ದೇವರಾಜು ಅರಸ್ ಹಿಂದುಳಿದ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕನ ವಿರುದ್ಧ ಲಂಚದ ಪ್ರಕರಣ ಸಾಬೀತು-Bribery case proven against Devaraju Urs, District Manager of Backward Development Corporation

 SUDDILIVE || SHIVAMOGGA

ದೇವರಾಜು ಅರಸ್ ಹಿಂದುಳಿದ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕನ ವಿರುದ್ಧ ಲಂಚದ ಪ್ರಕರಣ ಸಾಬೀತು-Bribery case proven against Devaraju Urs, District Manager of Backward Development Corporation     

Bribery, case


ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ದ ಜಿಲ್ಲಾ ವ್ಯವಸ್ಥಾಪಕರಾಗಿದ್ದ ಆರ್ ಎಸ್ ಪರಮೇಶ್ವರಪ್ಪ ಅವರಿಗೆ ಲಂಚದ ಆರೋಪ ಸಾಬೀತಾಗಿದ್ದು,  ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯ ದಂಡ ಮತ್ತು ಕಾರಾಗೃಹ ವಾಸದ ಶಿಕ್ಷೆ ನೀಡಿ ತೀರ್ಪು ನೀಡಿದೆ.

2015 16ನೇ ಸಾಲಿನಲ್ಲಿ ಸಾಗರ ತಾಲೂಕು ಹೊಸಗುಂದ ಗ್ರಾಮ ನಿವಾಸಿ ಹೆಚ್ಎಸ್ ಜನಾರ್ಧನ್ ಎನ್ನುವರು ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆಬಾವಿ ಗಾಗಿ ಅರ್ಜಿ ಸಲ್ಲಿಸಿದ್ದರು. ಕೊಳವೆಬಾವಿ ಕೊರೆಸಲು ಪಲಾನುಭವಿಯಾಗಿ ಆಯ್ಕೆ ಸಹಾಯ ಆಗಿದ್ದರು ಕೊಳವೆಬಾವಿ ಪೂರಿಸಲು ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಪರಮೇಶ್ವರಪ್ಪ ರವರು 2017ರಲ್ಲಿ 10,000 ಲಂಚದ ಹಣವನ್ನು ತಮ್ಮ ಕಚೇರಿಯಲ್ಲಿ ಪಡೆದುಕೊಳ್ಳುವಾಗ ಲೋಕಾಯುಕ್ತ ಬಲೆಗೆ ಬಿದ್ದಿದರು ಅಧಿಕಾರಿಗಳಾದ ಎ ಚಂದ್ರಪ್ಪ ತನಿಖೆ ಕೈಗೊಂಡು ಆರೋಪಿ ಪರಮೇಶ್ವರಪ್ಪರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯದ ಮುಂದೆ ಲಂಚ ಪಡೆದ ಬಗ್ಗೆ ಆರ್ ಎಸ್ ಪರಮೇಶ್ವರಪ್ಪ ರವರ ವಿರುದ್ಧ ಆರೋಪ ಸಾಬೀತಾಗಿದೆ. ಈ ಹಿನ್ನಲೆಯಲ್ಲಿ ಇಂದು ನಾಯಾಲಯ ಎರಡು ವರ್ಷಗಳ ಕಾರ್ಯಾಗೃಹ ಶಿಕ್ಷೆ ರೂ.40,000 ದಂಡ ವಿಧಿಸಿ ಆದೇಶಿಸಿದೆ ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಎಂ ಡಿ ಸುಂದರ್ ರಾಜ್ ವಾದ ಮಂಡಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close