SUDDILIVE || SHIVAMOGGA
ಉಲೇಮಾಗಳ ಕ್ಷಮೆ ಕೇಳದಿದ್ದರೆ ಕಾಂಗ್ರೆಸ್ ಕಚೇರಿ ಮುತ್ತಿಗೆ-ವೇದಿಕೆ ಎಚ್ಚರಿಕೆ-Congress office siege-Vedhike warns if Ulemas do not apologize
ಕಾಂಗ್ರೆಸ್ ನಾಯಕರು ಹುಚ್ಚರಾಗಿದ್ದಾರೆ. ಶಾಸಕ ಹೆಚ್ ಸಿ ಬಾಲಕೃಷ್ಣ ಕ್ಷಮೆ ಕೇಳಬೇಕೆಂದು ರಾಜ್ಯ ಅಲ್ಪಸಂಖ್ಯಾತರ ಹಿತರಕ್ಷಣ ವೇದಿಕೆ ಜಿಲ್ಲಾಧ್ಯಕ್ಷ ಮುಜೀಬುಲ್ಲಾ ಆಗ್ರಹಿಸಿದ್ದಾರೆ.
ಅಲ್ಪಸಂಖ್ಯಾತರ ಮತಗಳಿಂದ ಅಧಿಕಾರವನ್ನು ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯಕ್ಕೆ ರಾಜಕೀಯ ಸಮಾನತೆ ನೀಡುವಲ್ಲಿ ವಿಫಲವಾದದ್ದು, ಮುಸ್ಲಿಮರ ರಾಜಕೀಯ ನಾಯಕತ್ವವನ್ನು ಕೊನೆಗಾಣಿಸಲು ಪ್ರಯತ್ನಿಸುತ್ತಿದೆ. ಹಲವಾರು ವರ್ಷಗಳಿಂದ ತಾಳ್ಮೆಯಿಂದ ಇದ್ದ ಮುಸ್ಲಿo ಸಮುದಾಯ ತಮ್ಮ ಹಕ್ಕಿಗಾಗಿ ಧ್ವನಿ ಎತ್ತುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಸಕ H C ಬಾಲಕೃಷ್ಣ ನಿನ್ನೆ ಮಾಧ್ಯಮ ದವರೊಂದಿಗೆ ಮಾತನಾಡುತ್ತಾ ಧರ್ಮಗುರುಗಳು ಕಿಡಿಕಾರಬಾರದು ಮತ್ತು ಅಮಾನತ್ತು ಮಾಡಲಾಗಿದೆ ಅಷ್ಟೇ ಯಾರನ್ನು ಗಲ್ಲಿಗೇರಿಸಿಲ್ಲ ಎಂದು ಉದ್ಧಟತನದಿಂದ ಮಾತನಾಡಿದ್ದಾರೆ. ಕಾಂಗ್ರೇಸ್ ನಾಯಕರ ವರ್ತನೆಯಿಂದ ಕಾಂಗ್ರೆಸ್ಸ್ನವರಿಗೆ ಅಧಿಕಾರದ ಮದದಿಂದ ಹುಚ್ಚುಹಿಡಿದಂತೆ ಕಾಣಿಸುತ್ತಿದೆ ಎಂದು ಅವರು ಗುಡುಗಿದ್ದಾರೆ.
ಉಲೇಮಗಳು ನಮ್ಮ ಸಮುದಾಯದ ಕಿರೀಟ. ಉಲೇಮಗಳಿಗೆ ಸಂಭಂದ ಪಟ್ಟಂತೆ ಯಾರೇ ಅಗೌರವ ತೋರಿದರೂ ಪರಿಣಾಮ ಎದುರಿಸಬೇಕಾಗುತ್ತದೆ.
ತಕ್ಷವೇ ಶಾಸಕ ಬಾಲಕೃಷ್ಣ ಉಲೇಮಗಳ ಕ್ಷಮೆಕೋರಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಹಾಗೂ ಇದೇ ರೀತಿಯ ಬೆಳವಣಿಗೆಗಳು ಕಾಂಗ್ರೆಸ್ಸಿನಿಂದ ಮುಂದುವರೆದಲ್ಲಿ ಕಾಂಗ್ರೇಸ್ ಪಕ್ಷದ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ವೇದಿಕೆ ಎಚ್ಚರಿಸಿದೆ.
Congress office siege-Vedhike warns if Ulemas do not apologize
