ಭಂಡ ಸರ್ಕಾರ-ಡಾ.ಸಮೀಕ್ಷ ಸಾವಿನಂತರದ 20 ದಿನಗಳಲ್ಲಿ ಆದ ಬೇಳವಣಿಗೆಗಳೇನು? Bhanda Sarkar-What were the developments in the 20 days after Dr. Sameeksha's death?

 SUDDILIVE || SHIVAMOGGA

ಭಂಡ ಸರ್ಕಾರ-ಡಾ.ಸಮೀಕ್ಷ ಸಾವಿನಂತರದ 20 ದಿನಗಳಲ್ಲಿ ಆದ ಬೇಳವಣಿಗೆಗಳೇನು? Bhanda Sarkar-What were the developments in the 20 days after Dr. Sameeksha's death? 

Bhanda, sarkar
   


ಶಿವಮೊಗ್ಗದಲ್ಲಿ ಪಶುವೈದ್ಯೆ ಡಾ.ಸಮೀಕ್ಷ ರೆಡ್ಡಿ ನೀರು ಕುದುರೆ ದಾಳಿಯಲ್ಲಿ ಮೃತಪಟ್ಟು ಇಂದಿಗೆ 20 ದಿನಗಳಾಗಿವೆ. 20 ದಿನಗಳಲ್ಲಿ ಸರ್ಕಾರದ ಕ್ರಮ ಆಮೆಗತಿಯಲ್ಲಿ ಸಾಗಿವೆ. 

ದಿನಗೂಲಿಯಾಗಿ ನೇಮಕಗೊಂಡಿದ್ದ ಡಾ.ಮುರುಳಿಧರ್ ಅವರನ್ನ ಸೇವೆಯಿಂದ ಬಿಡುಗಡೆಗೊಳಿಸಿದ್ದು ಬಿಟ್ಟರೆ ಯಾವ ಕ್ರಮವೂ ಜರುಗಿಲ್ಲ. ಬಿಡುಗಡೆಗೊಳಿಸಿರುವುದು ಸರ್ಕಾರ ಕಣ್ಣುವರೆಸುವ ತಂತ್ರವಾ ಎಂಬ ಅನುಮಾನವೂ ಹುಟ್ಟುಕೊಂಡಿದೆ. ಕಾರಣ ಇವರನ್ನ ಮತ್ತೆ ಸಕ್ರೆಬೈಲು ಆನೆ ಬಿಡಾರಕ್ಕೆ ಪಶುವೈದ್ಯರಾಗಿ ನೇಮಕ ಮಾಡಿದೆ. 

ಈ ಹಿಂದೆ ಆನೆ ಬಿಡಾರದ ಆನೆ ಬಾಲಣ್ಣನ ಕಾಲು ನೋವಿಗೆ ಇಂಜೆಕ್ಷನ್ ಕೊಟ್ಟು ಆತನ ಪ್ರಾಣಕ್ಕೂ ಕುತ್ತು ಉಂಟು ಮಾಡಿದ್ದ ವೈದ್ಯರು ಎಂಬ ಅಪಕೀರ್ತಿಗೆ ಇದೇ ವೈದ್ಯ ಡಾ.ಮುರುಳಿಯರನ್ನೇ ಗುರಿ ಮಾಡಲಾಗಿತ್ತು. ನಂತರ ಮೈಸೂರಿನಿಂದ ಬಂದ ವೈದ್ಯರ ತಂಡ ಬಾಲಣ್ಣನ ಕಿವಿ ಹರಿದು ಉಳಿಸಿದ ಘಟನೆ ಇನ್ನೂ ಕಣ್ಣುಮುಂದೆಯೇ ಇದೆ. ಇದೇ ಕಾರಣಕ್ಕೆ ಎಂಬುದು ಹೇಳು ಕಷ್ಟವಾದರೂ ಡಾ.ಮುರುಳಿ ರಾಜೀನಾಮೆ ನೀಡಲು ಇದೂ ಒಂದು ಕಾರಣ ಎಂದು ಸಹ ಹೇಳಲಾಗುತ್ತಿದೆ. 

