SUDDILIVE || SHIVAMOGGA
ಏ.16 ರಂದು ಸೈಕಲ್ ಜಾಥ-Cycle rally on April 16
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನ ಕೈಬಿಡುವ ತನಕ ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆ ಕೈಬಿಡೊದಿಲ್ಲ. ಈ ಹಿನ್ನಲೆಯಲ್ಲಿಏ.16 ರಂದು ಸೈಕಲ್ ಜಾಥ ಹಮ್ಮಿಕೊಂಡಿರುವುದಾಗಿ ಮಾಜಿ ಡಿಸಿಎಂ ಈಶ್ವರಪ್ಪ ಮತ್ತೊಮ್ಮೆ ಗುಡುಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಥಾವನ್ನ ಖ್ಯಾತ ವೈದ್ಯರು ಡಾ.ಶಿವರಾಮ್ ಕೃಷಗಣ, ಪಿ ನಾರಾಯಣ ಬೆಳಗ್ಗೆ ಫ್ರೀಡಂ ಪಾರ್ಕ್ ನಲ್ಲಿ ಉದ್ಘಾಟಿಸಲಿದ್ದಾರೆ ಪ್ರಮುಖರಸ್ತೆಗಳಲ್ಲಿ ಹಾದು ಹೋಗಲಿದೆ ಎಂದರು.
ಕೆಪಿಸಿಎಲ್ ಮಂತ್ರಿಗಳು ಈ ಸಂಸ್ಥೆಯನ್ನ ದುರುಪಯೋಗ ಪಡಿಸಿಕೊಂಡು 10 ಸಾವಿರ ಕೋಟಿ ಲೂಟಿ ಮಾಡುವ ಸಂಚನ್ನ ಮಾಡಿದೆ. ಕೆಪಿಸಿಎಲ್ ಗೆ ಕೇಳಲಾದ 32 ಪ್ರಶ್ನೆಯನ್ನ ಕೇಳಿದಾಗ ಹಾರಿಕೆ ಉತ್ತರ ಕೊಟ್ಟಿದೆ. ಲಾಭ ತರುವ ಯೋಜನೆಯನ್ನ ಜಾರಿಗೆ ತರಲಾಗುತ್ತಿದೆ. ಶಿವಮೊಗ್ಗದ ಎಲ್ಲಾ ನಾಗರೀಕರು ರಾಜ್ಯದ ಮತ್ತು ರಾಷ್ಟ್ರಕ್ಕೆ ಮಾರಕವಾದ ಯೋಜನೆಗೆ ಭಾಗಿಯಾಗುವಂತೆ ಕೋರಿದರು.
ಕೋರ್ಟ್ ಸಹ ಇದನ್ನಗಮನಿಸಲಿದೆ ಜೂ.10 ಕ್ಕೆ ವರದಿ ನೀಡಲು ಹೇಳಿದೆ. ಯೋಜನೆಯನ್ನ ತರದೆ ಇರುವ ನಿಟ್ಟಿನಲ್ಲಿ ನ್ಯಾಯಾಲಯ ತಡೆಹಿಡಿಯುವ ವಿಶ್ವಾಸವಿದೆ.
ನಮ್ಮ ಸಂಘಟನೆಯ ಜೊತೆಗೆ ಅಣ್ಣ ಹಜಾರೆ ಹೋರಾಟ ಸಮಿತಿ, ಸೈಕಲ್ ಕ್ಲಬ್, ಸಾಹಸ ಮತ್ತು ಸಂಸ್ಕೃತಿ ಅಕಾಡಮಿ ತರಣೋದಯ ಘಟಕ ಮೊದಲಾದ ಸಂಸ್ಥೆಗಳು ಭಾಗಿಯಾಗಲಿದೆ ಎಂದರು.
400 ಕಾರು 250 ಬೈಕ್ ಸೈಕಲ್ ಗಳು ಭಾಗಿಯಾಗಲಿವೆ. ಡಿಸಿ ಮುಖಾಂತರ ಕೆಪಿಸಿಎಲ್ ಗೆ ಕೇಳಲಾದ 32 ಪ್ರಶ್ನೆಗಳಲ್ಲಿ ಡಿಪಿಆರ್ ಸಹ ಕೇಳಲಾಗಿತ್ತು. ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಡಿಪಿಆರ್ ನೀಡಿಲ್ಲ. ಹಾಗಾಗಿ ಯೋಜನೆ ಕೈಬಿಡುವ ತನಕ ಹೋರಾಟ ನಡೆಯಲಿದೆ ಎಂದರು.
Cycle rally on April 16
