SUDDILIVE || BHADRAVATHI
ಆತ್ಮಹತ್ಯೆಗೆ ಪ್ರಚೋದಿಸಿ ಸಾವಿಗೆ ಕಾರಣರಾದ ನಾಲ್ವರಿಗೆ ಕಠಿಣ ಶಿಕ್ಷೆ-Four sentenced to stiff punishment for abetting suicide and causing death
ಆತ್ಮಹತ್ಯೆಗೆ ಪ್ರಚೋದನೆ ನೀಡಿ ಸಾವಿಗೆ ಕಾರಣರಾಗಿದ್ದ ನಾಲ್ವರಿಗೆ ಕಠಿಣ ಶಿಕ್ಷೆ, ಎರಡು ಲಕ್ಷ ದಂಡ ವಿಧಿಸಲಾಗಿದೆ ಮೃತ ಕುಟುಂಬಕ್ಕೆ ಒಂದು ಲಕ್ಷ ನೀಡುವಂತೆ ನ್ಯಾಯಾಲಯ ತೀರ್ಪು ನೀಡಿದೆ.
ಭದ್ರಾವತಿ ತಾಲ್ಲೂಕು ಇಟ್ಟಿಗೆಹಳ್ಳಿ ಗ್ರಾಮದ ವಾಸಿ ಬಸವರಾಜ್ (47 ವರ್ಷ) ಈತನು ಮೃತ ಚಂದ್ರಪ್ಪ ಇವರಿಗೆ ತೋಟಕ್ಕೆ ಓಡಾಡುವ ದಾರಿಯ ವಿಚಾರದಲ್ಲಿ ಜಗಳ ಮಾಡಿ ಹಿಂಸೆ ನೀಡುತ್ತಿದ್ದು, ದಿನಾಂಕ 12/02/2021 ರಂದು ಬೆಳಿಗ್ಗೆ ಮೃತ ಚಂದ್ರಪ್ಪರವರು ತಮ್ಮ ಮನೆ ಮುಂದಿನ ಅಂಗಳದಲ್ಲಿ ಇರುವಾಗ ಎ1 ಬಸವರಾಜ್, ಎ2 ಶೃತಿ(29), ಎ3 ಮಂಜಪ್ಪ(56), ಮತ್ತು ಎ4 ಮಧು(32) ರವರೆಲ್ಲರು ಚಂದ್ರಪ್ಪನಿಗೆ (50) ಅವಾಚ್ಯ ಪದಗಳಿಂದ ಬೈದು ಕೈಗಳಿಂದ ಹೊಡೆದು, ಚಂದ್ರಪ್ಪನಿಗೆ ನಿಂದಿಸಿ, ಸಾಯಲು ದುಷ್ಪ್ರೇರಣೆ ನೀಡಿದ್ದು, ಚಂದ್ರಪ್ಪನು ಮನಸ್ಸಿಗೆ ನೋವು ಮಾಡಿಕೊಂಡು ದಿನಾಂಕ : 13/02/2021 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಹೊಳೆಹೊನ್ನುರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಜಿ ಮೋಹನ್ ಪಿಎಸ್ಐರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ. ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಭದ್ರಾವತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ನ ರವರು ದಿನಾಂಕ:22-04-2026 ರಂದು ಎ1 ರಿಂದ ಎ4 ಆರೋಪಿತರಿಗೆ 03 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 2,00,000/- ರೂ ದಂಡ ಹಾಗೂ ಮೃತನ ಹೆಂಡತಿಗೆ 1,00,000/- ರೂ ಪರಿಹಾರ ಕೊಡಲು ಆದೇಶಿಸಿರುತ್ತದೆ.
Four sentenced to stiff punishment for abetting suicide and causing death