ಒಟ್ಟಿನಲ್ಲಿ ಮಾನಗೆಟ್ಟ ಸರ್ಕಾರ ಒಂದಿಷ್ಟು ನ್ಯಾಯಕೊಡಿಸುವ ಪ್ರಯತ್ನನಾದರೂ ಮಾಡಿದರೆ ಸರ್ಕಾರ ತನ್ನ ಪ್ರಯತ್ನ ಮಾಡಿದೆ ಎಂದುಬಿಡಬಹುದಿತ್ತೇನೋ. ಆದರೆ ಖಾಲಿ ಹೊರಗುತ್ತಿಗೆ ನೌಕರನಾಗಿ ನೇಮಕಗೊಂಡ ವೈದ್ಯ ಅದರಲ್ಲೂ ನವೆಂಬರ್ ನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನ ಮಾಧ್ಯಮಗಳ ಮುಂದೆ ಹೇಳಿದ್ದಕ್ಕೆ ಬುಧವಾರ ಏ.08 ರಂದು ಸೇವೆಯಿಂದ ಬಿಡುಗಡೆ ಮಾಡಿದೆ ಬಿಟ್ಟರೆ ಉಳಿದಿದ್ದೆಲ್ಲಾ ಶೂನ್ಯವೇ..‌.

ಡಾ. ಸಮೀಕ್ಷ ನೀರು ಕುದುರೆಗೆ ಬಲಿಯಾದ ಹಿನ್ನಲೆಯಲ್ಲಿ  ಸಿಸಿಎಫ್ ಹನುಮಂತಪ್ಪ ತನಿಖೆ ನಡೆಸಿ ಈಗಾಗಲೇ ವರದಿಯನ್ನ ಸರ್ಕಾರಕ್ಕೆ ನೀಡಿದ್ದಾರೆ. ವರದಿ ಧೂಳು ಹಿಡಿಯುವುದಷ್ಟೇ ಬಾಕಿಯಿದೆ ಬಿಟ್ಟರೆ ಕ್ರಮ ಶೂನ್ಯವಾಗಿದೆ. ಎಸ್ ಒಪಿಗಳ ಉಲ್ಲಂಘನೆ, ಇಡಿ ಮೇಲೆ ಕ್ರಮ ಜರುಗಿಸುವಂತೆ ಸಂಘಟನೆಗಳು, ಸಾರ್ವಜನಿಕರು ಮಾಧ್ಯಮಗಳು ಬೊಂಬಡಿ ಬಜಾಯಿಸುತ್ತಿದ್ದರು ಕಿವಿಯಿದ್ದರೂ ಕೇಳಿಸಿಕೊಳ್ಳದೆ ಸರ್ಕಾರ ಜಾಣತನವನ್ನ ಪ್ರದರ್ಶಿಸಿದೆ. 

ಇನ್ನೂ ಸಫಾರಿಯಲ್ಲಿ ಬನ್ನೇರುಘಟ್ಟದ ಡಾ.ಆನಂದ್ ಮತ್ತು ಅವರ ತಂಡ ಬಂದು ಇಳಿದಿದೆ. ನೀರುಕುದುರೆಯ ಆರೋಗ್ಯವನ್ನ ತಪಾಸಣೆಗೊಳಪಡಿಸಿದ್ದಾರೆ. ತಾತ್ಕಾಲಿಕವಾಗಿ 450 ಕಾಡು ಪ್ರಾಣಿ ನೋಡಿಕೊಳ್ಳಲು ಇವರೇ ಸಧ್ಯಕ್ಕಿರುವ ವೈದ್ಯರಾಗಿದ್ದಾರೆ. ಇನ್ನು ಇಡಿ ಈ ಪ್ರಕರಣದಿಂದ ಬಜಾವ್ ಆಗಿದ್ದಾರೆ. ಖಾಯಂ ಅಧಿಕಾರಿಗಳು ಯಾರೂ ತಲೆದಂಡವಾಗಿಲ್ಲ. 

Bhanda Sarkar-What were the developments in the 20 days after Dr. Sameeksha's death?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close