ನಾಳೆ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂದೆ ವಾಟಾಳ್ ಮಂಜು ನೇತೃತ್ವದಲ್ಲಿ ಧರಣಿ- Dharani led by Vatal Manju in front of the district in-charge minister's office tomorrow

 SUDDILIVE || SHIVAMOGGA

ನಾಳೆ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂದೆ ವಾಟಾಳ್ ಮಂಜು ನೇತೃತ್ವದಲ್ಲಿ ಧರಣಿ- Dharani led by Vatal Manju in front of the district in-charge minister's office tomorrow


Vatal, Manju



ಶಿವಮೊಗ್ಗ ತಾಲ್ಲೂಕಿನ ರಾಮೇನಕೊಪ್ಪ ಗ್ರಾಮದ ನಿವಾಸಿಗಳು & ಕಾರ್ಮಿಕರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ನಗರದ ನೆಹರೂ ರಸ್ತೆಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಕನ್ನಡ ಕಾರ್ಮಿಕ ರಕ್ಷಣ ವೇದಿಕೆಯ ವಾಟಾಳ್ ಮಂಜು ನೇತೃತ್ವದಲ್ಲಿ ನಾಳೆ ಏ.7 ರಂದು ಅಹೋರಾತ್ರಿ ಧರಣಿ ನಡೆಯಲಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ತಾಲ್ಲೂಕಿನ ರಾಮೇನಕೊಪ್ಪ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ವಯಸ್ಸಾದ ವೃದ್ಧರು, ಬಡ ಕಾರ್ಮಿಕರು ಸರ್ಕಾರಿ ಗ್ರಾಮಠಾಣಾ ಜಾಗದಲ್ಲಿ ಸಣ್ಣ ಪುಟ್ಟ ಮನೆಗಳು ಮತ್ತು ಗುಡಿಸಲುಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದು, ಇವರಿಗೆ ನೀರಿನ ಸೌಕರ್ಯ, ವಿದ್ಯುತ್ ಸೌಕರ್ಯ, ರಸ್ತೆ ಸಂಪರ್ಕ ಮುಂತಾದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು. 

ಹಲವು ತಿಂಗಳುಗಳಿಂದ ಹಲವಾರು ಬಾರಿ ರಾಜ್ಯ ಶಿಕ್ಷಣ ಮಂತ್ರಿಗಳು ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರಿಗೆ ನೇರವಾಗಿ ಮನವಿ ಕೊಟ್ಟು, ನಂತರ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ, ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ರವರಿಗೆ ಮನವಿ ನೀಡಿದ್ದರೂ ಇಲ್ಲಿಯವರೆಗೂ ಇಲ್ಲಿನ ನಿವಾಸಿಗಳಿಗೆ ಯಾವುದೇ ರೀತಿಯ ಹಕ್ಕುಪತ್ರ ನೀಡಿರುವುದಿಲ್ಲ ಎಂದು ಆರೋಪಿಸಿದರು. 

ಕೆಲವು ದಿನಗಳ ಹಿಂದೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರನ್ನ ಭೇಟಿ ಮಾಡಿದಾಗ ಅವರು ಅಲ್ಲಿನ ಅಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ. ಆದರೆ, ಇಲ್ಲಿಯವರೆಗೂ ನಮ್ಮ ಕಷ್ಟಗಳಿಗೆ ಸ್ಪಂದಿಸದೇ ಅಧಿಕಾರಿಗಳು ನಿರ್ಲಕ್ಷ್ಯ, ಅಸಡ್ಡೆ ತೋರಿಸಿ ದರ್ಪ ಮೆರೆದಿರುತ್ತಾರೆ. ಆದ್ದರಿಂದ ಏ.7 ರಂದು ನಾಳೆ ಬೆಳಿಗ್ಗೆ 10-00 ಗಂಟೆಗೆ ನಗರದ ನೆಹರು ರಸ್ತೆಯಲ್ಲಿರುವ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರ ಕಛೇರಿಯ ಬಾಗಿಲಲ್ಲಿ ಪ್ರತಿಭಟನೆ, ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದರು. 

Dharani led by Vatal Manju in front of the district in-charge minister's office tomorrow

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close