ಕಾಂಗ್ರೆಸ್ ಗೆ ಮಹಿಳೆಯರ ಶಾಪತಟ್ಟಲಿದೆ-ಶಾಸಕ ಚೆನ್ನಿ- Congress will be cursed by women - MLA Chenni

 SUDDILIVE || SHIVAMOGGA

ಕಾಂಗ್ರೆಸ್ ಗೆ ಮಹಿಳೆಯರ ಶಾಪತಟ್ಟಲಿದೆ-ಶಾಸಕ ಚೆನ್ನಿ- Congress will be cursed by women - MLA Chenni   

Congress, MLA

ಮಹಿಳ ಮೀಸಲಾತಿಯನ್ನ ಇಂಡಿಯಾ ಒಕ್ಕೂಟ ವಿರೋಧಿಸಿ ಮೋದಿಯವರ ಕಲ್ಪನೆಗೆ ಏಟು ಬಿದ್ದಿದೆ ಎಂದು ಹೇಳುವ ಮೂಲಕ ಸ್ತ್ರೀಯರ ಉನ್ನತಿಗೆ ಕಡಿವಾಣ ಹಾಕಲು ಹೊರಟಿದೆ ಎಂದು ಶಾಸಕ ಚೆನ್ನಬಸಪ್ಪ ಆರೋಪಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಕಾಂಗ್ರೆಸ್ ಮಹಿಳ ಮೀಸಲಾತಿಯು ಸಂವಿಧಾನಕ್ಕೆ ವಿರೋಧ ಎಂದು ಬಿಂಬಿಸಿತು. ಇದು ಸಂವಿಧಾನಕ್ಕೆ ಚ್ಯುತಿ ತರುವ ಬಿಲ್ ಅಲ್ಲ. ದೇಶವನ್ನ ಧರ್ಮದ ಆಧಾರಿತವಾಗಿ ಹೊಡೆದ ಹಾಗೆ ಬಿಲ್ ನ್ನ ವಿರೋಧ ಮಾಡಲಾಗಿದೆ. ಮಹಿಳ ಬಿಲ್ ಮಾತ್ರ ವಿರೋಧಿಸಿಲ್ಲ. ದೇಶದ ಪೂರಕವಾಗಿ, ಏಕತೆಗೆ ಅನುಗುಣವಾಗಿ ವಿರೋಧಿಸುವುದೆ ಕಾಂಗ್ರೆಸ್ ನ ಸ್ವಭಾವವಾಗಿದೆ. ದೇಶದ ಪೂರಕವಾದ ಯೋಜನೆ ಬಂದರೆ ವಿರೋಧಿಸುವುದೇ ಕಾಂಗ್ರೆಸ್ ನ ಗುರಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ವಕ್ಫ್ ತಿದ್ದುಪಡಿ ಕಾಯ್ದೆ, ತ್ರಿವಳಿ ಕಾಯ್ದೆ, ಮೂರು ಕ್ರಿಮಿನಲ್ ಕಾಯ್ದೆಯನ್ನ 2023 ರಲ್ಲಿ ತಂದಾಗಲೂ ಕಾಂಗ್ರೆಸ್ ವಿರೋಧಿಸಿತ್ತು. ನಾರಿ ವಂದನ ಬಿಲ್ ನ್ನ ವಿರೋಧಿಸಲಾಯಿತು. ಇದೊಂದು ಕೃತ್ಯ ಎನ್ನಬಹುದು ಕಾಂಗ್ರೆಸಿಗರ ಮನಸ್ಥಿತಿಯೂ ಇದರಲ್ಲಿ ಬಿಂಬಿತವಾಗಿದೆ. ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡುವ ವಿಪಕ್ಷಗಳು ವಿದೇಯಕ ತಂದಾಗ ವಿರೋಧ ವ್ಯಕ್ತಪಡಿಸುತ್ತೀರ ಎಂದು ಆಗ್ರಹಿಸಿದರು. 

ಮಹಿಳಾ ಮೀಸಲು ಐತಿಹಾಸಿಕ ಮಸೂದೆಯಾಗಿದೆ. ವಿಪಕ್ಷಗಳು ಯುದ್ಧವನ್ನ ಗೆದ್ದವರ ರೀತಿಯ ಸಂಭ್ರಮಕ್ಕೆ ಜನ ಬುದ್ದಿಕಲಿಸಲಿದ್ದಾರೆ. ಈ ಬಿಲ್ 2|3 ಮೆಜಾರಿಟಿ ಇಲ್ಲವೆಂಬ ಕಾರಣಕ್ಕೆ ಸಂಭ್ರಮಿಸುತ್ತೀರುವ ವಿಪಕ್ಷಗಳು ಇದನ್ನ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದು ಬಿಲ್ ಪಾಸ್ ಮಾಡ್ತೀವಿ ಎಂದು ಸವಾಲು ಎಸೆದರು. 

