SUDDILIVE || SHIVAMOGGA
ಸಿಎಂ ಹತಾಶರಾಗಿದ್ದಾರೆ-ಬಿ.ವೈ.ವಿಜೇಂದ್ರ-CM is desperate - B.Y. Vijendra
ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರ ಎರಡರಲ್ಲೂ ಬಿಜೆಪಿ ಐತಿಹಾಸಿಕ ಗೆಲುವಿಗೆ ಸಾಕ್ಷಿಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅವರು ಶಿವಮೊಗ್ಗದಲ್ಲಿ ಮಾಧ್ಯಮಗಳಲ್ಲಿ ಮಾತನಾಡಿ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಅಲ್ಪಂಸಂಖ್ಯಾತರೆ ಕಾಂಗ್ರೆಸ್ ವಿರುದ್ಧ ಮಾತನಾಡುತ್ತಿದ್ದಾರೆ. ಇದು ನಮ್ಮ ಬಿಜೆಪಿ ಅಭ್ಯರ್ಥಿಗೆ ಪ್ಲಸ್ ಪಾಯಿಂಟ್ ಆಗಲಿದೆ.
ಎರಡೂ ಕ್ಷೇತ್ರ ಬಿಜೆಪಿ ಗೆಲ್ಲವ ನಿಶ್ಚಿತವಾಗಿದೆ. ಇದರಿಂದಾಗಿ ಸಿದ್ದರಾಮಯ್ಯ ಹತಾಶೆಯಾದಂತೆ ಕಾಣುತ್ತಿದ್ದಾರೆ. ವಿಜಯಪತಾಕೆ ಬಿಜೆಪಿಗೆ ಗಟ್ಟಿಯಾಗಿದೆ. ಹಾಗಾಗಿ ಬಾಗಲಕೋಟೆಯಲ್ಲಿ
15 ಕ್ಕೂ ಹೆಚ್ಚಸಚಿವರು ಮೊಕ್ಕಂ ಹೂಡಿದ್ದಾರೆ ಎಂದ ಅವರು ಯತ್ನಾಳ್ ಬಾಗಲಕೋಟೆಯಲ್ಲಿ ವೀರಣ್ಣ ಚರಂತಿಮಠ್ ಪರ ಪ್ರಚಾರದಲ್ಲಿರುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಾನು ಈ ಮೊದಲೇ ಪ್ರತಿಕ್ರಿಯಿಸಿದ್ದೆ. ಯಾರೇ ಬಿಜೆಪಿ ಪರ ಪ್ರಚಾರಕ್ಕೆ ಬಂದರೂ ಸ್ವಾಗತ ಎಂದಿರುವುದಾಗಿ ಹೇಳಿದರು.
ಸದನದಲ್ಲಿ ಬಜೆಟ್ ಕುರಿತು ಸಿಎಂ ಭಾಷಣದ ಬಗ್ಗೆಯೂ ಪ್ರತಿಕ್ರಿಯಿಸಿದ ವಿಜೇಂದ್ರ ಸಿಎಂ ಅವರ ಬಜೆಟ್ ನ ಕುರಿತಿನ ಭಾಷಣ ಗಟ್ಟಿಯಿರಲಿಲ್ಲ. ಕಾರಣ ಮುಖ್ಯಮಂತ್ರಿ ಬದಲಾವಣೆಯ ಒತ್ತಡ ವಿರಬಹುದು. ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆಲವು ಕಾಂಗ್ರೆಸ್ ಮೇಲಿನ ದುಷ್ಪರಿಣಾಮವಾದರೆ ಅದು ಅವರ ಆತಂರಿಕ ವಿಷಯ ಎಂದರು.
CM is desperate - B.Y. Vijendra
