SUDDILIVE || BHADRAVATHI
ತೂರುಬಿಲ್ಲೆ, ಇಸ್ಪೀಟ್ ಗೆ ಬೀಳುತ್ತಾ ಬ್ರೇಕ್, ಹಾರುತ್ತಾ ಡ್ರೋಣ್?A catapult, a brake falling into the sand, a drone flying?
ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಅಕ್ರಮಮರಳು ಮತ್ತು ತೂರುಬಿಲ್ಲೆಯಂತಹ ಕಾನೂನು ಬಾಹಿರ ಚಟುವಟಿಕೆ ಎಗ್ಗಿಲ್ಲದೆ ಸಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಹೊಳೆ ಹೊನ್ನೂರು ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳುದಂದೆ ಇಸ್ಪೀಟು ದಂದೆ ಓಸಿ ತೂರೆ ಬಿಲ್ಲೆ ಆಟ .ಬೆಳಗ್ಗೆ 10 ರಿಂದ 12 ಗಂಟೆ ತನಕ ತೂರೆ ಬೆಲೆ ಆಟ ನಡೆದರೆ ಮಧ್ಯಾಹ್ನ 12 ರಿಂದ 4:00 ವರೆಗೂ ಇಸ್ಪೀಟು ಆಟ ನಡೆಯತ್ತದೆ ಎಂದು ಸ್ಥಳೀಯರು ಫೊಟೊ ಮತ್ತು ಮಾಹಿತಿ ಹಂಚಿಕೊಂಡಿದ್ದಾರೆ.
ಮಧ್ಯಾಹ್ನ 4 ರಿಂದ ರಾತ್ರಿ 11:00 ತನಕ ಬಟ್ಟೆ ಪಿಚ್ಚು ನಡೆಯುತ್ತದೆ. ಬಟ್ಟೆ ಪಿಚ್ಚು ಅಂದರೆ ಲಕ್ಷಾಂತರ ರೂಪಾಯಿ ಕೋಟಿಗಟ್ಟಲೆ ಹಣ ಬೇರೆ ಬೇರೆ ಜಿಲ್ಲೆಗಳಿಂದ ಕಾರಿನಲ್ಲಿ ಬಂದು ಈ ಆಟ ಆಡುತ್ತಾರೆ. ಕಂತೆ ಕಂತೆ ಹಣವನ್ನು ಚೆಲ್ಲುತ್ತಾರೆ ಎಂಬುದು ಸ್ಥಳೀಯರ ದೂರಾಗಿದೆ.
ಮಲ್ಲಾಪುರ, ಕಲ್ಯಲಾ, ತಟ್ಟೆಹಳ್ಳಿ ಭಾಗದಲ್ಲಿ ಹಗಲು ರಾತ್ರಿ ಆಟ ನಡೆಯುತ್ತದೆ ಎಂಬುದನ್ನ ಸ್ಥಳೀಯರು ದೂರುತ್ತಾರೆ. ಪೊಲೀಸ್ ಇಲಾಖೆ ಮೌನ ವಹಿಸಿದೆ ಎಂಬುದು ಅವರ ಆಕ್ಷೇಪವಾಗಿದೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿದೆ. ಯಾವುದೇ ದೂರು ನೀಡಿದರು ಕೂಡ ಪ್ರಯೋಜನವಿಲ್ಲ ಹಾಗೂ ಮಾಹಿತಿ ಕೊಟ್ಟರೆ ಗ್ರಾಮಸ್ಥರಿಗೆ ದೂರು ಕೊಟ್ಟೂರಿಗೆ ರಾಜಕೀಯ ಪ್ರಭಾವ ಹಾಗೂ ರೌಡಿಸಂ ಪ್ರಭಾವದಿಂದ ಅವರನ್ನೇ ಟಾರ್ಗೆಟ್ ಮಾಡಲಾಗುತ್ತದೆ ಎಂಬುದನ್ನ ಉದಾಹರಣೆ ಸಮೇತ ಹೇಳುತ್ತಾರೆ.
ಈ ದಂದೆಯನ್ನು ತಡೆಗಟ್ಟುವ ಪೊಲೀಸ್ ಇಲಾಖೆ ಮೌನ ವಹಿಸಿದೆ. ಈ ದಂಧೆಯಲ್ಲಿ ಪ್ರಮುಖ ನಾಯಕರ ಪಾತ್ರದ ಕೇಳು ಬರುತ್ತಿದೆ. ಸಾರ್ವಜನಿಕರ ಈ ಆರೋಪ ಸಹ ಸರಿ ಇರಬಹುದೇನೋ ಎಂದು ಅನಿಸುತ್ತಿದೆ. ಎಸ್ಪಿಯವರು ಹೊಳೆಹೊನ್ನೂರು, ಭದ್ರಾವತಿ, ಗ್ರಾಮಾಂತರ ಭಾಗದಲ್ಲಿ ಡ್ರೋಣ್ ಹಾರಿಸಲಿ ಆರೋಪಗಳು ಸತ್ಯವೋ ಅಥವಾ ಸುಳ್ಳೋ ಎಂಬುದಾಗಿ ಸ್ಥಳೀಯರ ಗಟ್ಟಿ ವಾದವಾಗಿದೆ.
ಇತ್ತೀಚೆಗೆ ವಾಟ್ಸಪ್ ಪೊಲೀಸ್ ವಾಟ್ಸ್ ಪ್ ಗ್ರೂಪ್ ನಲ್ಲಿ ಇಲಾಖೆ ಜಿಲ್ಲೆಯು ಡ್ರೋಣ್ ನಿಗಾವಣೆಯಲ್ಲಿದೆ. ಅಕ್ರಮ ಚಟುವಟಿಕೆಗಳನ್ನ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದರು. ಭದ್ರಾವತಿಯಲ್ಲಿ ಈ ಕ್ರಮ ಜರಗುತ್ತಾ ಕಾದುನೋಡಬೇಕಿದೆ.
A catapult, a brake falling into the sand, a drone flying?