ಮಹಿಳಾ ಮೀಸಲಾತಿ ಬಿಲ್ ನ್ನ 35-40 ವರ್ಷದ ಹಿಂದಿನ  ಪ್ರಯತ್ನವಾಗಿದೆ. ವಾಜಪೇಯಿ ಸರ್ಕಾರ ವಿದ್ದಾಗ ನಾಲ್ಕು ಬಾರಿ ಮಂಡಿಸಿದರೂ ಜಾರಿ ಮಾಡಲಾಗಲಿಲ್ಲ.‌ ಯುಪಿಎ ಸರ್ಕಾರದಲ್ಲಿ ಒಂದು ಅಥವ ಎರಡು ಬಾರಿ ಮಂಡಿಸಲಾಗಿತ್ತು ಬಿಟ್ಟರೆ ಮತ್ತೆ ಪ್ರಯತ್ನವೇ ನಡೆಯಲಿಲ್ಲ. 2022ರಲ್ಲಿ ಸುಪ್ರೀಂ  ನಿಯಮದಂತೆ ಮಹಿಳಾ ಮೀಸಲಾತಿಯನ್ನ  2023 ರಲ್ಲಿ ಮಂಡಿಸಿ ಅಂಗೀಕರಿಸಲಾಗಿತ್ತು. ಈಗ ವಿಪಕ್ಷಗಳು ಬಿಲ್ ತಿರಸ್ಕರಿಸಿ ನ್ಯಾಯಾಂಗ ನಿಂಧನೆಗೆ ಒಳಗಾಗಿವೆ ಎಂದು ದೂರಿದವು. 

ಬಿಜೆಪಿ ಪಕ್ಷದಲ್ಲಿ 16% ಮಹಿಳೆಯರನ್ನ ಹೊಂದಿದ್ದರೆ ವಿಪಕ್ಷಗಳು 8% ಹೊಂದಿವೆ. 2024 ಲೋಕಸಭಾ ಸದಸ್ಯರಲ್ಲಿ ಆಯ್ಕೆಯಾದಾಗ 14% ಮಹಿಳೆಯರನ್ನ ಹೊಂದಿದ್ದಾರೆ. ಮಹಿಳಾ ಬಿಲ್ ನಲ್ಲೂ ಮುಸ್ಲೀಂರಿಗೂ ಮೀಸಲು ತರುವ ಮಾನಸಿಕತೆಯನ್ನ‌ ಹೊಂದಿದ ಕಾಂಗ್ರೆಸ್ ಬಿಲ್ ನ್ನ ವಿಫಲಗೊಳಿಸುವ ಮೂಲಕ ಎನ್ ಡಿಎ ಸರ್ಕಾರಕ್ಕೆ ಮುಖಭಂಗವಾಗಿದೆ ಎಂದು ಸಂಭ್ರಮಿಸಿದೆ. ನಾವು ಈ ಬಿಲ್ ನ್ನ ಮರು ಜಾರಿ ಮಾಡೇ ಮಾಡುತ್ತೇವೆ ಎಂದರು.

ಕಾಂಗ್ರೆಸ್ ಎಚ್ಚೆತ್ತುಕೊಳ್ಳದಿದ್ದರೆ ಮಹಿಳೆಯರ ಶಾಪಕ್ಕೆ ಒಳಗಾಗುತ್ತೀರಿ. ದುರ್ನಡತೆ ಕೈಬಿಡಬೇಕು. ನೀವು ಚಪ್ಪಾಳೆ ಹೊಡೆದು ಬಿಲ್ ಸ್ವೀಕರಿಸುವ ದಿನ ದೂರವಿಲ್ಲ. ನೆಹರು ಅವರ ಅವಧಿಯಲ್ಲಿ ಇಂದಿರಾ ಗಾಂಧಿ ಅವರ ನಾಲ್ಕು ಮಂತ್ರಿಮಂಡಲದಲ್ಲಿ ಒಬ್ಬ ಮಹಿಳೆಯರಿದ್ದರು. ಮೋದಿಯವರ ಮೂರು ಅವಧಿಯಲ್ಲಿ ರಕ್ಷಣ ಸಚಿವರನ್ನಾಗಿಸಿದ ಕೀರ್ತಿ ಸಲ್ಲುತ್ತದೆ ಎಂದರು. 

Congress will be cursed by women - MLA Chenni

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close