SUDDILIVE || BANGALORE
ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಘೋಷಣೆ- Announcement of Rs 5 lakh each for the families of the deceased
ಹೊಸನಗರದ ಹುಲಿಕಲ್ ಘಾಟಿಯಲ್ಲಿ ರಸ್ತೆ ಹಂಚಿನ ಮಣ್ಣು ಕುಸಿದು ಮೂವರು ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ತಲ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು ಹುಲಿಕಲ್ ಘಾಟಿ ತಿರುಗಿನಲ್ಲಿ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿಯ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಮೃತಪಟ್ಟ ಸುದ್ದಿ ಕೇಳಿ ದುಃಖವಾಯಿತು ಮೃತ ದುರ್ದೈವಿ ಕಾರ್ಮಿಕರ ಆತ್ಮಕ್ಕೆ ಚಿರಶಾಂತಿ ದೊರಕಲಿ ಅವರ ಕುಟುಂಬ ಸದಸ್ಯರಿಗೆ ನೋವು ಬರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ರಾಘವೇಂದ್ರ, ರಾಜು, ಮತ್ತು ಶಬ್ಬೀರ್ ಸಾವನ್ನಪ್ಪಿರುವ ದುರ್ದೈವಿಗಳು, ರಾಘವೇಂದ್ರ ನಗರದ ನಿವಾಸಿಯಾಗಿದ್ದಾರೆ. ರಾಜು ಮತ್ತು ಶಬ್ಬೀರ್ ಹಾವೇರಿ ಜಿಲ್ಲೆಯವರಾಗಿದ್ದಾರೆ. ಶ್ರಮಿಕರ ವರ್ಗಕ್ಕೆ ಸೇರಿದ್ದ ಗಾಯಗೊಂಡವರಾದ ಸುಮಂತ್ ಪರಮೇಶ್ ಅಶೋಕ್ ಮತ್ತು ಸಚಿನ್ ಕುಟುಂಬಕ್ಕೆ ಪರಿಹಾರದ ಘೋಷಣೆಯ ಬಗ್ಗೆ ಸರ್ಕಾರ ಏನು ಕ್ರಮಜರುಗಿಸಲಿದೆ ಕಾದು ನೋಡಬೇಕಿದೆ.
Announcement of Rs 5 lakh each for the families of the deceased

