ಏ.29 ರಿಂದ ಕೆಲ ರೈಲು ಸಂಚಾರದಲ್ಲಿ ವ್ಯತ್ಯಯ-Some train services will be disrupted from April 29th

SUDDILIVE || SHIVAMOGGA

ಏ.29 ರಿಂದ ಕೆಲ ರೈಲು ಸಂಚಾರದಲ್ಲಿ ವ್ಯತ್ಯಯ-Some train services will be disrupted from April 29th  

Train, services

ರೈಲು ಸಂಖ್ಯೆ 16206 ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 16205 ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 56267 ಅರಸೀಕೆರೆ–ಮೈಸೂರು ಪ್ಯಾಸೆಂಜರ್ ರೈಲುಗಳು 2026 ಏಪ್ರಿಲ್ 29, ಮೇ 4 ಮತ್ತು ಮೇ 6 ರಂದು ರದ್ದುಗೊಳ್ಳಲಿದೆ.

ರೈಲು ಸಂಖ್ಯೆ 16225 ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು 2026 ಏಪ್ರಿಲ್ 29, ಮೇ 4 ಮತ್ತು ಮೇ 6 ರಂದು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಗೊಂಡಿದ್ದು, ಈ ರೈಲು ಅರಸೀಕೆರೆ ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.

ಅದೇ ರೀತಿಯಲ್ಲಿ, ರೈಲು ಸಂಖ್ಯೆ 56266 ಮೈಸೂರು–ಅರಸೀಕೆರೆ ಪ್ಯಾಸೆಂಜರ್ ರೈಲು ಮಾವಿನಕೆರೆ ಮತ್ತು ಅರಸೀಕೆರೆ ನಡುವಿನ ಸೇವೆ ಭಾಗಶಃ ರದ್ದುಗೊಳ್ಳಲಿದ್ದು, 2026 ಏಪ್ರಿಲ್ 29, ಮೇ 4 ಮತ್ತು ಮೇ 6 ರಂದು ಮಾವಿನಕೆರೆ ನಿಲ್ದಾಣದಲ್ಲೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.

ರೈಲು ಸಂಖ್ಯೆ 16515 ಯಶವಂತಪುರ–ಕಾರವಾರ ಎಕ್ಸ್‌ಪ್ರೆಸ್ ರೈಲು 2026 ಏಪ್ರಿಲ್ 29, ಮೇ 4 ಮತ್ತು ಮೇ 6 ರಂದು ಬೆಂಗಳೂರು ವಿಭಾಗದಲ್ಲಿ ಸುಮಾರು 65 ನಿಮಿಷಗಳ ವಿಳಂಬದೊಂದಿಗೆ ಸಂಚರಿಸಲಿದೆ.

Some train services will be disrupted from April 29th  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close