SUDDILIVE || SHIKARIPURA
ಅತಿಥಿ ಉಪಾನ್ಯಾಸಕ ಸೇವೆಯಿಂದ ಬಿಡುಗಡೆ-Released from guest lecturer service
ನಕಲಿ ಪಿ.ಹೆಚ್.ಡಿ ಪ್ರಮಾಣಪತ್ರ ನೀಡಿ ಶಿಕಾರಿಪುರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕ ಮಾದೇಶ ಪ್ರಭು ಅವರನ್ನು ಶುಕ್ರವಾರ ಸೇವೆಯಿಂದ ಬಿಡುಗಡೆ ಮಾಡಲಾಗಿದೆ.
ಮಾದೇಶ ಪ್ರಭು ಅವರು ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕರಾಗಿದ್ದರು. 2015ರಲ್ಲಿ ಉತ್ತರ ಪ್ರದೇಶದ ಝಾನ್ಸಿಯ ಬುಂದೇಲ್‌ಖಂಡ ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್.ಡಿ ಪೂರ್ಣಗೊಳಿಸಿರುವುದಾಗಿ ಪ್ರಮಾಣಪತ್ರ ಸಲ್ಲಿಸಿದ್ದರು. ಪದವಿ ಪ್ರಮಾಣಪತ್ರದ ನೈಜತೆ ಪರಿಶೀಲನೆಗೆ ಸರ್ಕಾರ ಸುತ್ತೋಲೆ ಹೊರಡಿಸಿದ ಕಾರಣಕ್ಕೆ ಕಾಲೇಜು ಮಟ್ಟದ ಪರಿಶೀಲನಾ ಸಮಿತಿಯು ವಿಶ್ವವಿದ್ಯಾಲಯದ ಜತೆ ಸಂವಹನ ನಡೆಸಿತ್ತು. ಅಲ್ಲಿನ ವಿ.ವಿಯಿಂದ ಮಾದೇಶ ಪ್ರಭು ಅವರು ಪಿ.ಹೆಚ್.ಡಿ ಪಡೆದಿಲ್ಲ ಎನ್ನುವುದು ದೃಢಪಟ್ಟಿತು. ಆದ್ದರಿಂದ ಸಭೆ ನಡೆಸಿದ ಸಮಿತಿ, ಅವರನ್ನು ಸೇವೆಯಿಂದ ಬಿಡುಗಡೆ ಮಾಡಿದೆ.
ವಾಣಿಜ್ಯ ವಿಭಾಗದ ಅತಿಥಿ ಉಪನ್ಯಾಸಕರಾಗಿದ್ದ ಮಾದೇಶಪ್ರಭು ಸಲ್ಲಿಸಿರುವ ಪಿಎಚ್.ಡಿ ಪದವಿ ಪ್ರಮಾಣ ಪತ್ರ ನಕಲಿಯಾಗಿದೆ ಎನ್ನುವ ಕಾರಣಕ್ಕೆ ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಚನ್ನೇಶ್ ತಿಳಿಸಿದ್ದಾರೆ.
Released from guest lecturer service
