SUDDILIVE || SHIVAMOGGA
ಬಸ್ ಪಲ್ಟಿ-ಸಂಸದರು ಮತ್ತು ಡಾ.ಸರ್ಜಿ ಮೆಗ್ಗಾನ್ ಗೆ ಭೇಟಿ-Bus overturned - MPs and Dr. Serji Meggan meet
ಶಿಕಾರಿಪುರದಲ್ಲಿ ವಿಜಯ ಬಸ್ ಪಲ್ಟಿ ಹೊಡೆದು ಗಾಯಗೊಂಡಿರುವ 9 ಜನರನ್ನು ಶಿವಮೊಗ್ಗದ ಮೆಗನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಈ ಎಲ್ಲಾ ಗಾಯಾಳುಗಳನ್ನು ಎಂಪಿ ರಾಘವೇಂದ್ರ ಹಾಗೂ ಎಂಎಲ್‌ಸಿ ಡಾ. ಧನಂಜಯ್ ಸರ್ಜಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಖಾಸಗಿ ಬಸ್ಸಿನ ನಿರ್ವಾಹಕರಾದ ಶಿವಪ್ಪ ಅವರನ್ನು ನೋಡುತ್ತಿದ್ದಂತೆ ಯಾಕರಪ್ಪ ಇಷ್ಟೊಂದು ಸ್ಪೀಡ್ ಆಗಿ ಹೊಡಿತೀರಲ್ಲ ಹಂಪ್ಸ್ ಬೇರೆ ಇದೆ ಹೇಗೆ ಚಲಾಯಿಸಬೇಕು ಗೊತ್ತಾಗೊಲ್ವಾ ಎಂದು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ಈಗಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು. ಈ ವೇಳೆ ಎದ್ದೇಳಲು ಪ್ರಯತ್ನಿಸಿದ ಶಿವಪ್ಪ ಅವರನ್ನು ಮಲಗಲು ತಿಳಿಸಲಾಯಿತು.
ನಂತರ ಮಧ್ಯಮಗಳಿಗೆ ಮಾತನಾಡಿದ ಸಂಸದರು, ಬೆಳಿಗ್ಗೆ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೋಗುವ ಬಸ್ ಬೈಕ್ ಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಹೋಗಿ ಪಲ್ಟಿ ಹೊಡೆದಿದೆ. 25-30 ಜನ ಗಾಯಗೊಂಡಿದ್ದಾರೆ.
ಸರ್ಜಿ ಆಸ್ಪತ್ರೆಯಲ್ಲಿ ಗರ್ಭಿಣಿ ಸೇರಿದಂತೆ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 9 ಜನ ಶಿವಮೊಗ್ಗದ ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾರಿಗೂ ಜೀವಾಪಯವಿಲ್ಲದಿದ್ದರೂ ಗಾಯಗಳಾಗಿವೆ. ಇವರು ಗುಣಮುಖರಾಗುವುದು ಯಾವಾಗ ಗೊತ್ತಿಲ್ಲ ದುಡಿಮೆಯನ್ನಬಿಟ್ಟು ಆಸ್ಪತ್ರೆಯಲ್ಲಿರುವಂತಾಗಿದೆ ಎಲ್ಲರೂ ಬೇಗ ಗುಣಮುಖರಾಗಲಿ ಎಂದು ಆಶಿಸಿದರು.
ನಮ್ಮಿಂದ ಮತ್ತು ವಿಜಯ ಬಸ್ ಸಂಸ್ಥೆಯೊಂದಿಗೆ ಚರ್ಚಿಸಿ ಗಾಯಾಳುಗಳಿಗೆ ಪರಿಹಾರ ನೀಡಲಾಗುವ ಬಗ್ಗೆ ಚರ್ಚಿಸಲಾಗುವುದು ಎಂದರು.
Bus overturned - MPs and Dr. Serji Meggan meet
