SUDDILIVE || SAGARA
ಚರಂಡಿಗೆ ಉರುಳಿ ಬಿದ್ದ ಕಾರು-Car falls into drain
ಬಿಹೆಚ್ ರಸ್ತೆಯ ಗಣಪತಿ ಕೆರೆ ಸಮೀಪ ಕಾರೊಂದು ಚಾಲಕನ ನಿಯಂತ್ಚರಣ ತಪ್ಪಿ ಚರಂಡಿಗೆ ಉರುಳಿದ ಘಟನೆ ವರದಿಯಾಗಿದೆ.
ಸಾಗರ ನಗರದ ಹೃದಯಭಾಗವಾದ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಗಣಪತಿ ಕೆರೆ ಸಮೀಪ ನಿನ್ನೆ ಮಧ್ಯಾಹ್ನ ಅಪಘಾತವೊಂದು ಸಂಭವಿಸಿದೆ. ಶಿವಮೊಗ್ಗದಿಂದ ಸಿರ್ಸಿ ಕಡೆಗೆ ಸಂಚರಿಸುತ್ತಿದ್ದ ಕಾರೊಂದು, ರಸ್ತೆ ಮಧ್ಯೆಯಿದ್ದ ವಿದ್ಯುತ್ ಕಂಬವನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ನೇರವಾಗಿ ಚರಂಡಿಗೆ ಉರುಳಿ ಬಿದ್ದಿದೆ.
![]() |
| ಸಂಚಾರಕ್ಕೆ ಅಡ್ಡವಿರುವ ವಿದ್ಯುತ್ ಕಂಬ |
ಅಪಘಾತದಲ್ಲಿ ಅದೃಷ್ಟವಶಾತ್ ಕಾರಿನಲ್ಲಿದ್ದ ಕುಟುಂಬದ ಸದಸ್ಯರಿಗೆ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಬಿಹೆಚ್ ರಸ್ತೆ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, ಗಣಪತಿ ಕೆರೆ ಭಾಗದಲ್ಲಿ ರಸ್ತೆ ವಿಸ್ತರಣೆಯಾಗಿದೆ. ಆದರೆ, ವಿಸ್ತರಣೆಯಾದ ರಸ್ತೆಯ ಮಧ್ಯಭಾಗದಲ್ಲಿರುವ ಹಳೆಯ ವಿದ್ಯುತ್ ಕಂಬಗಳನ್ನು ಇನ್ನೂ ತೆರವುಗೊಳಿಸದಿರುವುದೇ ಇರುವುದು ಈ ಅನಾಹುತಕ್ಕೆ ಮುಖ್ಯ ಕಾರಣವಾಗಿದೆ ಎಂದು ಶಂಕಿಸಲಾಗಿದೆ.
ರಸ್ತೆ ನಯವಾಗಿದೆ ಎಂದು ವೇಗವಾಗಿ ಬರುವ ವಾಹನ ಸವಾರರಿಗೆ ರಸ್ತೆ ಮಧ್ಯದ ಈ ಕಂಬಗಳು ತಕ್ಷಣಕ್ಕೆ ಗೋಚರಿಸುತ್ತಿಲ್ಲ, ಇದು ಸವಾರರಿಗೆ ಮೃತ್ಯುಪಾಶವಾಗಿ ಪರಿಣಮಿಸಿದೆ. ಇದೇ ಸ್ಥಳದಲ್ಲಿ ಈ ಹಿಂದೆಯೂ ಹಲವು ಅಪಘಾತಗಳು ಸಂಭವಿಸಿದ್ದು, ಅಧಿಕಾರಿಗಳ ವಿಳಂಬ ಧೋರಣೆಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Car falls into drain

