರಿಯ ಎದುರಿನ ಆಟದ ಮೈದಾನದ ಬಗ್ಗೆ ಇದುವರೆಗೆ ನ್ಯಾಯಾಲಯಕ್ಕೆ ವರದಿ ನೀಡಿಲ್ಲ. ನ್ಯಾಯಾಲಯ ಸೂಚಿಸಿದರೂ ವರದಿ ನೀಡಿಲ್ಲ. ಗೋವಿಂದಾಪುರದಲ್ಲಿನ ಆಶ್ರಯ ಬಡಾವಣೆ ಬಡವರಿಗೆ ಮನೆ ಹಂಚಿಲ್ಲ. ಈ ಹಿಂದೆ ರಾಷ್ಟ್ದಭಕ್ತರ ಬಳಗ ಮಾರಿ ಜಾತ್ರೆ ಮುಗಿದ ಮೇಲೆ ಹರಾಜು ಹಾಕುವುದಾಗಿ ಹೇಳಿದ್ದರು ಇದುವರೆಗೂ ಮಾಡಿಲ್ಲ. 

ಹಾಗಾಗಿ ಪ್ರತಿ ವಾರ್ಡ್ ನಲ್ಲಿ 10 ಜನರ ಮಹಿಳ ಘಟಕ ರಚಿಸಲಾಗುವುದು. ಮೇ.15 ರ ವರೆಗೆ ಮತ್ತೊಂದು ಆಯುಕ್ತರಿಗೆ  ಗಡವು ನೀಡಲಾಗುವುದು. ಮನೆ ಹಂಚಿಕೆ, ಆಟದ ಮೈದಾನ ಬಗ್ಗೆ ಜಿಲ್ಲಾಡಳಿತದ ತೀರ್ಮಾನ, ವಾಣಿಜ್ಯ ಮಳಿಗೆ ಹಂಚಿಕೆ ಬಗ್ಗೆ ತೀರ್ಮಾನವಾಗದಿದ್ದರೆ ರಾಷ್ಟ್ರಭಕ್ತರ ಬಳಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. 

Eshwarappa accepts the challenge with a smile 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close